ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸ್ಕೊಂಡೆ.

18 ನವೆಂ

ಸೂರಜ್ ಎಂಬ ಗೆಳೆಯನಿಗೆ

ನಾವಿಬ್ಬರೂ ಪ್ರೀತಿಯಿಂದ, ಅಷ್ಟೇ ಮಮತೆಯಿಂದ, ಅಷ್ಟೇ ಸಂಯಮದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ ನಾನು ನಿನಗೆ ಹೇಳದೆ ಕೇಳದೇ ಹೊರನಡೆದ ನನ್ನ ತಪ್ಪನ್ನ ಮನ್ನಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ ಘೋರಿ ಕಟ್ಟಿದ ನನ್ನ ಅಸಹಾಯಕತೆಯನ್ನ ಮನ್ನಿಸಿಬಿಡು. ನಿನ್ನ ಜೊತೆ ಕೊನೆಯವರೆಗೂ ಬರಲಾರದ ಈ ಹೆಜ್ಜೆಗಳ ತಪ್ಪನ್ನ ಮತ್ತೊಮ್ಮೆ ಮನ್ನಿಸಿಬಿಡು. ನಿನಗಿಟ್ಟ ಸಾವಿರಾರು ಆಣೆ ಪ್ರಮಾಣಗಳನ್ನ ಒಂದೇ ಸಲ ಸುಳ್ಳಾಗಿಸಿದ ಈ ಗೆಳತಿಯನ್ನ ಮತ್ತೊಮ್ಮೆ ಮನ್ನಿಸಿಬಿಡು. ಪ್ರಪಂಚದಲ್ಲಿರುವ ಎಲ್ಲ ಪ್ರೇಮಕಥೆಗಳನ್ನ ನಿನ್ನ ಭುಜಕ್ಕೊರಗಿ ಓದಿ ಹೇಳುತ್ತಾ, ಕೊನೆಗೆ ನಮ್ಮ ಪಾಲಿನ ಪ್ರೇಮದ ಪುಸ್ತಕದಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆಯದೇ ಎದ್ದು ಹೊರಟು ಬಂದ ಈ ನಿನ್ನ ಹುಡುಗಿಯನ್ನ ಕೊನೆಯ ಸಲ ಕ್ಷಮಿಸಿಬಿಡೋ ಪ್ಲೀಸ್.

ನಿನ್ನ ಕುರಿತಾಗಿ ಅದೆಷ್ಟು ಕನಸುಗಳನ್ನ ಕಂಡಿದ್ದೆನೋ ಕಣೊ. ಹಾಳಾದ್ದು ಕೊನೆಗೂ ಒಂದೂ ನೆಪಮಾತ್ರಕ್ಕಾದರೂ ನನಸಾಗಲಿಲ್ಲ. ಅಷ್ಟು ಕನಸುಗಳ ಮೇಲೆ ನೆಪ ಮಾತ್ರಕ್ಕಾದರೂ ಅಷ್ಟೊಂದು ದೇವರುಗಳ ಒಂದೇ ಒಂದು ಆಶೀರ್ವಾದ ಬೀಳಲಿಲ್ಲ. ಬೇಡಿಕೊಂಡ ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸುತ್ತಿದ್ದೆ, ನಮಗೆ ಹುಟ್ಟಲಿರುವ ಮಗುವ ಹೆಸರ ಇಡೋದಕ್ಕೆ ನಿನ್ನ ಜೊತೆ ಜಗಳಕ್ಕೆ ಬೀಳುತ್ತಿದ್ದೆ, ಸುಮ್ಮನೆ ಮುನಿಸಿಕೊಳ್ಳುತ್ತಿದ್ದೆ, ನಾನೆ ಸ್ಸಾರಿ ಕೇಳುತ್ತಿದ್ದೆ. ಎಲ್ಲಾ ಕನಸು ಕಣೊ. ಇದೆಲ್ಲ ನೋಡಿದ್ರೆ ಏನ್ ಅನ್ಸುತ್ತೆ ಗೊತ್ತಾ? ಪ್ರಪಂಚದ ಅತ್ಯಂತ ದುರದೃಷ್ಟ ಪ್ರೇಮಿಗಳಲ್ಲಿ ನಾವೆ ಮೊದಲ ಸಾಲಿನಲ್ಲಿ ನಿಲ್ಲೋರು ಅಲ್ವೇನೊ?

ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂತವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂತ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೇ ಬರಿ ಕೈ ಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದೆ ಹೆಜ್ಜೆಯಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೋಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಅಂದ್ಕೊಂಡಿರಲಿಲ್ಲ. ನನ್ನ ಮುಂದಿದ್ದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನ ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೆ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್ ನೀನು ನನ್ನ ಪ್ರೀತಿಸಿದ್ದು ನಿಜವೇ ಆದರೇ ನನ್ನನ್ನ ಕೊನೆಯ ಬಾರಿಗೆ ಕ್ಷಮಿಸಿ ಬಿಡು.

ನಿನ್ನ ಪೂಜಿತ

Advertisements

10 Responses to “ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸ್ಕೊಂಡೆ.”

 1. Gurumurthy ನವೆಂಬರ್ 18, 2009 at 11:17 ಫೂರ್ವಾಹ್ನ #

  ತುಂಬಾ ಭಾವನಾತ್ಮಕವಾಗಿದೆ ಪತ್ರ
  ಶಬ್ದಗಳ ಪ್ರಯೋಗ ಸೂಪರ್

 2. Ram ನವೆಂಬರ್ 26, 2009 at 10:04 ಫೂರ್ವಾಹ್ನ #

  wa wa wa………

  thank u very much somu..

 3. preethi ನವೆಂಬರ್ 27, 2009 at 5:04 ಫೂರ್ವಾಹ್ನ #

  somu, sodaacheetiya haage kaanistide.

 4. kavita shanay ನವೆಂಬರ್ 29, 2009 at 4:44 ಅಪರಾಹ್ನ #

  tumba dina aadmele nimblog ge bande.. mosa aaglilla.. howdu yaaradu poojita? iden real kathe naa?

 5. kavana hegde ನವೆಂಬರ್ 29, 2009 at 4:45 ಅಪರಾಹ್ನ #

  ಮುದ್ದಿನ ಮಗಳು ಅನ್ನಿಸಿಕೊಂಡರೂ ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೆ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್ ನೀನು ನನ್ನ ಪ್ರೀತಿಸಿದ್ದು ನಿಜವೇ ಆದರೇ ನನ್ನನ್ನ ಕೊನೆಯ ಬಾರಿಗೆ ಕ್ಷಮಿಸಿ ಬಿಡು.

  idu ontara ishta aaytu

 6. Jyothi ಡಿಸೆಂಬರ್ 2, 2009 at 8:37 ಅಪರಾಹ್ನ #

  Idu nijavada sangathino athava bari katheno gottilla aadre ondu vele nijane aagidre…Pujitha… preetisi, nadu neeralli ky bittu hogorna kshamisodu ashtu sulabha alla…naanu kuda ondu sentimental hudugine. naanu ishta patta huduganige ide tinglu maduve agtide…jaathi, kula anta nirdakshinyavaagi satre saayi anta helde kelde maneyavra maatige bele kottu nanna bit hoda avna kshamisi chennagiru anta haraisbeko, hogu ondu hennina kanneerina shaapa tattade bidalla anta nindisbeko gottagtilla… tumba andre tumbane novagtide…naaniga ondu jeevantha hena aghogidini…novu kittu tinta ide…ishtella naditidru enu madok agde asahayakavagi tale tale chechkondu golidodu bittu innenu ulidilla.
  saadhya adre, iglu samaya minchilla andre punaha neenu preetisidava hatra hogu…plzzzzz

 7. guru ಡಿಸೆಂಬರ್ 5, 2009 at 12:51 ಅಪರಾಹ್ನ #

  lovely!!!!

 8. bhumi ಜನವರಿ 5, 2010 at 1:49 ಅಪರಾಹ್ನ #

  ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂತ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೇ ಬರಿ ಕೈ ಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ.

  adhestu nijavada mathu….naavu hudugiyare ege ansatte……

 9. sandeep ಜನವರಿ 24, 2010 at 1:52 ಅಪರಾಹ್ನ #

  ide nanna modallaa kannada da blog vekshani and ide koneyaa nanna mana gedda blog ansuti….marvellous

 10. Annu ಫೆಬ್ರವರಿ 6, 2010 at 5:39 ಅಪರಾಹ್ನ #

  hiee poojita nice words infact last stanza thumbane artha suchisathe 1.jeevana andre hege antha 2.prithi enthadu 3 ninu sentimental antha.. e muru vishayagalalle ninge uthara sigathe yochisi ondu nirdharakke baa…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: