ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು

9 Oct

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು. ಇಲ್ಲಿ ನಿನ್ನ ಸರಿ ತಪ್ಪುಗಳ ಲೆಕ್ಕ ಸಿಗುತ್ತಿಲ್ಲ. ಕೇವಲ ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ತಾಳ್ಮೆ ಸಂಯಮ? ಪಡೆದ ಮುತ್ತು? ತೆಗೆದುಕೊಂಡ ಮುತ್ತು? ಪರಸ್ಪರ ತಿನಿಸುಕೊಂಡ ತುತ್ತುಗಳು? ಇಬ್ಬರೆ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು? ಆಡಿಕೊಂಡ ಅಪ್ಪ ಅಮ್ಮ ಆಟ? ಹೇಳು ಇದ್ಯಾವುದೂ
ನಿನಗೆ ನೆನಪಾಗುತ್ತಿಲ್ಲವ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇದೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ. ನಿನ್ನ ವಿನಾಕಾರಣ
ಪ್ರೀತಿಸಿದವನು ನಾನು. ಕಾರಣವಿಲ್ಲದ ದೂರ ಹೋಗುತ್ತಿರುವವಳು ನೀನು. ಹೇಳು ಹೋಗು ಕಾರಣ ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ ಎಂದು ದೇವರ ಮುಂದೆ ಕೈಜೋಡಿಸಿ ನಿಂತಿರುವ ನಾನು. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಪ್ರೀತಿಗೆ ಜಯವಾಗಲಿ bye.
ಕ್ಷಮಿಸು ಗುಡ್ bye..!

ನವಿಲೂರಿನ ನತದೃಷ್ಟ

Advertisements

11 Responses to “ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು”

 1. ಮೌನಿ October 9, 2009 at 5:56 am #

  ….

 2. mallige October 9, 2009 at 9:11 am #

  navilanna, nimage ‘FOTHER OF LOVE LETTER’ anta birudu koduttiddene. dayavittu swikarisi…

 3. sharanu hullur October 9, 2009 at 9:18 am #

  ayyayoooo, poli somuge anta dodda birudu bedari… avana heart channagill.
  ‘poli somu’ birudu sakku.

 4. Gurumurthy October 9, 2009 at 11:28 am #

  ನಿಜಕ್ಕೂ ಬ್ಲಾಗ್ ನ ಹೆಸರಿಗೆ ತಕ್ಕ ಹಾಗೆ ಬರೆಯುತ್ತಿದ್ದೀರಿ,
  ಅಕ್ಷರಗಳನ್ನು ಕಣ್ಣಿರಿನಿಂದ ತೊಳೆದ ಹಾಗೆ ಇದೆ
  ಒಳ್ಳೆಯ ಬರಹ

 5. Priya October 14, 2009 at 10:21 am #

  Tumba chanagi bardedera. Madida tappige kshme erali.

 6. Priya October 20, 2009 at 5:34 am #

  “ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.”
  ಈ ಸಾಲು ತುಂಬಾ ಚನ್ನಾಗಿದೆ. ಇದನ್ನು ಓದಿ ಏನೋ ಒಂಥರಾ ಫೀಲ್ ಆಯಿತು.
  ನಿಮ್ಮ ಮುಂದಿನ articleಗಾಗಿ ಕಾಯಿತಿರುತ್ತೆನೆ.

 7. Ram October 29, 2009 at 7:29 am #

  Nija helu somu yaru ah hudugi….?

  superb letter…!!!

 8. Manju November 23, 2009 at 9:22 am #

  What can i say ??????
  Top, superb and excellent…

 9. Anil March 16, 2010 at 7:10 pm #

  Thumba chennagide geleya….

 10. Wasuki April 12, 2010 at 3:51 am #

  ನಲ್ಮೆಯ ನವಿಲುಗರಿ….

  ನಿಮ್ಮ ಈ ಬರಹ ಓದಿ, ನಿಮಗೆ ಈ ರೀಪ್ಲೈ ಬರಿಯೋವಾಗ..ಒಂದು ಕ್ಷಣ.. ಮುಂಗೈ ಮೇಲೆ ಕಣ್ಣೀರ ಹನಿಗಳು ಬಿದ್ದಾಗಲೇ, ಮರಳಿ ವಾಸ್ತವಕ್ಕ ಬಂದೆ.

  ನಿಜಾ..ಕೆಲವೊಮ್ಮೆ ಅರ್ಥವಿಲ್ಲದ ಸ್ವಾಭಿಮಾನಕ್ಕೊಸ್ಕರ ಬೇಕು ಅಂತಾನೇ ಮೌನಿಯಾಗೊದು, ವಿನಾಕಾರಣ ಮಾತುಬಿಡೋದು, ಮುಂದೆನೇ ಇದ್ರೂ ತಿರಸ್ಕರಿಸೋದು.. ತುಂಬಾನೇ ಸಂಕಟ ಕೊಡುತ್ತೆ.

  ಬರಹ ತುಂಬಾ ಚೆನ್ನಾಗಿದೆ….ಮುಂದ್ವರ್ಸಿ.

 11. ದೀಪಕ್ April 22, 2010 at 1:02 pm #

  ಪ್ರೀತಿಯ ನವಿಲುಗರಿ,

  ನಿಮ್ಮ ಈ ಬರಹ ಓದಿ ತುಂಬ ಖುಷಿ ಆಯಿತು…
  “ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.”
  ಈ ಸಾಲು ಅಂತು ತುಂಬ ಚೆನ್ನಾಗಿ ಬರೆದಿದ್ದೀರ….ನಿಮ್ಮ ಬರಹ ಇನ್ನು ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸುವ ನಿಮ್ಮ ಅಭಿಮಾನಿ….:)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: