ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೆ ಗೆಳತಿ.

19 Jun

 ನಕ್ಷತ್ರದ ಹೆಸರಿನ ನನ್ನ ಮುದ್ದು ಗೌರಿಗೆ, ನನ್ನ ಜಗತ್ತಿನ ಸುಂದರಿಗೆ,ಗೆಳತಿಗೆ,ಆತ್ಮಬಂದುಗೆ, ನನ್ನ ಪಾಲಿನ ಮಮತೆಗೆ,ನನ್ನ ಬದುಕಿನ ಪ್ರತಿ ಕ್ಷಣಗಳನ್ನೂ ಸಾರ್ಥಕವಾಗಿಸಿದ ನನ್ನೊಲುಮೆಯ ಹುಡುಗಿಯ ಬಂಗಾರದ  ಹೃದಯದೊಳಗಿಡುತ್ತಿರುವ ಪ್ರೀತಿ ತುಂಬಿದ ನಾಲ್ಕನೆಯ ಪತ್ರವಿದು. ಮೊದಲ ಮೂರು ಪತ್ರಗಳಲ್ಲಿ ಕೇವಲ ನಿನ್ನೆಡೆಗಿನ ಆಕರ್ಷಣೆಯಿತ್ತು, ಆದರೆ ಈ ಪತ್ರ ಬರೆಯಲು ಕುಳಿತ ಈ ಹುಡುಗನ ಜೋಳಿಗೆಯಲ್ಲಿ ನಿನ್ನೆಡೆಗಿನ ಆಕರ್ಷಣೆಯ ಜೊತೆಗೆ ಆರಾಧನೆಯಿದೆ,ಜೊತೆಗೆ ಎಂದೂ ಮುಗಿಯದ ಪ್ರೇಮವಿದೆ,ಜೊತೆಗೆ ಎಂದೂ ಮುಗಿಯದ ಪ್ರೀತಿಯಿದೆ,ಅದರೆ ಜೊತೆಜೊತೆಗೆ ಎಲ್ಲಿ ನನ್ನ ಕಣ್ಣಿಗೂ ಕಾಣಿಸದಷ್ಟು ದೂರವಾಗಿ ಬಿಡುತ್ತೀಯಾ ಅನ್ನುವ ಸಣ್ಣ…ಕ್ಷಮಿಸು ದೊಡ್ಡ ತಲ್ಲಣವಿದೆ.

 ಗೆಳತಿ ಕೆಲವೊಂದು ಸಲ ನಮ್ಮ ಕಣ್ಣೆದುರಿಗಿರುವ ಪ್ರೀತಿ ಕಾಣಿಸುವುದಿಲ್ಲ, ಸಿರಿವಂತರ ಮನೆಯ ತಿಜೋರಿಗಳಲ್ಲಿ, ರೂಪವಂತರ ಎದೆಯ ಗೂಡುಗಳಲ್ಲಿ,ಪ್ರೀತಿ ಹುಡುಕಲು ಹೊರಟುಬಿಡುತ್ತೇವೆ.  ಹಣದ ಋಣವಿಟ್ಟುಕೊಂಡು ಹುಟ್ಟಿಕೊಂಡ ಪ್ರೀತಿ ಪ್ರೇಮಗಳಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ ಗೆಳತಿ, ಒಂದು ಮುಷ್ಟಿ ಪ್ರೀತಿ ನಮ್ಮ ಈ ಬದುಕನ್ನ ಸುಂದರವಾಗಿ ಕಳೆಯುವಂತೆ ಮಾಡಬಲ್ಲದು. ನಿನಗಾಗಿ ಇಂತ ಸಾವಿರಾರು ಮುಷ್ಟಿ ಪ್ರೀತಿಯನ್ನ ಈ ಎದೆಯ ಗೂಡಿನಲ್ಲಿ  ಬಚ್ಚಿಟ್ಟುಕೊಂಡು ಕುಳಿತಿದ್ದೇನೆ, ನೀನೊಪ್ಪುವ ಮರು ಕ್ಷಣವೇ ಎಲ್ಲ ಪ್ರೀತಿಯನ್ನ ನಿನ್ನ ಮಡಿಲಿಗೆ ಮೊಗೆಮೊಗೆದು ಕೊಟ್ಟು ಈ ಬದುಕನ್ನ ಸಾರ್ಥಕವಾಗಿಸಿಕೊಳ್ಳುವ ಹಂಬಲವಿದೆ ಚಿನ್ನ. ಒಂದೇ ಒಂದು ದಿನವೂ ನಿನ್ನ ಮುಂದೆ ಮಂಡಿಯೂರಿ ಕುಳಿತು ನಿನ್ನೆಡೆಗಿರುವ ನನ್ನ ಅಗಾಧ ಪ್ರೀತಿಯನ್ನ ಹೇಳಿಕೊಳ್ಳಲಾಗಲಿಲ್ಲವಲ್ಲ ಅಂದುಕೊಂಡು ಈ ಕ್ಷಣಕ್ಕೂ ಕಣ್ಣೀರಾಗುತ್ತಲೇ ಇದ್ದೀನಿ. ನಿನ್ನ ಬಳಿ ಹೇಳಿಕೊಳ್ಳುವ ಮನಸ್ಸು ಕಂಡಿತ ಬೆಟ್ಟದಷ್ಟಿದೆ, ಆದರೆ ಹೇಳಿಕೊಂಡ ಮರುಕ್ಷಣವೇ ಎಲ್ಲಿ ನನ್ನಿಂದ ದೂರವಾಗುತ್ತೀಯಾ ಅನ್ನುವ ತಲ್ಲಣಗಳು ಸಾಗರದಷ್ಟಿದೆ.

 ನಿನಗೆ ಒಂದು ಮಾತು. ನೇರವಾಗಿ ಹೇಳಿಕೊಳ್ಳಲಾಗದ ಅಸಹಾಯಕತೆಯಲ್ಲಿ ಈ ಪತ್ರದ ಮುಂದೆ ಕುಳಿತು ನಿನ್ನೊಂದಿಗೆ ಮಾತನಾಡುತ್ತಿದ್ದೇನೆ. ನನ್ನ ಹಾಗೆ ಬದುಕುತ್ತಿರುವ ಪ್ರತಿ ಕ್ಷಣಗಳೂ ನಿನ್ನ ಬಗ್ಗೆಯೇ ಯೋಚಿಸುತ್ತ, ನಿನ್ನ ಒಳಿತನ್ನೆ ಬಯಸುತ್ತ, ಆಗಾಗ ನಿನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸುತ್ತಾ, ಕೇವಲ ನಿನ್ನನ್ನೇ ಧ್ಯಾನಿಸುತ್ತ, ಪ್ರೇಮಿಸುತ್ತ,ಪ್ರೀತಿಸುತ್ತಿರುವಂತಹ ಹುಡುಗ,  “ನೀನು ನನಗಿಷ್ಟ” ಅನ್ನುವ ಆರೂವರೆ ಅಕ್ಷರಗಳನ್ನ ಹೇಳಿಕೊಳ್ಳಲಾಗದೇ ಇರುವ ಪ್ರೀತಿಯ ಹೇಡಿಯಂತಹ ಹುಡುಗ ಮತ್ತೆ ನಿನಗೆ ಸಿಗುವುದಿಲ್ಲ, ಸಿಗಬಾರದೂ ಕೂಡ. ನಿನ್ನ ಚೆಲುವಿಗೆ,ನಗುವಿಗೆ ಸಿರಿತನಕ್ಕೆ, ಮರುಳಾದವರು ಹಲವರು ಇರಬಹುದು, ಆದರೆ ನಿನ್ನ ಅಮಾಯಕತೆಗೆ,ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೆ ಗೆಳತಿ.

 ಜಗತ್ತಿನ ಅತ್ಯಂತ ಪ್ರೇಮಿ ಮತ್ತು ಹೇಡಿ ಹುಡುಗನ ಈ ಪತ್ರವನ್ನ ಓದಿ ಏನಂದುಕೊಳ್ಳುತ್ತಿಯೋ ಅನ್ನುವ ಭಯದಲ್ಲಿ ಕೈ ನಡುಗುತ್ತಿವೆ, ನಿನ್ನ ಬಗೆಗಿನ ಪ್ರೀತಿಯನ್ನ ಬರೆಸಿಕೊಳ್ಳುತ್ತಿರುವ ಈ ಅಕ್ಷರಗಳ ಋಣ ದೊಡ್ಡದಿದೆ, ಇನ್ನೈದು ದಿನದಲ್ಲಿ ನಿನ್ನ ಹುಟ್ಟುಹಬ್ಬ, ನಿನಗೇನು ಉಡುಗೊರೆ ಕೊಡಬಲ್ಲೆನು ಅನ್ನುವುದನ್ನ ಇನ್ನೂ ನಿರ್ಧರಿಸಲಾಗಿಲ್ಲ, ಐದು ದಿನವಲ್ಲ ಇನ್ನೈದೂ ಜನ್ಮಗಳು ಕಳೆದರೂ ಅಷ್ಟೆ, ಈ ಬಡಪಾಯಿ ಹುಡುಗ  ನಿಷ್ಕಲ್ಮಶ ಪ್ರೀತಿ ಮತ್ತು ನಿನಗೊಂದು ಸುಂದರ ಬದುಕನ್ನ ಉಡುಗೊರೆಯನ್ನಾಗಿ ಮಾತ್ರ ಕೊಡಬಲ್ಲ. ಅದಕ್ಕಿಂತ ಹೆಚ್ಚಿನದನ್ನೇನು ಕೊಡಲಿ ನನ್ನ ನಕ್ಷತ್ರದ ಹೆಸರಿನವಳೇ?

                                                                                ಇಂತಿ ನಿನ್ನ ಪ್ರೀತಿಯ

.                                                                                 872259331?

 

Advertisements

22 Responses to “ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೆ ಗೆಳತಿ.”

 1. ನಾಗರಾಜ್ ಎಂ ಎಂ June 21, 2011 at 7:04 am #

  ಪತ್ರಗಳ ಮೇಲೆ ಪತ್ರಗಳು, ಎಲ್ಲಿದ್ಯೋ ಇಷ್ಟುದಿನ ಸೋಮ!!, ಆದರೆ ಬರೆದಿರೋ ಪರ್ತ್ರಗಲೆಳಲ್ಲವೂ ಸೂಪರ್…… ಟೈಮ್ ಸಿಕ್ಕಾಗೆಲ್ಲ ಬರೀತಾ ಇರು ಮಾರಾಯ.

 2. Anonymous July 6, 2011 at 2:50 pm #

  sup
  ………………………..r

 3. Swami July 12, 2011 at 7:37 am #

  Superrrrrrrrrr Letter

 4. maruthi August 2, 2011 at 5:26 am #

  nim patrakke beragade

 5. santhu August 27, 2011 at 10:43 am #

  ಹಾಯ್ ತುಂಬ ಚೆನ್ನಾಗಿ ಬರಿತಿಯ ಮುಂದುವರಿಸು

 6. swathi October 28, 2011 at 5:48 am #

  hai frined letter thumba chennagide

 7. usha December 12, 2011 at 9:42 am #

  chindi maga super raagi baritiya. continue……………………
  and god bless you.

 8. nayana December 24, 2011 at 11:21 am #

  Thumba channagide kanri thumbane feel haguthe……
  Simply superb…….. rudhayadindha preethisuvarige preethi sigodhu thumba
  kasta…………..alvaa…

 9. bublygirl January 16, 2012 at 1:23 pm #

  sooooooooper

 10. swamy February 6, 2012 at 6:13 pm #

  ಬಹಳ ಚೆನ್ದನಾಗಿದೆ ರೀ ನಿಮ್ಮ ೀ ಪತ್ರ ನಾನು ಸಹ ಹೀಗೆ ಪ್ರೀತಿ ಮಾಡ್ತಾ ಇದ್ದೀನಿ

 11. awesome Lines….

 12. ನವಿಲಗರಿ February 20, 2012 at 3:44 pm #

  ಪತ್ರ ಮೆಚ್ಚಿರುವ ಎಲ್ಲರಿಗೂ ಮೆಚ್ಚಿಗೆಯ ಧನ್ಯವಾದಗಳು

  ಸೋಮು

 13. Anonymous March 7, 2012 at 8:12 am #

  tumb chengide nannu E ritine huchu pritiyli biddu ega sayoku agde bduklu agde hodadth edini

 14. Naynaaaaaaaaaaaaaaaaaa March 9, 2012 at 4:30 am #

  Navilugari………………?

  SAKKATHAGIDHEEEEEEEEEE……………………….!

 15. Sunil May 9, 2012 at 3:29 pm #

  Very nice expression. god luck.

 16. naveen June 13, 2012 at 1:51 pm #

  masth re…

 17. venkatesh July 6, 2012 at 6:46 am #

  somu sakkattagide

 18. venkatesh veena July 6, 2012 at 6:49 am #

  somu avare nim ondondu aksharagalu pritsor palige gade matu galu iddahage hage inta hosa pagegalu barli

 19. Anonymous July 17, 2012 at 10:58 am #

  nimma kavanagalu tumba chennagive..

 20. Avishek July 17, 2012 at 10:59 am #

  nimma kavanagalu tumba chennagive..

 21. mahantesh .H.k Chitradurga July 26, 2012 at 6:32 am #

  Nimma kavana tumba chennagide sir

 22. Suresh .S Chitradurga July 26, 2012 at 6:34 am #

  Super…………..sir

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: