ಹೆಸರಿನ ಹಂಗಿಲ್ಲದ ಹನಿಗಳು

30 ಡಿಸೆ

ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Advertisements

23 Responses to “ಹೆಸರಿನ ಹಂಗಿಲ್ಲದ ಹನಿಗಳು”

  1. ಶೆಟ್ಟರು (Shettaru) ಡಿಸೆಂಬರ್ 30, 2009 at 1:07 ಅಪರಾಹ್ನ #

    Too Good… Somanna

    -Shettaru

  2. ಅನಾಮಿಕ ಡಿಸೆಂಬರ್ 30, 2009 at 8:00 ಅಪರಾಹ್ನ #

    ಭಾವದ ಬಿಂದುಗಳಿಗೆ
    ಹೆಸರಿನ ಹಂಗೇಕೆ……..
    ಎಲ್ಲ ತೊರೆದವನಿಗೆ
    ನೋವಿನ ಗುಂಗೇಕೆ……..
    ಕವಿಯಾಗಲು ಹೊರಟವನಿಗೆ
    ಭಾವಗಳ ಗಂಟು………….
    ಹೂವಂತ ಮನಸಿರಲು
    ಜೇನೊಡನೆ ನಂಟು.

    – ಸತೀಶ್ ನಾಯ್ಕ್.
    sn3281@gmail.com

  3. Sathish Naik ಡಿಸೆಂಬರ್ 30, 2009 at 8:04 ಅಪರಾಹ್ನ #

    Very nice Somu sir.

  4. Gurumurthy ಜನವರಿ 4, 2010 at 3:16 ಅಪರಾಹ್ನ #

    wow, very nice, touching

  5. bhumi ಜನವರಿ 5, 2010 at 1:56 ಅಪರಾಹ್ನ #

    ಅವನಿಗೆ ಕಾಯುತ್ತಿದ್ದ ಅವಳ
    ನೆತ್ತಿಯ ಮೇಲೆ ದಶಕಗಳೆ
    ಉರುಳಿ ತೆರಳಿ ಹೋಗಿದ್ದರೂ,
    ಅವಳ ಎದೆಯ ಒಳಗೆ ಈಗಲೂ
    ಅವನ ಪ್ರೀತಿಯ ಎರಡು ಸಾಲಿನ
    ಕವಿತೆಳು ಜೀವ ತಳೆಯುತ್ತಲೇ ಇವೆ.

    matte matte odhiyu arthavagada saalugalu……sathya matte odhthane idini……

  6. ಅನಿಕೇತನ ಸುನಿಲ್ ಜನವರಿ 6, 2010 at 12:10 ಅಪರಾಹ್ನ #

    chennagive 🙂

  7. goutam hegde ಜನವರಿ 14, 2010 at 5:44 ಅಪರಾಹ್ನ #

    ಮಾತೇ ಇಲ್ಲ.ಮಸ್ತ್ ಸರ್ 🙂

  8. shastri ಜನವರಿ 19, 2010 at 3:40 ಅಪರಾಹ್ನ #

    ಅವಳ ಕೈ ಹಿಡಿದುಕೊಂಡ
    ಅವನ ಸಮಸ್ತ ಖುಷಿಗಿಂತ
    ಹಿಡಿದ ಹಿಡಿತ ಸಡಿಲಾಗಬಾರದು
    ದೇವರೆ ಎಂದು ಬೇಡಿಕೊಂಡ
    ಪರಿ ದೊಡ್ಡದಿದೆ

  9. sindhu ಜನವರಿ 20, 2010 at 11:23 ಫೂರ್ವಾಹ್ನ #

    hi

    superb writing……….:)

  10. nethra ಜನವರಿ 23, 2010 at 12:53 ಅಪರಾಹ್ನ #

    odhidhastu Bhavanegalu gari Bichuthave innu mathe mathe odha beku anisuthidhe heloke padhagale illa

  11. Pratap ಜನವರಿ 25, 2010 at 1:19 ಅಪರಾಹ್ನ #

    ಮಾತು ಮುತ್ ಆಗ್ತದೆ
    ಮುತ್ತು ಮಾತ್ ಆಗ್ತದ?

  12. nikitha ಜನವರಿ 26, 2010 at 8:54 ಫೂರ್ವಾಹ್ನ #

    tumba chennagi barededdera

  13. jp ಜನವರಿ 26, 2010 at 8:54 ಫೂರ್ವಾಹ್ನ #

    chennagi bardeddra

  14. ajay ಫೆಬ್ರವರಿ 6, 2010 at 10:03 ಫೂರ್ವಾಹ್ನ #

    Veryyyy coooolll hesarina hangillada hanigalu!!!!! sakath kick ide somanna…good i will be your fan from today

  15. ajay ಫೆಬ್ರವರಿ 6, 2010 at 10:05 ಫೂರ್ವಾಹ್ನ #

    Guruthillada oorinalli guriyilladanataledu na gurutu illadantagi hode guruthe illadavananthe nee mukha tirugi hode yedayalli indu mayada guruthe ninade…

  16. Santosh ಮಾರ್ಚ್ 31, 2010 at 10:58 ಫೂರ್ವಾಹ್ನ #

    Namskara Swamy

  17. meena ಏಪ್ರಿಲ್ 22, 2010 at 5:57 ಫೂರ್ವಾಹ್ನ #

    ondondu kavite nu,,, tumba sogasagide…

  18. ಅನಾಮಿಕ ಜೂನ್ 3, 2010 at 12:28 ಅಪರಾಹ್ನ #

    PREETHI PREMA GALA MADHYA KASTAGALU YAKE E KASTAGALINDA AVARA PREMA DOORA AGALVA

  19. Ravi ಜೂನ್ 26, 2010 at 7:21 ಅಪರಾಹ್ನ #

    ee kavanagalu tumba sogasaagive..olleya prayatna..nimage olleyadagali

  20. jabbu ನವೆಂಬರ್ 7, 2010 at 7:50 ಅಪರಾಹ್ನ #

    super

  21. giri ಮಾರ್ಚ್ 2, 2011 at 12:08 ಅಪರಾಹ್ನ #

    nice

  22. k c n murthy ಮಾರ್ಚ್ 17, 2011 at 7:34 ಅಪರಾಹ್ನ #

    jeevana emba rasadalli theli hodenu andu
    novu emba narakadalli beyuthiyenu indu
    ellarigu muttali e nanna sandesha endendu

    NEETHI VAAKYA.

  23. Ushe ಮೇ 29, 2011 at 8:31 ಫೂರ್ವಾಹ್ನ #

    very nice articles….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: