ಕವಿತೆ ಕಳೆದು ಹೋಗಿದ

9 ನವೆಂ

ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.

ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.

ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.

ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.

ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.

ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.

ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

Advertisements

13 Responses to “ಕವಿತೆ ಕಳೆದು ಹೋಗಿದ”

  1. paartha ನವೆಂಬರ್ 9, 2009 at 2:43 ಅಪರಾಹ್ನ #

    ಯಾಕೋ ಗೊತ್ತಿಲ್ಲ .. ಓದಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ ..
    ಪಾರ್ಥ

  2. Gurumurthy ನವೆಂಬರ್ 10, 2009 at 11:26 ಫೂರ್ವಾಹ್ನ #

    ತುಂಬಾ ಚಂದವಾಗಿ ಬರೆದಿದ್ದಿರಾ, ಭಾವನೆ ತುಂಬಿದೆ
    ಕಳೆದ ಕವಿತೆ ಬೇಗ ಸಿಗಲಿ

  3. ರಂಜಿತ್ ನವೆಂಬರ್ 10, 2009 at 4:14 ಅಪರಾಹ್ನ #

    ಅಳಬ್ಯಾಡ.. ನಿಂಗೆ “ಕವಿತಾ” ಸಿಕ್ಕೇ ಸಿಗ್ತಾಳೆ..;-)

  4. ಶರಶ್ಚಂದ್ರ ಕಲ್ಮನೆ ನವೆಂಬರ್ 11, 2009 at 12:43 ಅಪರಾಹ್ನ #

    ಹೇಳಿದೀನಿ, ಕವಿತಾ ಸಿಗ್ತಾಳಂತೆ ನಾಳೆ ನಾಡಿದ್ದಲ್ಲಿ… ಕವಿತಾ ಆಗಿಲ್ಲ ಅಂದ್ರೆ ಕವನ ಅಂತೂ ಖಂಡಿತ ಸಿಗ್ತಾಳಂತೆ ಕಣಪ್ಪ… ನೀನು ಕವಿತೆ ಹುಡುಕ್ತ ಇದ್ದೀಯ.. ನಾನು ನಿನ್ನ ಹುಡುಕ್ತ ಇದೀನಿ…

    ತುಂಬಾ ಚಂದದ ಕವಿತೆ ಕಣೋ ಸೋಮು… ಭಾವ ತುಂಬಿ ಬರ್ದಿದೀಯ..

  5. preethi ನವೆಂಬರ್ 13, 2009 at 9:24 ಫೂರ್ವಾಹ್ನ #

    ellelli dash haakbekoonta tilida nimma kavite chennagide

  6. Vikram B K ನವೆಂಬರ್ 14, 2009 at 5:57 ಅಪರಾಹ್ನ #

    naalkane charana bahala channagide……
    “kelave keluvu…” KSHANAvu, edee nimma badukannu KSANIKA maadida nimma kavanada “MAAYE”, nijavaagi nanage nibberagagiside….

    i wish you all the best and i am looking forward to read your such poems.

  7. mounaveena ನವೆಂಬರ್ 27, 2009 at 4:06 ಅಪರಾಹ್ನ #

    ದೂರಾಗುವ ಮಾತು ನೀನಾಡಿದ
    ಕೂಡಲೇ ನಾನು ನಿನ್ನ ಕಾಲಿಗೊರಗಿ
    ———————-
    ———————-
    ಆ ಕವಿತೆ ಕಳೆದು ಹೋಗಿದೆ
    ಬದುಕು ಮುಂದುವರಿಯಬೇಕಿದೆ
    ಕವಿತೆ ಬೇಕಿದೆ.

    thumba ishtavaada saalu…:)
    nijjaaaaa…. thumba chanda ide soma….

  8. praveen chandra ಡಿಸೆಂಬರ್ 13, 2009 at 10:41 ಫೂರ್ವಾಹ್ನ #

    super writing

  9. madhu ಡಿಸೆಂಬರ್ 26, 2009 at 1:19 ಅಪರಾಹ್ನ #

    i lost my poem too……….

    waiting to write make a sweet poem (Madhu Kavitha)

  10. Vardan ಜನವರಿ 27, 2010 at 4:35 ಅಪರಾಹ್ನ #

    soma i lost my poem also… some how ive to write again

  11. Annu ಫೆಬ್ರವರಿ 9, 2010 at 4:35 ಅಪರಾಹ್ನ #

    kavithena kaledukondorige manufacture agiro kavithe idu odoke gatti manasu beku artha madkolloru alade iroke agalveno anisthu naanu kuda lite aagi athbitte

  12. shilpa ಮಾರ್ಚ್ 1, 2010 at 8:07 ಫೂರ್ವಾಹ್ನ #

    wonderful poem with lot of feelings . . . lost is lost don’tthink about that ,hope for new wonderful things in life. . .

  13. Arun Naibhi ಮಾರ್ಚ್ 19, 2010 at 11:46 ಫೂರ್ವಾಹ್ನ #

    ವಾವ್… ಖಾಲಿ ಪದಗಳಿಗೆ ಹೀಗೂ ಜೀವ ಬರತ್ತಾ?
    ತುಂಬಾ ಇಷ್ಟ ಆಯಿತು …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: