ನಂದಿನ್ನೂ ಎಸ್.ಎಸ್.ಎಲ್.ಸಿ ಮುಗಿದಿರಲಿಲ್ಲ,ಕೆಲವರು ಅಲೆಲೆಲೆ ಜಿಂಕೆಮರಿ ಅಂತಿದ್ರು,

19 Jun

ಹೆಸರು ಮಾನಸ ಗೌಡ, ಚಿಕ್ಕಮಂಗಳೂರ ಚಿಕ್ಕಮಲ್ಲಿಗೆ.. 1992 ಜೂನ್ 6, ಕರ್ಕಾಟಕ ರಾಶಿ, ಮಿಥುನ ಲಗ್ನ, ಅಶ್ಲೇಷ ನಕ್ಷತ್ರ. ಇದು ನಂದು ಜೋಟ ಬಯೋಡೇಟ,  ಇವತ್ತಿಗೆ ಸರಿಯಾಗಿ 19 ತುಂಬಿ 20ರ ಮಾಯಾಲೋಕದೊಳಗೆ ಕಾಲಿಡ್ತ ಇದ್ದೀನಿ. ನಂದಿನ್ನೂ ಎಸ್.ಎಸ್.ಎಲ್.ಸಿ ಮುಗಿದಿರಲಿಲ್ಲ,ಕೆಲವರು ಅಲೆಲೆಲೆ ಜಿಂಕೆಮರಿ ಅಂತಿದ್ರು, ಮತ್ತೆ ನನ್ನ ಕನ್‌ಫ಼್ಯೂಸ್ ಮಾಡ್ಕೊಂಡು ಅಯ್ಯಾಂಗಾರ್ ಪಿಳ್ಳೆ ಅಳಗಾ ಇರುಕ್ಕು ಅಂತಿದ್ರು. ಚೂಡ್ರಾ ಎಲಾವುಂದಿ ಫಿಗರ್ರು.. ಮಂಚ ಗಮ್ಮತಗಾ ವುಂದಿ ಅಂದ ಹೈದರೆಷ್ಟೋ, ದಿಲ್ ದೇದಿಯಾ ಹೈ ಜಾನ್ ತುಮ್ಹೆ ದೇಂಗೆ ಅಂತ ಹೃದಯ ಪರಚಿಕೊಂಡ ಗಂಡುಮಕ್ಕಳೆಷ್ಟೋ, ಎಲ್ಲ ಹುಡುಗ್ರೂ ಇವಳೊಬ್ಳ ಹಿಂದೇನೆ ಹೋಗ್ತಾರೆ ಅಂತ ಸಿಟ್ಟುಮಾಡಿಕೊಂಡ ಹುಡುಗಿಯರೆಷ್ಟೋ. ಹೆಸರು ಕುಲ ಗೋತ್ರ ಗೊತ್ತಿಲ್ಲದ ಹೂಗಳನ್ನ ಕಿತ್ತು ತಂದು ನನ್ನ ಮುಂದಿಟ್ಟು ನಾಚಿಕೊಳ್ಳುತಿದ್ದ ಸಭ್ಯ ಗಿರಿ, ನನ್ನ ಹೆಸರಿನ ಹಚ್ಚೆಯನ್ನ ಮೈತುಂಬ ಬರೆಸಿಕೊಂಡು ನನ್ನ ಮುಂದೆ ಶರ್ಟು ಬಿಚ್ಚಿ ನಿಲ್ಲುತ್ತಿದ್ದ ಪೋಲಿ ಸೋಮ, ಚಿಲ್ಲರೆ ಕೊಡುವ ನೆಪದಲ್ಲಿ ನನ್ನ ಮೈಕೈ ಮುಟ್ಟುತ್ತಿದ್ದ ಮೂಕಂಬಿಕ ಜನರಲ್ ಸ್ಟೋರಿನ ಪುಟ್ಟರಾಜು ಅಂಕಲ್, ಒಂಬತ್ತನೆ ತರಗತಿಯಿಂದ ಎಸ್.ಎಸ್.ಎಲ್.ಸಿಯವರೆಗೆ ಪ್ರತಿ ದಿನ ಒಂದೊಂದು ಲವ್ ಲೆಟರ್ ಕೊಡುತಿದ್ದ ತಮಿಳು ಹುಡ್ಗ ಬ್ಲಾಕ್ ತಂಬಿ, ಒಂದು ವರ್ಷದಿಂದ ಇವತ್ತಿಗೂ ನನ್ನ ನಂಬರ್ ತಿಳಿದುಕೊಳ್ಳಲು ಪರದಾಡುತ್ತಿರುವ ಡೀಸೆಂಟ್ ಫೆಲೋ ಪ್ರದೀಪ್, ಅಮ್ಮನ ತಮ್ಮ ಕಿರಣ್, ಅಪ್ಪನ ಸ್ನೇಹಿತರ ಮಗ ಸಿ.ಡಿ ರಾಜಪ್ಪ, ನನಗೆ ಅರ್ಥವಾಗದ ಉರ್ದು ಗಝಲ್ಲುಗಳನ್ನ ಕಣ್ಣೀರು ತುಂಬಿಕೊಂಡು ನನ್ನ ಮುಂದೆ ತಲೆತಗ್ಗಿಸಿಕೊಂಡು ಹೇಳುತ್ತಿದ್ದ ಅಮರ ಪ್ರೇಮಿ ಸಯ್ಯದ್ ಅಶ್ರಫ್ ಎಂಬ ಅಮರ ಪ್ರೇಮಿ, ಕಾಡಿನಿಂದ ಇಡೀ ಜೇನು ತಂದು ನನ್ನ ಮುಂದಿಡುತಿದ್ದ ವಡ್ಡರ ಹುಡುಗ ಪೋಲಿ ಪಾಂಡು, ಅಷ್ಟೆತ್ತರದ ಹುಳಿಮಾವಿನ ಮರವನ್ನ ಹತ್ತಿ ನನಗೆ ಹಣ್ಣು ತಂದುಕೊಡುತ್ತಿದ್ದ  ಶಶಾಂಕ್..

 ಅಬ್ಬಾ..! ಒಬ್ಬೊಬರದೂ ಒಂದೊಂದು ತರಹದ ಪ್ರೀತಿ, ಕೆಲವೊಮ್ಮೆ ಖುಷಿಯಗ್ತಿತು,ಕೆಲವೊಮ್ಮೆ ಕೋಪ ಮತ್ತೊಮ್ಮೆ ಸಣ್ಣ ದಿಗಿಲು, ಇಷ್ಟು ಜನರ ಪ್ರೀತಿಯ(?)ಹೊಳೆಯಲ್ಲಿ ಮುಳುಗದೇ ಇವತ್ತು ಕಾಲೇಜಿನ ಮೆಟ್ಟಿಲ ಮೇಲೆ ಬಂದು ನಿಂತಿದ್ದೀನಿ, ನನ್ನ ಅಷ್ಟೊಂದು ಪ್ರೀತಿಸುತ್ತಿದ್ದ ಹುಡುಗರಲ್ಲಿ ಯಾರೊಬ್ಬರಿಗಾದರೂ ಎಸ್ ಎಂದುಬಿಡಲೇ ಅಂತ ಸಾವಿರ ಸಲ ಯೋಚಿಸುತ್ತಿರುವಾಗಲೇ ಅಸೆಬುರುಕ ಮನಸ್ಸು “ ಏಯ್ ಸುಮ್ನಿರು ಇನ್ನೂ ಚಂದದ ಹುಡುಗ ಸಿಕ್ತಾನೆ ಅಂತ ಗದರಿಸುತ್ತಿತು. ಹೃದಯ ಮಾತ್ರ “ಇನ್ನೂ ಒಳ್ಳೆಯ ಹುಡುಗ ಸಿಕ್ತಾನೆ ಕಾಯಬೇಕು ಹುಡುಗಿ ಅಂದ ಹಾಗಾಗುತ್ತಿತು, ನನಗೆ ಚಂದದ ಹುಡುಗನಿಗಿಂತ ಒಂದೊಳ್ಳೆ ಹುಡುಗ ಬೇಕು, ಒಂದೊಳ್ಳೆ ಅಪ್ಲಿಕೇಷನ್ ಬರಬಹುದು ಅನ್ನುವ ನಿರೀಕ್ಷೆಯಲ್ಲಿ ನಾನಿದ್ದೀನಿ.

 ನನ್ ಬಗ್ಗೆ ಎರಡೇ(?) ಸಾಲಲ್ಲಿ ಹೇಳ್ಬಿಡ್ತೀನಿ, ಕೋಪ ಬೇಗ ಬರುತೆ, ಅಳು ಮಾತ್ರ ಶತಾಬ್ಧಿ ಎಕ್ಸ್‌ಪ್ರೆಸ್‌ಗಿಂತಲೂ ಸ್ಪೀಡು, ಅಮ್ಮ ಅಂದ್ರೆ ಇಷ್ಟ, ಅಪ್ಪ ಅಂದ್ರೆ ಪ್ರಾಣ, ಚುರುಕು ಮಾತಿನ ಹುಡುಗಿ, ಸುದೀಪ್ ಅಂದ್ರೆ ಇಷ್ಟ, ದರ್ಶನ್ ಅಂದ್ರೆ ಅಷ್ಟಕಷ್ಟೆ, ಪಿಜ್ಜಾ ಬರ್ಗರ್ ಮುಖ ಮೂತಿ ನೋಡಿಲ್ಲ, ರಸ್ತೆ ಬದಿಯ ಪಾನಿ ಪೂರಿ ಜೊತೆಗೆ, ಮಲ್ಲೇಶ್ವರಂ ಜನತಾ ಹೋಟ್ಲಿನ ಮಸಾಲ ದೋಸೆ, ಸಿ.ಟಿ.ಅರ್ ಬೆಣ್ಣೆದೋಸೆ,ವೀಣ ಸ್ಟೋರ್ ಇಡ್ಲಿವಡೆ, ಹಳ್ಳಿ-ತಿಂಡಿಯ ಚಟ್ನಿಪುಡಿ, ೧೫ನೇ ಕ್ರಾಸಿನ ಮ್ಯಾಕ್ ಡೊನಾಲ್ಡು, ಜಯನಗರದ ಕೂಲ್ ಜಾಯಿಂಟು, ಸಜ್ಜನ್ ರಾವ್ ಸರ್ಕಲ್ಲಿನ ವಿ.ಬಿ ಬೇಕರಿ, ಸುಪ್ರಭಾತ ಕಾಫಿ ಹೌಸಿನ ಅನ್ನ ಸಾಂಬಾರ್, ಸಂಪಿಗೆ ರೋಡಿನ ಕರ್ನರ್ ಅಂಗಡಿಯ ಬೆಣ್ಣೆ ಗುಲ್ಕನ್ನು, ಅಂದ್ರೆ ಪಂಚಪ್ರಾಣ. ಪ್ರತಿ ದಿನ ಬೇಕು ಅಂತ ಏನಿಲ್ಲ, ವಾರಕ್ಕೆರಡು ಸಲ ಕರ್ಕೊಂಡ್ ಹೋದ್ರು ಓಕೆ. ಇನ್ನು ಹುಡುಗ ಹೇಗಿರ್ಬೇಕು ಅಂದ್ರೆ ತುಂಬಾ ಸುಂದರವಗಿರೋದೇನ್ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್ ಮಾಡ್ಸ್‌ಬೇಕಾಗುತೆ, ಕಪ್ಪು ಬಣ್ಣದ ಹುಡುಗ ಹಾಲಿನಂತ ಮನಸ್ಸು, ನನ್ನನ್ನ ನನ್ನ ಮನೆಯವರನ್ನ ಪ್ರೀತಿಸಿ ಗೌರವಿಸುವ ಹೃದಯವಿರಬೇಕು, , ಸ್ವಲ್ಪ ಪೋಲಿ ಆಗಿದ್ರೆ ಓಕೆ, ಹದ್ದು ಮೀರಿದ್ರೆ ಯಾಕೆ ಅಂತ ಕೇಳ್ತೀನಿ, ಜೀನ್ಸ್ ಹಾಕ್ಲೇಬೇಕು ಅಂತ ಪೀಡಿಸೋ ಹಾಗಿಲ್ಲ, ಚೂಡಿಯಲ್ಲೆ ತುಂಬ ಮುದ್ದಾಗಿ ಕಾಣಿಸ್ಕೊಳ್ಳೋಕು ಬರುತ್ತೆ, ಪ್ರತಿ ಸಲ ಐ ಲವ್ ಯೂ ಹೇಳು ಅಂತ ಪೀಡಿಸೋ ಹಾಗಿಲ್ಲ, ನನಗಿಷ್ಟ ಆದ್ರೆ ಐ ಲವ್ ಯೂ ಅಂತೀನಿ, ಅದ್ರೆ ಲವ್ ಯೂ ಟೂ ಅಂತ ಹೇಳಲೇ ಬೇಕು, ಪಾರ್ಕಲ್ಲಿ ಕೂತಿರೋವಾಗ ಒಂದು ಫೀಟ್ ದೂರ, ನನಗೆ ತುಂಬಾ ಬೇಜಾರಾದಾಗ ನಾನು ಕರೆದಷ್ಟು ಹತ್ತಿರ, ಅಯ್ಯೋ ಪಾಪ ಅನ್ನಿಸಿದ್ರೆ ಯಾರಿಗೂ ಗೊತ್ತಾಗದ ಹಾಗೆ ಅವನಿಗೊಂದು ಸಣ್ಣ ಮುತ್ತು(ಶರತ್ತುಗಳು ಅನ್ವಯಿಸುತ್ತವೆ) ವಾಪಾಸು ಕೊಡುವ ಹಾಗಿಲ್ಲ ಅನ್ನುವ ಕರಾರಿಗೆ ಒಪ್ಪುವುದಾದರೆ ಮಾತ್ರ.

 ಏನಪ್ಪ ಈ ಹುಡುಗೀದು ದೊಡ್ಡ ಲೀಸ್ಟೇ ಇದೆ ಅಂತ ಕೋಪ ಮಾಡ್ಕೋತೀರೇನೋ. ನಿಮ್ಮನ್ನ ಸುಮ್ನೆ ಗೋಳು ಹೊಯ್ಕೊಬೇಕು ಅನ್ನಿಸ್ತು ಅದ್ಕೆ ಹೀಗೆಲ್ಲ ಮಾತಾಡ್ಬಿಟ್ಟೆ.  ಕೊನೆಯವರೆಗೂ ನಾನು ನಿನ್ ಜೊತೆ ಇರ್ತೀನಿ ಅನ್ನುವ ಸಣ್ಣ ಭರವಸೆ ನನಗೆ, ಮತ್ತು ಪ್ರಾಮಾಣಿಕವಾಗಿ ಒಂದೊಳ್ಳೆ ಬದುಕನ್ನ ನಿನ್ನ ಮಗಳಿಗೆ ಕೊಡ್ತೀನಿ ಅನ್ನುವ ಧೈರ್ಯವನ್ನ ನನ್ನ ಅಪ್ಪ ಅಮ್ಮನಿಗೆ ಕೊಡುವ ಯಾರಾದರೂ ಹುಡುಗ ಇದ್ರೆ ಯಾವುದೇ ಶರತ್ತಿಲ್ಲದೆ ಅವನ ಪ್ರೀತಿಗೆ ಎಸ್ ಅನ್ನೋಕೆ ಈ ನವಿಲೂರ ಹುಡುಗಿ ಕಾಯುತ್ತಿದ್ದಾಳೆ. ಪ್ಲೀಸ್ ಫೋನ್ ಮಾಡಿ. ಸ್ಟಿಲ್ ವೈಟಿಂಗ್

ನವಿಲೂರು ಹುಡುಗಿ

 8722೫೯೩೩೧?

 

Advertisements

23 Responses to “ನಂದಿನ್ನೂ ಎಸ್.ಎಸ್.ಎಲ್.ಸಿ ಮುಗಿದಿರಲಿಲ್ಲ,ಕೆಲವರು ಅಲೆಲೆಲೆ ಜಿಂಕೆಮರಿ ಅಂತಿದ್ರು,”

 1. sukhesh June 23, 2011 at 7:05 am #

  ಅಯ್ಯೋ ಸೋಮಣ್ಣ, ಹಿಂಗೆಲ್ಲ ಬರ್ದು tension ಕೊಡ್ತೀಯಲ್ಲೋ…
  ಸಕ್ಕತ್ತಾಗಿದೆ ಲೆಟರ್ರು

 2. ramesh titttemane June 26, 2011 at 7:30 am #

  hudugine irbodu anta last num kand hidiyoke 1 to 0 try maad de… aadre ella bogus num kottiddiri… but tamasheyaagi odiskondu hoytu.

  ramesh thittemane

 3. Raju D H July 11, 2011 at 12:07 pm #

  Tumba interest agi ede, nimage olle imagination power ede. E letter odo yaru ondi=o hudugine baredile anta tilidukoltare.

 4. prakash k gowda August 5, 2011 at 10:04 am #

  i like your later dear friend

 5. Raghu September 6, 2011 at 7:48 pm #

  nice..

  visit my blog @ http://ragat-paradise.blogspot.com

  RAGHU

 6. Anonymous October 9, 2011 at 6:50 am #

  yen swami same hudugi bared haage bariteeeri…… chann
  aagide

  dhanush moodabidre

 7. sneha October 28, 2011 at 5:39 am #

  thumba chennagide i like your letter

 8. shruthi kumar December 21, 2011 at 2:28 pm #

  Hi
  Thumba Kushiaythu.
  Nan hudginu Heege Erbeku ankodidene.

  Nimma Abhimani
  shruthikumar td

 9. cipinindia - RN Narahari December 23, 2011 at 9:57 am #

  ಮೈಸೂರು ಮಲ್ಲಿಗೆ ಕಂಪು, ಕೊಡಗಿನ ಕಿತ್ತಳೆ ರುಚಿ, ಮಲೆನಾಡಿನ ಕಾಪಿ, ನಮ್ಮ ಅವರೇ ಸೊಗಡು ಎಲ್ಲಾ ಒಟ್ಟಿಗೆ ಸೇರಿದರೆ ಸವಿಯೋದು ಕಷ್ಟ ಅಲ್ವ.
  ಇದು ಒಂದು ಸೊಗಸೇ, ಪತ್ರ ಬಹಳ ಚೆನ್ನಾಗಿದೆ

  ಪೀತಿಯಿಂದ
  ನರಹರಿ

 10. Anonymous January 13, 2012 at 12:16 pm #

  nimma patra namma hatra

 11. Anonymous January 13, 2012 at 12:19 pm #

  srini

  nimma patra nange hatra

 12. Anonymous January 19, 2012 at 12:33 pm #

  Really its toooooooooooooooooooooo Good.after reading this comments 1ly i cm 2 kw..tat hudga bardirodu antha superb..wonderful..awesome…words sigtha ella davittu kshme erli..but ur really awesome dude..keep up good work..

  Kind Regards
  Rashmigowda

 13. ನವಿಲಗರಿ February 20, 2012 at 3:42 pm #

  ಸುಕೇಶ್ ಸಾರ್ ಬರ್ದಿದ್ದು ಖುಷಿ ಕೊಡ್ಬೇಖು, ಇಲ್ಲ ಸ್ವಲ್ಪ ಬೇಜಾರ್ ಕೊಡ್ಬೇಖು, ಅಥವ ಬೇಜಾನ್ ಟೆನ್ಷನ್ ಕೊಡ್ಬೇಕು ಅವಗ್ಲೆ ಮಜ ಅಲ್ವಾ?

  ಸರಿಯಾಗಿ ಚೆಕ್ ಮಾಡಿ ರಮೇಶ್ ಸಾರ್…ಸಿಕ್ಕರೂ ಸಿಗಬಹುದು

  ಪ್ರಾಕಾಶ್ ಮತ್ತು ರಾಜು ಥ್ಯಾಂಕ್ಸು, ಧನುಷ್ ಧನ್ಯವಾದ…

  ರಘು ಸಾರ್…ನಿಮ್ಮ ಬ್ಲಾಗ್ ನಾನು ಓದ್ತ ಇರ್ತೀನಿ, ಆದ್ರೆ ನೀವು ನನ್ನ ಹಾಗೆ ಸೋಮಾರಿ ತನ ಜಾಸ್ತಿ.. ಪ್ಲೀಸ್ ಅವಾಗವಾಗ ಪೋಸ್ಟ್ ಮಾಡ್ತಿರಿ….:)

  ಸ್ನೇಹ ಥ್ಯಾಂಕ್ಸ್

  ಶೃತಿ ಕುಮಾರ್ ನಿಮ್ ಹುಡುಗೀನಾ? ಅರ್ಥ ಆಗಲಿಲ್ಲ…. ಏನಾದ್ರೂ ೩೭೭ ಎಫೆಕ್ಟಾ?

  ನರಹರಿ ನಿಮ್ಮ ಕಾಮೆಂಟ್ ತುಂಬಾ ಮುದ್ದಾಗಿದೆ…:)

  ಸ್ರೀನಿ ಅವರೆ.. ನಿಮ್ಮ ಕಾಮೆಂಟ್ ನಮಗೆ ಕಾಂಪ್ಲಿಮೆಂಟ್..:)

  ರಶ್ಮಿ ಗೌಡ್ರೆ ಬಲೆ ಚನ್ನಾಗ್ ಕಾಮೆಂಟ್ ಮಾಡಿದ್ದೀರಿ ಥ್ಯಾಂಕ್ಸ್ ಯಾ

 14. jayakeerthi.m February 27, 2012 at 12:54 pm #

  ri somanna enu anta bardri naaanu nam deshadindda tumba doora idini adre yaavaglu nandeshaddlli idini anno haage maadodu nimma kathegalu nimma baravange shaili bahala sogasaagide nimdu yaavdaadru pustakagalu idre dayavittu nange heli naanu kindkoltene
  intinimma
  jayakeerthi

 15. Shashi Kumar March 6, 2012 at 7:03 am #

  ee pathra nanna PUC ge karedukond hogbidthu… nangu ide thara hudugi sikkidlu… 2 years of PUC life was good… she got good marks.. mine is somehow 1st class… den v both took 1step forward.. my step towards Engineering… but she was not ready to wait for 4yrs… nanna palige nenapu mathra bittu horatu hodalu… 😦 avalu chennagirli antha kelkothini…

 16. Naynaaaaaaaaaaaaaaaaaa March 9, 2012 at 4:20 am #

  Navilugari…………………?

  yakappa estttu channagi bardhuuu nenpugallu mathe bandhu mudhee kuthu nago age madtiyaa………
  nijvagluuu super agii edhee letter,,,!
  nija ninna mathu enadru odidre bejar athava kushi agbeku…………adre nange eradhu ottige agtidhee en madli…………………….?

 17. BHARATHESHA March 12, 2012 at 11:09 am #

  nice
  bharathesha

 18. Naveenkumar.S March 15, 2012 at 11:19 am #

  Hi somu,

  Nimma Letter Channigide, Adare Thumba Bedake Jasti ayathu. Adarlli Condition Bere,

  Nice Keep it up,

  Regards,
  Naveen.S

 19. Anonymous April 26, 2012 at 11:54 am #

  hai somu…
  nimma letter channagilla anta helana andre nanage sullu heloke barala… thumba channagide anta hogalikeya padagala surimaleyannu surisona andre anta padagalu siktane iall,,,,, yen madali ok short and sweet agi heli mugusteeni
  ha chandrana beladingalu yestu sundaravagideyo
  aste channagide nim e patra………
  superrrrrrrrrrrrrrrrrrrrrrrrrrr……………..

 20. inthi ninna preethiya naanyaru June 6, 2012 at 6:32 am #

  reeeee sommmm yenri neevu nan kaige sikkidre ??????????????????????????????????????????????????????????????party kodsovargu bidalla yak gotta?? adu hudgine agidrlu( mamata)anta mysore ante sarig baiskonde

 21. praveen August 25, 2012 at 6:49 am #

  nimma yella kavanagalu aluva hrudayada mathugalannu thorisuthave nimma e kavanagalige nanna savira namanagalu geleyare

 22. siddesh February 23, 2013 at 3:32 pm #

  tumba chanagidy ri somu nima e letter same gowdra maglu brdirotarany idy ri nivu bariyo kavangl ela nima jivna daly nadirody na….

 23. Anonymous February 15, 2014 at 3:02 pm #

  Super ri😊…addu peddu mathamado aragini niv 😊😊😊

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: