ನೀನು ನನಗೆ ನೆನಪಾದ ಒಂದು ಸುಂದರ ಸಂಜೆ. ನಾನು ನಿನ್ನ ನೆನಪುಗಳ ಮೊಗ್ಗು ಹೊದ್ದುಕೊಂಡು ನಿನ್ನನ್ನೇ ಧ್ಯಾನಿಸುತ್ತಿದ್ದಾಗ ನನ್ನೊಳಗೆ ಸದ್ಧಿಲ್ಲದೆ ಮೂಡಿದ ಆಸೆ ನಿನ್ನ ಜೊತೆ ಒಂದು ದಿನ ಪೂರ್ತಿಯಾಗಿ ಕಳೆಯಬೇಕು. ಜನ ನಗ್ತಾರೆ ಗೊತ್ತು, ಏನ್ ಹುಡುಗೀನಪ್ಪ ಅನ್ಕೋತಾರೆ ಅಂತಾನೂ ಗೊತ್ತು, ತುಂಬಾ ಫಾಸ್ಟ್ ಇದ್ದಾಳಪ್ಪ ಹುಡುಗಿ ಅಂತಾನೂ ಹೇಳ್ತಾರೆ, ಜನರ ಮಾತು ಬಿಡು, ನನ್ನ ಸಭ್ಯ ಪೋಲಿ ಹುಡುಗ ನೀನು, ಯೋಗರಾಜಭಟ್ಟರ ಹೊಸ ಸಿನಿಮಾದ ಹಾಡಿನ ಸಾಲಿನ ಒಳ್ಳೆ ಲೋಪರ್ ಆದ ನೀನ್ ಕೂಡ ನನ್ನ ಮಾತನ್ನ ಹೇಗೆ ಅರ್ಥಮಾಡ್ಕೋತೀಯೋ ಕಾಣೆ, ನನಗನ್ನಿಸೋ ಪ್ರಕಾರ ಯಾವುದಾರು ಜನರೇ ಬಾರದ ಹಳೆಯ ಸಿನಿಮಾ ಟೆಂಟ್ಗೆ ಕರೆದುಕೊಂಡು ಹೋದ್ರೆ ಹೇಗೆ? ಯಾವುದಾದ್ರು ಪಾರ್ಕ್? ಹೋಗ್ಲಿ ಧೈರ್ಯ ಮಾಡಿ ಒಂದು ಲಾಡ್ಜು? ಯಾವುದಾದ್ರು ಪೋಲಿ ಗೆಳೆಯರ ರೂಮು? ಸರಿ ಅದು ನಿನ್ ಕರ್ಮ, ಹೇಗಂದುಕೊಂಡರೂ ಚಿಂತೆಯಿಲ್ಲ, ಅಪ್ಪಅಮ್ಮನ ಕಣ್ಣು ತಪ್ಪಿಸಿ, ತಂಗಿಗೆ ಪೂಸಿ ಹೊಡೆದು, ತಮ್ಮನಿಗೆ ನೂರು ಸುಳ್ಳು ಹೇಳಿ, ಅಣ್ಣನ ಬೈಕೆ ಪೆಟ್ರೋಲ್ ತುಂಬಿಸಿ ಹೊರಗೆ ಕಳಿಸಿ ನಿನ್ನ ಜೊತೆ ಒಂದು ದಿನ ಇರ್ಬೇಕು ಅನ್ನಿಸ್ತಿದೆ.
ನನಗೆ ಗೊತ್ತು ಇಂಥಾ ಸಮಯಕ್ಕೆ ಕಾದು ಕುಳಿತ ಸಭ್ಯ ಪೋಲಿ ಹುಡುಗ ನನ್ ಒಳ್ಳೆ ಲೋಪರ್ ನೀನು ಅಂತ. ನನ್ನ ಪತ್ರ ಒಡಿ ನೀನು ನೀನಾಗಿರಲ್ಲ, ಎಲ್ಲಾ ಮಾಸ್ಟರ್ಪ್ಲಾನುಗಳು ನಿನ್ ತಲೆಯಲ್ಲಿ ಹಗ್ಗಜಗ್ಗಾಟ ಆಡ್ತ ಇರುತ್ತೆ, ಪಾರ್ಕೋ, ಸಿನಿಮಾನೋ, ಗೆಳೆಯರ ರೂಮೋ, ಸ್ವಲ್ಪ ಸಮಾಧಾನ ದೊರೆ, ಸ್ವಲ್ಪ ನಿಧಾನಿಸು ಪ್ರಭುವೆ, ನಿನ್ನೆಲ್ಲ ಪೋಲಿಗುಣಗಳ ಹೊರತಾಗಿಯೂ ನಾನು ನಿನ್ನನ್ನ ಅದೆಷ್ಟು ಪ್ರೀತಿಸ್ತೀನಿ ಅಂತ ಹೇಳ್ಕೊಳ್ಬೇಕಾಗಿದೆ, ಇದೆಲ್ಲ ಪ್ರೀತಿ ಹೇಳಿಕೊಳ್ಳೋ ಜಾಗಗಳಲ್ಲ ಕರಿಯಾ, ಪ್ರಾಣಬಿಟ್ರೂ ನಾನಲ್ಲಿಗೆಲ್ಲ ಬರೊದಿಲ್ಲ, ನಿರಾಸೆಯಾಯಿತೇನೋ ಪಾಪ? ಸ್ವಲ್ಪ ಸಮಾಧಾನವಿರಲಿ, ವ್ಯವಧಾನವಿರಲಿ ಗೆಳೆಯ. ನಮ್ಮ ಮುಂದಿನ ಬದುಕಿನ ಬಗ್ಗೆ ನಿನ್ ಜೊತೆ ಮಾತಾಡ್ಬೇಕಾಗಿದೆ. ಫೋನಲ್ಲಿ ಬರಿ ಕಾಗೆ ಹಾರಿಸ್ತೀಯ, ಮಾಡೋಣ ಬಿಡೂ, ಆಗುತ್ತೆ ಬಿಡೂ, ಎಲ್ಲ ಸರಿ ಹೋಗುತ್ತೆ ಬಿಡು, ಇಂಥ ಮಾತುಗಳನ್ನ ನಾಲ್ಕುವರ್ಷಗಳಿಂದ ಕೇಳಿ ಕೇಳಿ ಹುಚ್ಚು ಹಿಡಿದಿದೆ, ಮನೆಯಲ್ಲಿ ಮದುವೆಗೆ ಹುಡುಗನ ಭೇಟೆ ಶುರುವಾಗಿದೆ. ಪ್ಲೀಸ್ ಏನಾದ್ರು ಮಾಡು ನನಗೆ ಗೊತ್ತಿಲ್ಲ, ಒಂದೊಳ್ಲೆ ಕೆಲ್ಸ, ಪರವಾಗಿಲ್ಲ ಅನ್ನುವಷ್ಟು ಸಂಬಳ, ನನ್ನನ್ನ ಸಾಕಬಲ್ಲೆ ಅನ್ನುವಷ್ಟು ನಂಬಿಕೆ, ಇಷ್ಟೇ ನಾನು ನಿನ್ನನ್ನ ಕೇಳ್ತಿರೋದು.
ಇದನ್ನೆಲ್ಲ ನಿನ್ ಜೊತೆ ಮಾತಾಡ್ಬೇಕು, ಪ್ಲಿಸ್ ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು, ದರಿದ್ರ ಮೊಬೈಲು ತರಬೇಡ, ನಿನಗೆ ಊರ ತುಂಬ ಗೆಳತಿಯರು, ಮೆಸ್ಸೇಜ್ ಕುಟ್ಟುತ್ತ ಕುಳಿತುಬಿಡ್ತೀಯಾ. ನಿನ್ನ ಸೋಮಾರಿತನವನ್ನ ನಾನು ಪ್ರಶ್ನಿಸಬೇಕು, ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಳ್ಬೇಕು, ನಿನ್ನ ಬೆನ್ನಿಗಂಟಿಕೊಂಡು ನೂರಾರು ಮೈಲಿ ಕುಳಿತುಕೊಳ್ಳಬೇಕು, ಬೈಕು ಬೋರಾದರೆ ಕಾಲು ನಡಿಗೆ, ನಿನ್ನೊಂದಿಗೆ ಹೆಜ್ಜೆ ಹಾಜಿ ನಡೆಯುವ ನಡೆಯುವ ಸೌಭಾಗ್ಯಕ್ಕಿಂತ ಬೇರೆ ಏನಿದೆ ನನಗೆ? ಬೇಕಾದರೆ ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಕಳ್ಳ ನೋಟ, ನನ್ನ ಹುಸಿಮುನಿಸು ಎಲ್ಲ ಅದೆಷ್ಟು ಸೂಪರ್ ಅಲ್ವಾ? ತುಂಬಾ ಭಾವುಕ ಹುಡುಗಿ ನಾನು ಅದ್ಕೆ ಈ ರೀತಿ ಮಾತಾಡ್ತಿದ್ದೀನಿ, ಸರಿ ನಿಂಗೆ ಇದೆಲ್ಲ ಇಷ್ಟ ಆಗಲ್ಲ ಅಂದ್ರೆ ಹೇಳು, ನೀನು ಕರೆದಲ್ಲಿಗೆ ಬರ್ತೀನಿ, ನನ್ನ ಪ್ರೀತಿಗೆ ನನ್ನ ಗೆಳೆಯನಿಂದ ಯಾವ ಅಪಚಾರವೂ ಆಗೊಲ್ಲ ಅನ್ನುವ ನಂಬಿಕೆ ನನಗಿದೆ. ಆದ್ರೆ… ಆದ್ರೆ… ಆದ್ರೆ.. ನೀನು ನನ್ನಂತ ದಂತದ ಬೊಂಬೆಯನ್ನ ನೋಡಿಯೂ ಮುಟ್ಟಲಾಗದೆ, ಮುದ್ದಿಸಲಾಗದೆ ಇರೋದನ್ನ ನಾನು ನೋಡ್ಬೇಕು ಅನ್ನಿಸ್ತಿದೆ. ಅಯ್ಯೋ ಪಾಪ ಅನ್ನಿಸಿದ್ರೆ ಒಂದೇ ಒಂದು ಪುಟಾಣಿ ಮುತ್ತು. ಅದು ಕೆನ್ನೆಗೆ ಮಾತ್ರ.
ನವಿಲೂರು ಹುಡುಗಿ
3622
ತುಂಬಾ ಚೆನ್ನಾಗಿದೆ ….ಅದೆಲ್ಲೋ ಏಕಾಂತದಲ್ಲಿ ಮಾತಡ್ಬೇಕಂತಲ್ಲ ಕರ್ಕೊಂಡು ಹೋಗೋ …..
nice one thanks
Tumba chanaagi bardideera., nimma huduga tumba adrusta maadidaare.
With Love and Regards
———————-
Manohar L
From God’s Own Country KERALA.
hi tumba channagide ee word nangu anwayisutte…..its simply superb…..
ನಾನು ನಿನ್ನ ನೆನಪುಗಳ ಮೊಗ್ಗು ಹೊದ್ದುಕೊಂಡು ನಿನ್ನನ್ನೇ ಧ್ಯಾನಿಸುತ್ತಿದ್ದಾಗ
ನೀನು ನನ್ನಂತ ದಂತದ ಬೊಂಬೆಯನ್ನ ನೋಡಿಯೂ ಮುಟ್ಟಲಾಗದೆ, ಮುದ್ದಿಸಲಾಗದೆ ಇರೋದನ್ನ ನಾನು ನೋಡ್ಬೇಕು ಅನ್ನಿಸ್ತಿದೆ. ಅಯ್ಯೋ ಪಾಪ ಅನ್ನಿಸಿದ್ರೆ ಒಂದೇ ಒಂದು ಪುಟಾಣಿ ಮುತ್ತು. ಅದು ಕೆನ್ನೆಗೆ ಮಾತ್ರ.
ಸೋಮು ತುಂಬಾ ತುಂಬಾ ಚನ್ನಾಗಿ ಬರೆದಿದ್ದೀರ ಪತ್ರನ,…….. ನಿವ್ ಅದು ಹೇಗೆ ಹುಡುಗಿಯರ ಭಾವನೆಯನ್ನು ಇಷ್ಟು ಚಂದ ಬರಿತ್ತೀರಿ…. ಸೂಪರ್ ರೀ…..
ನಾನು ನನ್ನ ಕವಿತೆಗಳನ್ನು ಕಳುಹಿಸಬಹುದಾ ಹಾಗೇನಾದರು ಕಳುಹಿಸಬಹುದಾದಲ್ಲಿ ಹೇಗೆ ಕಳುಹಿಸಬೇಕು ದಯಮಾಡಿ ತಿಳಿಸಿರಿ.
ನವಿಲುಗರಿಯ ಬಣ್ಣ ಬೊಂಬಾಟಾಗಿದೆ.. ನೊಡೋದಕ್ಕೆ ಎರಡು ಕಣ್ಣುಗಳು ಸಾಲಲಿಲ್ಲಾ..! ಬೊಗಸೆ ಪ್ರೀತಿ ಉಣಬಯಸುವವರಿಗೆ ಬೂರಿಭೋಜನ.
Good one. Very true.
adu hegri barithira niv…………fantastic
mmnagaraj Says ಡಿಯರ್ …………ಓಯ್.. ನಾನು ಆ ತರ ಅಲ್ಲಪ್ಪ…
ಮುರಳಿ ಮನೋಹರ್ ಅಂಬಿಕ,ಥ್ಯಾಂಕ್ಸ್.
ಚಂದು ಡಿಯರ್… ಹುಡುಗೀರು ಅಂದ್ರೆ ಸ್ವಲ್ಪ ಜಾಸ್ತಿ ಪ್ರೀತಿ ನಮಗೆ… ಅದ್ಕೆ ಹೀಗೆ ಇರಬಹುದೇನೋಪ…
ಪುನೀತ್ ನಿಮ್ಗೆ ಮೇಲ್ ಮಾಡಿದ್ದೀನಿ ಚೆಕ್ ಮಾಡಿ ಪ್ಲೀಸ್
ಸಹನ ಅವರೆ… ನವಿಲುಗರಿಯ ಬಣ್ಣ ಸ್ವಲ್ಪ ಕಪ್ಪು ಕಣ್ರಿ… ಆದ್ರೂ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸು…
ಸಿಂಧು ಥ್ಯಾಂಕ್ಸ್
ಬಬ್ಲಿ ಹುಡುಗಿ… ನಾನು ಪೆನ್ನಲ್ಲಿ ಬರಿಯೋದು… ಥಾಂಕ್ಸ್