ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ.

19 Dec

ನಿನ್ನ ಕೋಪ ಹೇಗಿದೆ? ನಿನ್ ಸಿಡುಕುತನ? ನಿನ್ನ ಮೊಂಡತನ? ನಿನ್ನ ಸೋಮಾರಿತನ? ನಿನ್ನು ಮುದ್ದುತನ? ಮೊದ್ದುತನ? ಪೆದ್ದುತನ? ಮೊದಲಿನ ಹಾಗೆ ನಿನ್ನ ಕೋಪದ ಜ್ವಾಲಾಮುಖಿ ನಿಮ್ಮ ಮನೆಯವರ ಮೇಲೆ ಸಿಡಿಯುತ್ತಲೇ ಇದೆಯಾ? ದಿನಕ್ಕೆಷ್ಟು ಭಾರಿ ನನಗೆ ಶಾಪ ಹಾಕುತ್ತೀಯಾ? ನಾನು ಇಷ್ಟಪಟ್ಟು ನಿನಗೆ ಕೊಟ್ಟ ನವಿಲುಗರಿ, ನನ್ನದೇ ಹೆಸರಿಟ್ಟುಕೊಂಡು ತಬ್ಬಿಕೊಂಡಿರುತ್ತಿದ್ದ ಪಾಪದ ಟೆಡ್ಡಿಬೇರು, ನಾನು ನಿನಗೆ ನವಿಲೂರು ಜಾತ್ರೆಯಲ್ಲಿ ಕೊಡಿಸಿದ ಕಲರ್ ಕಲರ್ ಕನ್ನಡಕ, ಗಾಂಧಿಬಜಾರಲ್ಲಿ ಕೊಡಿಸಿದ ಪ್ರೇಮ ಪುಸ್ತಕ, ನಿನಗೇ ಅಂತ ಬರೆದ ನೂರಾರು, ಕ್ಷಮಿಸು ಸಾವಿರಾರು ಕವಿತೆಗಳು,ಎಲ್ಲವನ್ನೂ ನನ್ನ ಮೇಲಿನ ಕೋಪ ತೀರಿಸಿಕೊಳ್ಳಲು ಅಗ್ನಿ ದೇವನಿಗೆ ಸಮರ್ಪಿಸಿಯಾಗಿರಬೇಕು ಅಲ್ವಾ? ಬಿಡು ನಿನ್ನ ಕೋಪದ ಮಹಿಮೆ ಅಪಾರ ಎಂಬುದನ್ನ ನಿನ್ನ ಜೊತೆ ಕಳೆದ ಎರಡು ವರ್ಷ ಮೂರು ತಿಂಗಳು ಹದಿನಾಲ್ಕು ದಿನಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಅಂದ ಹಾಗೇ ನೀನು ಹೇಗಿದ್ದೀಯಾ? ನನ್ನನ್ನ ನಿನ್ನ ಬಲೆಯಲ್ಲಿ ಕೆಡವಿದ ನಿನ್ನ ಮನಮೋಹಕ ಕಂಗಳು ಹೇಗಿವೆ? ನನ್ನನ್ನ ಬಿಡದೇ ಕಾಡುತ್ತಿದ್ದ ನಿನ್ನ ನಗು ಹಾಗೆ ಇದೆ ತಾನೆ? ಅಂದ ಹಾಗೆ ಈ ಜನ್ಮದಲ್ಲಿ ನೀನು ನನಗೆ ಫೋನ್ ಮಾಡೋದು ಕನಸಿನ ಮಾತು ಅಲ್ವ? ಮೆಸ್ಸೇಜ್ ಮಾಡೊಲ್ಲ, ನನ್ನ ಬಗ್ಗೆ ಚಿಂತೆ ಮಾಡೊಲ್ಲ, ನಾನು ನಿನಗೆ ನೆನಪಾಗೊಲ್ಲ, ಅದೆಲ್ಲ ಗೊತ್ತಿದ್ರೂ ಈ ಪತ್ರ ಬರಿತ್ತಿದ್ದೀನಿ. ಆದ್ರೂ ಎಲ್ಲೋ ಒಂದು ಸಣ್ಣ ಆಸೆ, “ಸ್ಸಾರಿ ಕಣೋ ಕರಿಯಾ, ನಂದೇ ತಪ್ಪು, ಮನ್ಸಲ್ಲಿ ಏನು ಇಟ್ಕೋಬೇಡ, ನಾನ್ ಕೋಪ ಮಾಡ್ಕೊಳ್ದೆ ಇನ್ಯಾರು ಕೋಪ ಮಾಡ್ಕೊಬೇಕೊ? ನಡಿ ಪಾನಿಪೂರಿ ಕೊಡ್ಸು, ಪುನೀತ್ ಫಿೀಲ್ಮ್‌ಗೆ ಕರ್ಕೊಂಡ್ ಹೋಗು, ಹಾಗೆ ಕೆ.ಎಪ್.ಸಿ ಕಡೆ ಒಂದು ರೌಂಡ್ ಹೊಡ್ಕೊಂಡು ಬರೋಣ, ನಿಮ್ ಮನೆಗೆ ಕರ್ಕೊಂಡ್ ಹೋಗು ಪ್ಲೀಸ್” ಅಂತ ಒಂದು ಫೋನ್ ಮಾಡ್ತಿಯೇನೋ ಅಂತ ಇವತ್ತಿಗೂ ಈ ಕ್ಷಣಕ್ಕೂ ಕಾಯ್ತನೆ ಇದ್ದೀನಿ.

ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರ ಮುಂದೆಯೆ ಕೆನ್ನೆಗೆ ನಾಲ್ಕು ಬಿಟ್ಟು ನಿನ್ನ ಹೆಗಲಮೇಲೆ ಕೂರಿಸಿಕೊಂಡು ಬಂದ್ಬಿಡ್ಬೇಕು ಅಂತ ತುಂಬಾ ಸಲ ಅನ್ನಿಸಿದೆ. ಆದರೆ ಅದೇ ಗುಳಿಗೆನ್ನೆಯ ದರ್ಶನಕ್ಕೆ ಹಗಲು ರಾತ್ರಿ ಅನ್ನದೆ ಕಾದಿದ್ದು ನೆನಪಾಗುತ್ತೆ, ಕೊಟ್ಟ ಮುತ್ತುಗಳು ನೆನಪಾಗುತ್ತೆ, ಮನೆಯವರೆಲ್ಲರೂ ನಮ್ಮ ಮದುವೆಗೆ ನೋ ಅಂದ್ರೂ ಕೂಡ ಎಲ್ಲರ ಮಾತನ್ನ ಧಿಕ್ಕರಿಸಿ ನನ್ನ ಮನೆಯಂಗಳಕ್ಕೆ ಬಂದ ನಿನ್ನ ಅಪಾರ ಪ್ರೀತಿ ನೆನಪಾಗುತ್ತೆ, ಎಲ್ಲಕ್ಕಿಂತಲೂ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ನಮ್ಮದೇ ಪುಟ್ಟ ಕಂದ ಇನ್ನೇನು ನಿನ್ನ ಮಡಿಲಿಗೆ ಬಂದುಬಿಡುತ್ತೇ ಅನ್ನುವುದು ನೆನಪಾಗಿ ನಿನ್ನ ಮೇಲಿನ ಕೋಪ,ಸಿಟ್ಟು ಅಸಹನೆ ಎಲ್ಲವೂ ಮಾಯವಾಗಿ ನಾನೆ ನಿನ್ನ ಮಗುವಂತಾಗಿಬಿಡುತ್ತೇನೆ. ನೋಡು ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ, ನಿನ್ನ ಮೊಂಡುತನ,ನಿನ್ನ ಸಿಟ್ಟು ಎಲ್ಲವನ್ನ ನಾನು ನನ್ನ ಪ್ರೀತಿಯಿಂದಾನೆ ಗೆಲ್ತೀನಿ ಅನ್ನೋ ಭರವಸೆ ಇದೆ, ಆದ್ರೆ ನಿನ್ನಲ್ಲಿ ಒಂದು ಒಂದೇ ಒಂದು ಪುಟಾಣಿ ಬೇಡಿಕೆ ಇದೆ, ಅದೇನಪ್ಪ ಅಂದ್ರೆ, ಪ್ಲೀಸ್ ಸ್ವಲ್ಪ ಕೋಪ ಕಡಿಮೆ ಮಾಡ್ಕೋ ಮರಾಯ್ತಿ, ಸಹನೆ ಬೆಳೆಸ್ಕೊ, ನನ್ನ ಮೇಲೆ ಸ್ವಲ್ಪ ಪ್ರೀತಿ ಇರಲಿ ಅನ್ನೋ ಮಾತು ನಿನಗೆ ಹೇಳೋದಿಲ್ಲ, ನೀನು ಪ್ರೀತಿಯ ವಿಷಯದಲ್ಲಿ ಯಾವತ್ತಿಗೂ ನನ್ನ ಪಾಲಿನ ಅಕ್ಷಯಪತ್ರೆ.

ಪ್ಲೀಸ್ ಬಂದುಬಿಡು, ಬದುಕಲ್ಲಿ ಕೋಪ ತಾಪಗಳಿಗೆ ಹೆಚ್ಚಿನ ಆಯುಷ್ಯ ಇರಲ್ಲ ಚಿನ್ನ. ಜಗತ್ತನ್ನೆ ಎದುರು ಹಾಕಿಕೊಂಡು ಬದುಕು ಕಟ್ಟಿಕೊಂಡವರು ನಾವು. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ಮುರಿದುಕೊಳ್ಳುವುದು ಬೇಡ, ಇವರದ್ದು ಬರಿ ಮೂರು ದಿನದ ಪ್ರೀತಿ ಅಂತ ಯಾರಾದ್ರೂ ಆಡ್ಕೊಂಡು ನಗೋದು ನಮ್ಗೆ ಬೇಕಾ ಹೇಳು? ಎಲ್ಲರ ಕಣ್ಣು ಕುಕ್ಕುವ ಹಾಗೆ ಬದುಕಿ ತೋರಿಸಬೇಕಲ್ವಾ ನಾವು? ಅವರ ಮಾತು ಹಾಳಾಗಲಿ ಬಿಡು. ಇನ್ನೇನು ಕೆಲವೇ ತಿಂಗಳು ನಮ್ಮ ಮಡಿಲಿಗೆ ಕುಮಾರ ಕಂಠೀರವನೋ, ಮುದ್ದು ಗೌರಿಯೋ ಬರುವ ಸಮಯ, ಸ್ವಲ್ಪಾನೆ ಯೋಚಿಸಿ ನೋಡು, ಜಗತ್ತಲ್ಲಿ ಯಾರು ಪ್ರೀತಿಸದ ಹಾಗೆ ನಿನ್ನನ್ನ ಪ್ರೀತಿಸಿದವನು ನಾನು.ನನಗಿಂತ ಸಾವಿರ ಸಾವಿರ ಪಟ್ಟು ನನ್ನನ್ನ ಪ್ರೀತಿಸಿದ ಮೊಂಡಿ ನೀನು. ಬೇಕಾದರೆ ನನ್ನದಲ್ಲದ ತಪ್ಪುಗಳಿಗೆ ನಾನೇ ಕ್ಷಮೆ ಕೇಳುತ್ತೇನೆ. ನಿನಗೆ ಮಾಡಿದ ಪ್ರಾಮಿಸ್‌ನಂತೆ ಜಯಂತ ಕಾಯ್ಕಿಣಿ ಸರ್ ಕೈಕಾಲು ಹಿಡಿದು ಖಂಡಿತ ಅವರನ್ನ ಮೀಟ್ ಮಾಡಿಸ್ತೀನಿ, ಪ್ಲೀಸ್ ಬಂದುಬಿಡು. ಅಷ್ಟೇ ಅಲ್ಲ, ಡಿಸೆಂಬರ್ ಚಳಿಯ ಹಾವಳಿ ವಿಪರೀತವಾಗುತ್ತಿದೆ. ಈ ಚಳಿಗೆ ನಿನ್ನದೆ ಹೊದಿಕೆ ಬೇಕು ಅನ್ನಿಸ್ತಿದೆ. ನನ್ನ ಕಷ್ಟ ನಿನಗೆ ಅರ್ಥವಾಗಿರಬೇಕು ಅಲ್ವಾ ಮುದ್ದು ಹೆಂಡತಿ.. J

ಕೇವಲ ನಿನ್ನವನು
ನವಿಲೂರ್ ಹುಡ್ಗಾ..:)

Advertisements

18 Responses to “ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ.”

 1. Living To Die. December 20, 2010 at 5:19 am #

  Dear Navilu gari.,

  ee writing tumba chanaagide, nimge maduve aagideya, aagidre nimma hendati tumba lucky andkoteeni.

  With Love and Regards
  ———————-
  Living To Die.
  livingtodie9@gmail.com

 2. mmnagaraj December 21, 2010 at 1:18 pm #

  ಹೇ ನವಿಲುಗರಿ ಹುಡ್ಗ !!
  ಸುಮಾರು ದಿನ ಅದಮೇಲೆ ಒಂದು ಲವ್ ಚೀಟಿ ಬರ್ದಿದಿಯ, ಖುಷಿ ಆಯಿತು ನೋಡಿ.
  ಹೀಗೆ ಬರಿತಾ ಇರು ಮಾರಾಯ ನೀನು ತುಂಬಾ ಚೆನ್ನಾಗಿ ಬರಿತಿಯ…

  ನಾಗರಾಜ್ ಎಂ ಎಂ

 3. prasi December 21, 2010 at 2:48 pm #

  ಲೆ ಸೋಮ.. ಯೆಸ್ಟ್ ದಿನ ಆಯಿತೊ.. ಪಬ್ಲಿಶ್ ಮಾಡಿ..ನಾ ಮಾತ್ರ ಕಾದ್ಕುಳ್ತಿದ್ದೆ ಗೊತ್ತಾ.. ಚೂರ್ ಇನ್ನು ಚೆನ್ನಗ್ ಬರಿಬೂತಿತ್ತೆನೊ ಅನಿಸ್ತು…. ಬಟ್, ಗುಡ್ ಒನ್.. ನೀನು ಬರಿತಾನೆ ನಾವು ಒದ್ತಾನೆ ಇರ್ತಿವಿ.. ಜನರ ಪ್ರೀತಿ ಯೆಸ್ತ್ ಸಂಪದಿಸಿದಿಯೊ ಗುರು.. ಸೂಪರ್ ಮಗ.. ಕೀಪ್ ಇಟ್ ಅಪ್..

 4. kavya gowda December 27, 2010 at 7:31 am #

  yeno nanage helde madve madkondidiyaa, maduve aagi magu bere barta idrooo ondu vishya tilisilla ala , ninna tangige helilla amdre innu bereyavarigooo gottiralla bidu …. irli irli taalu sikkidaaga kaalu muriteeni …. thumba chennagide kano , yentha imagination nindu , ninna hendathi hatra neene sorry kelteeya … adrusta madidaeeyamma nanna attige amma … nanage thumba ista aaythu … all the best , innu thumba bariyo nange odalikkadrooonu

 5. Soumya December 27, 2010 at 4:49 pm #

  superb liked it 🙂

 6. chandu, marichike January 31, 2011 at 9:37 am #

  somu nice, superrrr ree nim leatter……
  channagide….

 7. Sahana Bhat February 17, 2011 at 1:43 pm #

  ನವಿಲುಗರಿಯ ಬಣ್ಣ ಬೊಂಬಾಟಾಗಿದೆ.. ನೊಡೋದಕ್ಕೆ ಎರಡು ಕಣ್ಣುಗಳು ಸಾಲಲಿಲ್ಲಾ.. ಬೊಗಸೆ ಪ್ರೀತಿ ಉಣಬಯಸುವವರಿಗೆ ಬೂರಿಭೋಜನ.

 8. soma k.m February 24, 2011 at 10:56 am #

  super sir

 9. usharani March 22, 2011 at 6:05 am #

  ತುಂಬಾ ಚೆನ್ನಾಗಿದೆ ನಿಮ್ಮ ಬರಹ. ನಿಜಕ್ಕೂ ನಿಮ್ಮ ಹೆಂಡತಿ ಪುಣ್ಯ ಮಾಡಿದ್ರು ನಿಮ್ಮನ್ನ ಪಡಿಯೋಕೆ. ಇದೇ ಪ್ರೀತಿ ನಿಮ್ಮಿಬ್ಬರ ವಡುವೆ ಬದಪಕಿನುದ್ದಕ್ಕೂ ಇರಲಿ.

 10. ajay December 30, 2011 at 10:44 am #

  nice guru plz hudgur bagge yenadru geechu guru

 11. prasad January 9, 2012 at 10:53 am #

  its realy suparb somu nija kanri prithili boys thumbane wait madthare tham prithi durahodaru , nav avaramele itta prithi mathra kamigalari

 12. bublygirl January 16, 2012 at 1:17 pm #

  thumbane chennagi barithira sir…..its superb

 13. srinivas February 14, 2012 at 10:38 am #

  preethi jagathane geluthe antha idre nim preeti thara irbeku
  thumba chanagide

 14. Naynaaaaaaaaaaaaaaaaaa March 9, 2012 at 5:58 am #

  navilugari…………….?

  🙂

 15. yashaswinibadri September 28, 2012 at 10:18 am #

  hi i am yashu nanu ivatthe nimma blagu open madidu thumba chanagi bandide, nangu ide thara nanna yajmanru kelbarda ansutthe, avru thumba istapadtre, adre idanna odiddre hottekichhagthide.. so sweet..

 16. deepa November 13, 2012 at 11:54 am #

  very nice writing ri nanganthu tumbane ishta aythu

 17. amaresh.pg December 21, 2012 at 6:30 am #

  nice anna superrrrrrrrrrrrrrrrrrrrrrrrrrrrrr

 18. gayathri December 29, 2012 at 2:17 pm #

  Thumba changide sir……. evathe nimma blagu open madidu thumba chanagi barithira…….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: