ನಿನ್ನ ಮತ್ತೇನನ್ನೂ ಕೇಳುವ ಸ್ಥಿತಿಯಲ್ಲಿ ನಾನಿಲ್ಲ !

25 ಆಗಸ್ಟ್

ನಿನ್ನ ಜೊತೆಗಿದ್ದ ಸಮಯ,ಹಂಚಿಕೊಂಡ ಖುಷಿಯ, ಮರೆಯಲು ಸಾಧ್ಯವೇ ಗೆಳೆಯಾ? ಸದಾ ಕಾಲ ನೆನೆಯುವುದು ನನ್ನ ಈ ಪುಟ್ಟ ಹೃದಯ ಅನ್ನುವ ನೀನು ಕಳೆದ ವರ್ಷ ಕಳಿಸಿದ ಪುಟಾಣಿ ಎಸ್ಸೆಮ್ಮೆಸ್ಸು ಇನ್ನೂ ನನ್ನ ಮೊಬೈಲಿನ ಇನ್ಬಾಕ್ಸ್ನಲ್ಲಿ ಬೆಚ್ಚಗೆ ಕುಳಿತಿದೆ. ದಿನಕ್ಕದೆಷ್ಟು ಬಾರಿ ತೆರೆದು ಓದುತ್ತೇನೋ ನನಗೇ ತಿಳಿಯುತ್ತಿಲ್ಲ. ಜಗತ್ತಿನಲ್ಲಿ ಇನ್ಯಾರೂ ಪ್ರೀತಿಸದಷ್ಟು ನನ್ನ ನೀನು ಪ್ರೀತಿಸಿದ್ದೆ ಅನ್ನುವುದು ದೇವರಷ್ಟೇ ಸತ್ಯ. ಆದರೆ ನಿನ್ನ ಪ್ರೀತಿಗೆ ನಾನು ನಂಬಿಕೆ ದ್ರೋಹದ, ಸುಳ್ಳಿನ ಹೊದಿಕೆ ಹೊದ್ದಿಸಿಬಿಟ್ಟೇ ಅನ್ನೋದು ಕೂಡ ಅ ದೇವರಷ್ಟೆ ಸತ್ಯ ಚೇತು. ನಿನ್ನ ಮತ್ತೇನನ್ನೂ ಕೇಳುವ ಸ್ಥಿತಿಯಲ್ಲಿ ನಾನಿಲ್ಲ, ನನ್ನ ತಪ್ಪುಗಳನ್ನ ನನ್ನ ಸುಳ್ಳುಗಳನ್ನ, ನನ್ನ ನಂಬಿಕೆ ದ್ರೋಹವನ್ನ ಪ್ಲೀಸ್ ಒಂದು ಸಲ ಮನ್ನಿಸಿಬಿಡು. ಮನ್ನಿಸಿಬಿಡೂ ಅಂತ ಕೇಳಿಕೊಂಡಷ್ಟು ಸುಲುಭವಲ್ಲ ಅನ್ನೋದು ನೆನಪಿದೆ ಗೆಳತಿ, ಆದರೂ ನಾನೂ ನಿನ್ನನ್ನ ಅಷ್ಟೇ ಪ್ರೀತಿಸಿದ್ದೆ, ಆದರೆ ಮನಸ್ಸು ಚಂಚಲ, ಯಾವುದೋ ಯಾರದೋ ಮೋಹಕ್ಕೆ ಮರುಳಾಗಿ ನಿನ್ನಿಂದ ದೂರವಾದ ಆ ದಿನಗಳಲ್ಲಿ ತುಂಬಾ ಅನುಭವಿಸಿದ್ದೀನಿ ಗೆಳತಿ, ಹಾಗೆ ಪ್ರೀತಿಗೆ ಅಂದ ಚಂದಗಳ ರೂಪ ರಾಶಿಗಳ ಹಂಗಿಲ್ಲ ಅನ್ನುವುದು ನನಗೆ ಗೊತ್ತಾಗಿದೆ. ನಾನು ಪ್ರೀತಿಸಿದ್ದು ನಿನ್ನನ್ನ, ಮೋಹಿಸಿದ್ದು ಇನ್ಯಾರನ್ನೋ. ಪ್ಲೀಸ್ ಮೋಹಕ್ಕಿಂತ ಪ್ರೀತಿಗೆ ಹೆಚ್ಚು ತೂಕ ಅನ್ನೋದನ್ನ ನಿನ್ನಿಂದ ದೂರಾದ ಪ್ರತಿ ಕ್ಷಣದಿಂದಲೇ ನನಗೆ ತಿಳಿದಿದೆ.

ನಿನ್ನ ಜೊತೆ ನಾನು ಆಡಿರುವ ಮಾತುಗಳ ತೂಕ ಒಂದು ತೂಕವಾದರೆ ಆಡದೆ ಉಳಿಸಿಕೊಂಡ ಮಾತುಗಳ ತಕ್ಕಡಿಯ ತೂಕ ಹೆಚ್ಚು ತೂಗುತ್ತದೆ. ಅಳೋದಕ್ಕೆ,ನಗೋದಕ್ಕೆ,ಕೋಪಿಸಿಕೊಳ್ಳೋದಕ್ಕೆ,ಮುನಿಸಿಕೊಳ್ಳೋದಕ್ಕೆ,ಮುದ್ದುಮಾಡೋಕೆ, ಎದೆಗೊರಗಿಕೊಂಡು ಬಿಕ್ಕಳಿಸೋಕೆ ನನಗೆ ನೀನು ಬೇಕು ಚೇತು, ಇದುವರೆಗು ನಾನು ನಿನ್ನ ಜೊತೆಯೇ ಹೆಚ್ಚು ಜಗಳವಾಡಿದ್ದೀನಿ, ಹೆಚ್ಚು ಮುನಿಸಿಕೊಂಡಿದ್ದೀನಿ, ಹೆಚ್ಚು ಮುದ್ದುಮಾಡಿದ್ದೀನಿ, ಹೆಚ್ಚು ಕಣ್ಣೀರಾಗಿದ್ದೀನಿ, ಅದಕ್ಕಿಂತಲೂ ಹೆಚ್ಚು ನಿನ್ನನ್ನ ಪ್ರೀತಿಸಿದ್ದೀನಿ ಚೇತು, ನಿನ್ನ ಬೆಳದಿಂಗಳಂತ ಮಡಿಲಲ್ಲಿ ಒಂದು ಸಲ ಜೋರಾಗಿ ಅತ್ತು ಕಣ್ಣೀರಾಗಿ ಹಗುರಾಗಿ ನನ್ನ ತಪ್ಪುಗಳನ್ನೆಲ್ಲ ಹೇಳಿಕೊಳ್ಳಬೇಕನ್ನಿಸುತ್ತಿದೆ, ನೀನು ಕ್ಷಮಿಸುತ್ತೀಯೋ ಇಲ್ಲವೋ ಅನ್ನುವುದು ಬೇರೆ ಮಾತು, ಆದರೆ ನಾನು ಹಗುರಾಗಬೇಕು ಚೇತು, ಮತ್ಯಾವತ್ತೂ ಮೋಹದ ಬೆನ್ನು ಬೀಳಬಾರದೆಂದು ಅಂದುಕೊಂಡಾಗಿದೆ. ಮೋಹ ಅನ್ನೋದು ನನ್ನ ಪ್ರೀತಿಯ ಮೇಲೆ ನಡೆಸಿದ ದಬ್ಬಾಳಿಕೆ ಅಂದುಕೊಂಡು ಬಿಡು.

ನನಗೆ ಗೊತ್ತು ನನ್ನನ್ನ ಬಿಟ್ಟು ಬೇರೇನನ್ನೂ ನಿನ್ನಿಂದ ಕಲ್ಪಿಸಿಕೊಳ್ಳೋದಕ್ಕೂ ನಿನ್ನಿಂದ ಆಗದ ಮಾತು. ಅಷ್ಟು ಪ್ರೀತಿಸಿದ್ದೆ ನನ್ನ ಅದ್ಯಾವುದನ್ನೂ ಇನ್ನೂ ಮರೆತಿಲ್ಲ, ನನ್ನಿಂದ ಒಂದು ತಪ್ಪಾಗಿದೆ, ಅದಕ್ಕೆ ಸಾವಿರ ಸಲ ತಪ್ಪಾಯಿತು ಕ್ಷಮಿಸಿಬಿಡು ಅಂದುಕೊಂಡು ನಿನ್ನ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯ ಬಿಕ್ಷೆ ಬೇಡೋಕೆ ಸಿದ್ಧವಾಗಿದ್ದೀನಿ. ಮತ್ತೆ ನಮ್ಮ ಹಳೆಯ ದಿನಗಳನ್ನ ಮರಳಿ ಪಡಿಯೋಣ, ಒಂದಷ್ಟು ಜಗಳವಾಡೋಣ, ಮುನಿಸಿಕೊಳ್ಳೋಣ, ಮತ್ತೆ ಮಾತು ಬಿಡೋಣ, ಮತ್ತೆ ರಾಜಿಯಾಗೋಣ, ಮತ್ತೆ ಜಗಳ ಮತ್ತೆ ರಾಜಿ, ಹಾಗೆ ಇಬ್ಬರೂ ಮತ್ತಷ್ಟು ಪ್ರೀತಿಸಿಕೊಳ್ಳೋಣ, ಈ ಪತ್ರದಲ್ಲಿ ನಿನ್ನ ಜೊತೆ ಕ್ಷಮೆ ಕೇಳೋದು ಒಂದು ಖುಷಿಯ ಸಂಗತಿಯಾದರೆ ನೀನು ಕ್ಷಮಿಸಬಹುದು ಅನ್ನೋದು ಮತ್ತೊಂದು ಖುಷಿಯ ಸಂಗತಿ. ನೀನು ಹಾಗೆಲ್ಲ ಬೆಣ್ಣೆಯ ಮಾತುಗಳಿಗೆ ಕರಗೋಳಲ್ಲ ಅನ್ನುವುದು ನನಗೆ ಗೊತ್ತು. ಅದಕ್ಕೇನೇ ನಿನಗೆ ತುಂಬಾ ಇಷ್ಟವಾದ ಢವ ಢವ ನಡುಕವ ಬಿಡು ನೀ ನಲ್ಲೇ ಅನ್ನುವ ನಿನಗೆ ಹಾಡನ್ನ ಮುನ್ನೂರ ಸಲ ಕೇಳಿಸುತ್ತೀನಿ. ಇದೇ ಸೋಮವಾರ ಮಹಲಕ್ಷ್ಮಿ ಲೇ ಔಟ್ ಆಂಜನೇಯ ದೇವಸ್ಥಾನದ ಕಂಬದ ಮರೆಯಲ್ಲಿ ನಿನಗಾಗಿ ಕಾಯುವುದು ಅಂತ ನಿರ್ಧಾರವಾಗಿದೆ. ನನ್ನ ಕೆನ್ನೆಗೆ ಮುತ್ತು ಕೊಡುವುದೋ ಅಥವ ಯಾವತ್ತೂ ಮರೆಯದ ಏಟು ಕೊಡುವುದೋ ಅನ್ನುವುದು ನಿನಗೆ ಬಿಟ್ಟ ನಿರ್ಧಾರ. ಮತ್ತೆ ಕೇಳಿಕೊಳ್ಳುತ್ತೇನೆ, ಪ್ಲೀಸ್ ಒಂದು ಸಲ ಮನ್ನಿಸಿಬಿಡು. ಅದಕ್ಕು ಮುಂಚೆ ಒಂದು ಮೆಸ್ಸೇಜ್ ಮಾಡು, ಒಂದು ವರ್ಷವಾಯಿತು ನಿನ್ನ ಮಮತೆಯ ಮೆಸೇಜಿಗೆ ಕಾದು ಕುಳಿತು.

ನವಿಲೂರ್ ಹುಡ್ಗ.
99868436–

Advertisements

5 Responses to “ನಿನ್ನ ಮತ್ತೇನನ್ನೂ ಕೇಳುವ ಸ್ಥಿತಿಯಲ್ಲಿ ನಾನಿಲ್ಲ !”

 1. Nagaraj ಆಗಷ್ಟ್ 26, 2010 at 1:12 ಅಪರಾಹ್ನ #

  ಹೇ ನವಿಲುಗರಿ ಹುಡ್ಗ!! ಚೆನ್ನಾಗಿದೆ ಕಣೋ ನಿನ್ನ ಲವ್ ಚೀಟಿ…ಆದ್ರೆ ಯಾಕೋ ಮುಂಚಿನತರ ಬರಿತಿಲ್ವೇನೋ ಅನ್ಸುತ್ತೆ…
  ಏನೇ ಆಗ್ಲಿ ಸುಮಾರು ತಿಂಗಳಾದಮೇಲೆ ಮತ್ತೊಂದು ಒಳ್ಳೆ ಬರಹ.

 2. chandu ಆಗಷ್ಟ್ 28, 2010 at 11:51 ಫೂರ್ವಾಹ್ನ #

  Somu ಲವ್ ಚೀಟಿ channagide…….. nim kalpane, kanasu habba esht channagirutte………..
  nange ee leatter tumba ishta aythu ige barita iri plzzzzzz

 3. ramesh ಆಗಷ್ಟ್ 31, 2010 at 7:25 ಫೂರ್ವಾಹ್ನ #

  Gurgale,
  come out of pain 🙂 . write some romantic letters

 4. Dr.Gurumurthy Hegde ಸೆಪ್ಟೆಂಬರ್ 1, 2010 at 9:54 ಫೂರ್ವಾಹ್ನ #

  Nice love letter

 5. rohini ಮೇ 5, 2011 at 12:23 ಅಪರಾಹ್ನ #

  chennaagide kanda 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: