ಅವಳ ಬಿರಿದ ಮಲ್ಲಿಗೆ ಎದೆಯ
ಹಾಗೆ ನೋಡದಿರು ಗೆಳೆಯ.
ನೋಯದೇ ಇದ್ದೀತೆ, ಯಾರ ಕಣ್ಣೂ
ಬೀಳದಿರಲೆಂದು ಲಟಿಗೆ ತೆಗೆದು
ಮಗಳ ಹೊರಗೆ ಕಳುಹಿಸಿದ ತಾಯ ಹೃದಯ.
ನೋಡ ನೋಡುತ್ತಲೆ ಅವಳ
ತುಟಿಯ ಸವಿಯುವ ನಿನ್ನ
ದುರಾಸೆಯ ಆಚೆ ಚೆಲ್ಲು,
ಅವಳದೆಲ್ಲವ ಸವಿಯುವ ಅವಳ
ರಾಜಕುಮಾರನಿದ್ದರೂ ಇರಬಹುದು
ದೂರ ನಿಲ್ಲು.
ಕನಸಿನಲ್ಲಿಯೇ ಮೈಬಳಸಿ
ತೋಳ್ಬಳಸಿ ಅವಳದೆಲ್ಲವ
ಪಡೆದ ಕನಸು ಕಾಣಬೇಕೇ?
ಇನ್ನು ಚಿಕ್ಕ ಹುಡುಗಿ ಮಲ್ಲಿಗೆಯಂತ ಕೂಸು
ನಿಮ್ಮಂತವರ ವಿಕೃತವ ನೋಡಬೇಕೆ?
ಕೈಮುಗಿವೆ ದಯಮಾಡಿ
ಹಾಕಿಕೊಳ್ಳಿ ನಿಮ್ಮಾಸೆಗಳಿಗೆಲ್ಲ ಬೇಲಿ.
ನನಗದು ಅನ್ವಯಿಸುವುದಿಲ್ಲ
ನಾನಂತೂ ಹುಟ್ಟು ಪೋಲಿ.
ಪೋಲಿ ಆಗಕ್ಕೂ ಆಸೇನ ಹಿಡಿದಿಟ್ಕೊಳೋಕೂ ಏನು ಸಂಬಂಧ?
gurugale ,
nimma stree abhimanigalella nimmanna innumunde anumanadalle nodtare 🙂
Tumbaa chennagide kavana, praasabaddavaagide, nimma politana ishtavaayitu
ಕವನ ಚೆನ್ನಾಗಿದೆ ಸೋಮು, ಇಷ್ಟವಾಯ್ತು
nanna blog ge bheTi kodi
http://www.nirpars.blogspot.com/
🙂
soma,
sakkattaagide kano…
late aagi aadru, sooperraagi blog ge bandideeya!!:)
ಸೋಮ ಅವ್ರೆ ತುಂಬಾ ಚೆನ್ನಾಗಿದೆ ಪೋಲಿತನ. ಹಾಗೇ ತುಂಬ ದಿನದ ಮೇಲೆ ಬ್ರೌಸ್ ಮಾಡ್ತಾ ನವಿಲಿಗರಿಗೆ ಬಂದೆ, ನಿಮ್ಮ ಬರಹ, ಅದರಲ್ಲೂ ಕಲ್ಪನೆ ತುಂಬ ಇಷ್ಟ ಆಯಿತು. ಒಂದೇ ಸಮನೆ ಕೊತ್ಕಂಡು ಎಲ್ಲ ಪೋಸ್ಟ್ ಓದಿ ಮುಗುಸ್ದೆ. ತುಂಬ ಚೆನ್ನಾಗಿ ಬರಿತಿರ, ಹೀಗೆ ಬರಿತಿರಿ ಕಾಯ್ತಾ ಇರ್ತೀನಿ.
– ಕಾರ್ತಿಕ್ ಉಡುಪ
Good one somu….ninna neenu baidukolluttale ellakkoo liecence togambidteeya 🙂
🙂 ಮಸ್ತಾಗಿದೆ ಕಣ್ರೀ!! ಕೊನೆಯ ನಾಲ್ಕು ಸಾಲುಗಳಂತೂ ಸೂಪರ್ ಶಾಕ್ ಕೊಟ್ಟವು!!! ವ್ಯಂಗ್ಯವಾಗಿರೋ ಒಂಥರಾ anticlimax ಅನ್ನು ಸೂಪರ್ ಆಗಿ ಕೊಟ್ಟಿದ್ದೀರ!!
ನವಿಲುಗರಿ ಹುಡುಗನೇ,
ತುಂಬಾ ಚೆನ್ನಾಗಿ ಬರಿತೀರ. ನಿಮ್ಮ ಒಂದೆರಡು ಸಾಲಿನ ಕಥೆಗಳಂತೂ ಮನ ಮುಟ್ಟುತ್ತೆ.. ಎಲ್ಲ ಲೇಖನಗಳನ್ನು ಡೌನ್ಲೋಡ್ ಮಾಡಿ ಓದಿ ಮುಗಿಸಿದ್ದೇನೆ. ಸೂಪರ್!
channagilla. kathe na summane paragraph tara hakideeya.
ನವಿಲುಗರಿ ಅವರೇ ನಿಮ್ಮ ಈ ಪೋಲಿ ಕವನ ತುಂಬ ಚೆನ್ನಾಗಿದೆ
ಜಾನಿ
ಎದೆ ಬಡಿತವ ಕೇಳಲೆಂದು ಎದೆ ಮುಟ್ಟಿದ ಗೆಳೆಯ
ಮನವ ತೋರಿಸೆಲೆಂದು ತೊಡೆ ಸವರಿದ ಗೆಳತಿ