೧.ಜಗತ್ತಿನ ಉತ್ತಮ ವಿರಹ ಕವಿಯ ಕವನಗಳ ಜೀವಾಳ ಮತ್ತು ನೋವಿನ ರಹಸ್ಯಗಳೆಲ್ಲ ಆತನ ವಿಫಲ ಪ್ರೇಮದ ಗುರುತುಗಳಂತೆ.
೨.ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.
೩.ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.
೪.ಒಂದಷ್ಟು ಕಣ್ಣೀರ ಕತೆಗಳನ್ನ ಹುಡುಕೊಂಡು ಹೋದವರು ಬರಿಗೈಯ್ಯಲ್ಲಿ ವಾಪಾಸಾದರು. ಬಹುಷ್ಯ ನಾಡಿನ ರೈತರ ವಿಳಾಸ ಮರೆತಿದ್ದರು ಅನ್ನಿಸುತ್ತೆ.
೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .
೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.
೭.ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳ ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು
೮.ಅಗಲುವ ಭಯದಿಂದ ಮನೆಯಿಂದ ಹೊರ ಬಂದ ಜೋಡಿಗಳು ರಾತ್ರಿಯಿಡೀ ತಬ್ಬಿಕೊಂಡು ಮಲಗಿದ್ದರೂ ದೇಹಗಳು ಬೆಸೆದುಕೊಳ್ಳಲ್ಲಿಲ್ಲವಂತೆ.
೯.ಅವಳ ನೆನಪಿನಲ್ಲಿ ಒಂದು ಸಾಲಿನಲ್ಲಿ ಕಥೆ ಬರೆಯ ಹೊರಟಾಗಲೆಲ್ಲ ಒಂದು ಕತೆ ಹೊಳೆಯಲಿಲ್ಲ. ಬದಲಾಗಿ ಇವನಿಗೆ ಕತೆಗಳ ಕಣಜಗಳೆ ಸೃಷ್ಟಿಯಾದವು.
೧೦.ನಿನ್ನ ಮನಸ್ಸು ಶೃಂಗಾರ ಬಂಗಾರವೆಂದು ಹೊಗಳಿದ ಗೆಳೆಯನತ್ತ ತಿರುಗಿ ಕೂಡ ನೋಡದ ಹುಡುಗಿ ವಾಸ್ತವಿಕತೆಯ ಒಂದು ಸಾಲಿನ ಮಾತಿಗೆ ತಿರುಗಿ ಮುಗುಳ್ನಕ್ಕಳು.
( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
ಟೂ ನೈಸ್ ಸೋಮೂ…
ವಂಡರ್ ಫುಲ್ ಗುರುಗಳೇ..:)
tumba chennagide
Sakkathagidhe Somu. Please keep up the good work.
Shyam
Masta Maja Maadi…
Ondondu sakhat…
-Shettaru
Chandakkive 🙂 ishtavaaytu.
somu..cute agive….. nice….
inchara
good work…tumba chennagide
ಸಕತ್ ಸೋಮು ಇಂದ ಸಕತ್ ಕತೆಗಳು… 🙂
ಚೆನ್ನಾಗಿವೆ ಸೋಮು 🙂
simply superb………
sakhath agide 🙂
super man all the best sie writing gow poems
ಅಬ್ಬ ….. ಒ೦ದೊ೦ದೂ ಆಣಿಮುತ್ತುಗಳಒತಿವೆ ಸೋಮು…
ಅಬ್ಬ ….. ಒ೦ದೊ೦ದೂ ಆಣಿಮುತ್ತುಗಳ೦ತಿವೆ ಸೋಮು…
navilappa hosadanna yaavaga bariteeri. haledannu nodi nodi saakaagide.
tumda channagide
navilugari huduga antha yake hesaru
haha sakat boss:)
enappa odlikke khushiyagutthe… adbhuta somu…
೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .
೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.
ತುಂಬಾ ಇಷ್ಟವಾದವು..
ಇಂತಿ
ಯಳವತ್ತಿ