ಕನ್ನಡಿ ಮುಂದೆ ಈಗಾಗಲೇ ನೂರಾರು ಸಾರಿ ರಿಹರ್ಸಲ್ ಮಾಡಿ ಆಗಿದೆ

19 ಜೂನ್

ಪರಿಚಯವಾಗಿ ಮೂರು ವರ್ಷದ ಮೇಲಾಗಿದ್ದಾರೂ ಒಂದು ಸಲವೂ ಒಟ್ಗೆ ನೀವಿಬ್ರೂ ಸಿನಿಮಾಗೆ ಹೋಗಿಲ್ವಾಅಂದುಕೊಂಡುಅದೇನೂ ಶತಮಾನದಜೋಕುಅನ್ನುವಂತೆ ಕಿಸಕ್ಕನೆ ನಗುತ್ತಿದ್ದಾರೆ ನನ್ನನ್ನ ನೋಡಿಕೊಂಡು ನನ್ನ ಗೆಳೆಯರು.ಸಿನಿಮಾಇರಲಿ, ಒಂದು ಪಾರ್ಕಿನ ಮುಖವನ್ನೂ ನೋಡಿಲ್ಲವೆಂದುಕೊಂಡರೆಏನಂದುಕೊಂಡಾರು?ಅದು ಸಾಯಲಿ ಬಿಡು, ಇಲ್ಲಿಯವರೆಗೂಒಬ್ಬರನ್ನೊಬ್ಬರೂ ನೋಡದೇ ಪ್ರೀತಿಸುತ್ತಿರುವ ವಿಷಯ ತಿಳಿದರೆ ಎದೆಒಡೆದುಕೊಂಡು ಸತ್ತಾರು.ಮೊನ್ನೆಎಲ್ಲರೂ ಕೇಕೆ ಹಾಕಿಕೊಂಡು ನಗುತ್ತಿದ್ದರು. ಸುಮ್ಮನಾಗಿಬಿಟ್ಟೆ, ಅವರಿಗೆ ಸಿನಿಮಾಥಿಯೇಟರಿನಕಾರ್ನರ್ ಸೀಟಿನ ಕತ್ತಲೆಯಕುತೂಹಲಕ್ಕಿಂತ ಮೊಬೈಲಿಗೆ ಕಿವಿಗೊಟ್ಟುಒಬ್ಬರಿಗೊಬ್ಬರು ಪ್ರೀತಿಸಿಕೊಳ್ಳುವುದರಲ್ಲಿನ  ಸುಖ ತಿಳಿದಿಲ್ಲ. ಪರಸ್ಪರದೈಹಿಕ ಆಕರ್ಷಣೆಗೊಳಗಾಗಿ ದೂರಇದ್ದುಕೊಂಡೇ ಹತ್ತಿರವಾಗುವ ಸುಖವನ್ನ ಮರೆತಿದ್ದಾರೆ. ಪ್ರೀತಿಯೆಂದರೆ ಸಿನಿಮಾ ಪ್ರೀತಿಯೆಂದರೆಕಾಫೀಡೇ, ಪ್ರೀತಿಯೆಂದರೆ ವೀಕೆಂಡಿನಎಂ.ಜಿರೋಡು ಬ್ರಿಗೇಡ್‌ರೋಡುಅಂದುಕೊಂಡವರೊಂದಿಗೆ ನನ್ನದೆಂತ ಮಾತುಅಂದುಕೊಂಡು ಸುಮ್ಮನಿದ್ದರೂ ಬೇಕೂ ಅಂತಾನೆಕೆಣಕುತ್ತಿದ್ದರು.ಕೊನೆಗು ತಾಳ್ಮೆ ಕಳೆದಿಕೊಂಡು ಸರಿ ನನ್ನ ಪೂರ್ಣಿಯಜೊತೆಗೆ ನಾಳೆನೇ ಬೇಕಾದರೆ ಸಿನಿಮಾಗೆ ಹೋಗ್ತೀನಿ ಅಂತ ಬೆಟ್‌ಕಟ್ಟಿಯೇ ಬಿಟ್ಟೆ.

ಅವರಿಗೆ ನನ್ನಜೊತೆ ಬೆಟ್‌ಕಟ್ಟುವುದಕ್ಕಿಂತ ನಿನ್ನಂತ ಸುಂದರಿಯನ್ನ ನೋಡೋಕುತೂಹಲವಿರಲೂಬಹುದು.ನನಗೆ?ನನಗೆ ನಿನ್ನ ನೋಡಲುಕುತೂಹಲವಿಲ್ಲವಾ?ನಿನ್ನ ನೋಡುವ ಘಳಿಗೆಗಾಗಿ ನಾನು ಕಾದು ಕುಳಿತ ಘಳಿಗೆಗಳೆಷ್ಟೋ, ಪರಸ್ಪರ ನೋಡಬೇಕೆಂಬ ಹಂಬಲ ಹೆಚ್ಚಾದಾಗ ಪ್ರತಿ ಸಲವೂ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು, ಮೀಟ್‌ಆದ್ರೆಈಗಿರುವಕುತೂಹಲ ಉಳಿಯೋದಿಲ್ಲ ಅಂತ.ಕುತೂಹಲ ಉಳಿಯೋದಿಲ್ಲ ಅನ್ನುವುದು ಸತ್ಯವಅಥವ ಪರಿಚಯದ ಮೊದಲ ದಿನಗಳಲ್ಲಿ ಒಬ್ಬರಿಗೊಬ್ಬರನ್ನ ನೋಡದೇ ಪ್ರೀತಿಸಬೇಕುಅಂದುಕೊಂಡ ನಮ್ಮ ಮಾತು ಸತ್ಯವ?ಬಿಡು ಮಾಡಿಕೊಂಡಒಪ್ಪಂದವನ್ನ ನಾನೆ ಮುರಿಯುತ್ತಿದ್ದೀನಿ ಸ್ನೇಹಿತರ ಸಲುವಾಗಿ.ಸ್ನೇಹಿತರ ಸಲುವಾಗಿ ಅನ್ನೋದು ಮಾತು ಸತ್ಯವೇಆದರೂ ನಿನ್ನ ನೋಡಬೇಕೆಂಬ ಹಂಬಲ ಹೆಚ್ಚಾದುದ್ದರಿಂದಲೇ ನಾನು ಬೆಟ್‌ಕಟ್ಟಿದ್ದು ಪೂರ್ಣಿ.

ನಾಳೆ ಹೋಗುವ ಸಿನಿಮಾಗೆಇವತ್ತಿಂದಲೇ ಭರ್ಜರಿತಯಾರಿ ಮಾಡಿಕೊಂಡಾಗಿದೆ, ಕನ್ನಡಿ ಮುಂದೆ ಈಗಾಗಲೇ ನೂರಾರು ಸಾರಿರಿಹರ್ಸಲ್ ಮಾಡಿ ಆಗಿದೆ, ಮೊದಲು ನೀನು ಎದುರಾದಾಗ ಏನು ಮಾಡ್ಬೇಕುಅಂತಾನೆ ತಿಳೀತಿಲ್ಲ. ನಮಸ್ಕಾರಅನ್ನಲ? ಹೇಗಿದ್ದೀಯಅನ್ನಲ? ಇಪ್ಪತ್ತು ನಿಮಿಷ ಮೊದಲೇ ಬಂದಿದ್ದರೂ ಏನು ಇಷ್ಟು ಲೇಟುಅಂದುಬಿಡಲ?ಬನ್ರಿ ನಿಮ್ಗೇನೆ ಕಾಯ್ತಿದ್ದೆಅನ್ನಲ?ಅಥವಾ? ಹೋಗು ನಿಜಕ್ಕೂಏನ್ ಮಾಡ್ಬೇಕುಅಂತ ತಿಳಿತಿಲ್ಲ, ಮೊದಲೇಚನ್ನಾಗಿತ್ತು, ಮೊಬೈಲಿನಲ್ಲೇ ಬೇಕಾದರೇ ಸಂಜೆಯಯವರೆಗೂ ಲವ್ ಯೂ ಪೂರ್ಣಿಅಂದುಬಿಡಬಹುದಿತ್ತು, ಮೊಬೈಲಿನಲ್ಲಿ ನಿನ್ನ ತಬ್ಬಿಕೊಳ್ಳುವ, ಮುತ್ತಿಕ್ಕುವ ಸ್ಮೈಲಿಗಳನ್ನ ಕಳಿಸಿಬಿಟ್ಟು ಸಭ್ಯ“ಪೋಲಿ” ಅನ್ನಿಸಿಕೊಳ್ಳಬಹುದಿತ್ತು, ನಿನ್ನ ನಾಳೆ ನಾನು ಭೇಟಿ ಆಗ್ತೀನಿ ಅನ್ನುವುದು ಪಕ್ಕ ಆಗಿ ಇವತ್ತೇ ಮಾತುಕಡಿಮೆಯಾಗಿದೆ. ಮನೆಯವರೆಲ್ಲ ವಿಚಿತ್ರವಾಗಿ ನೊಡ್ತಿದ್ದಾರೆ ಪೂರ್ಣಿ.

ಮೊದಲೆ ಪೆದ್ದಿ ನೀನು, ಮೆಜೆಸ್ಟಿಕ್ಕಿಂದ ಮಾರ್ಕೆಟ್‌ಗೆ ಹೋಗೋಕೆ ಒದ್ದಾಡ್ತೀಯಅನ್ನೋದು ನನಗೆ ಗೊತ್ತಿದೆ.ಅಡ್ಡ್ರೆಸ್‌ತೆಗೆದುಕೋ, ನಿಮ್ಮ ವಿದ್ಯಾರಣ್ಯಪುರ ಬಸ್ ಸ್ಟಾಪಿಂದಕಾಮಕ್ಯಥಿಯೇಟರಿಗೆ ಸುಮಾರು23ಕಿಲೋಮೀಟರ್. ಹಾಗೆ ಔಟರ್‌ರಿಂಗ್‌ರೋಡ್‌ಆದ್ಮೇಲೆ ಬಿ.ಇ.ಎಲ್‌ರೋಡ್, ಇದಾದ್ಮೇಲೆ ಹಾಗೆ ಮತ್ತಿಕೆರೆ ಮೈನ್‌ರೋಡಿಂದಯಶವಂತಪುರ ಫ್ಲೈಓವರ್ ಮುಖಾಂತರ ನವರಂಗ್ ಸರ್ಕಲ್‌ಗೆ ಬಾ. ಹಾಗೆ ಮಾಗಡಿರೋಡುಕಾರ್ಡ್‌ರೋಡ್‌ಅಂಡರ್ ಪಾಸ್ ಮೂಲಕ ವಿಜಯನಗರಕ್ಕೆ ಬಂದು ಹಾಗೆ ದೀಪಾಂಜಲಿ ನಗರದಿಂದ ಬಲಕ್ಕೆ ತಿರುಗಿಕೊಂಡುಅಲ್ಲೆ ನಾಯಂಡನಹಳ್ಳಿ ಹತ್ರ ಲೆಫ಼್ಟ್‌ತಗೊಂಡು ಹಾಗೆ ೩ ಕಿಲೋಮೀಟರ್ ನಿನ್ನ ಸ್ಕೂಟಿ ಪೆಪ್‌ನ ಕಿವಿ ಹಿಂಡು ಸಾಕು ಅಲ್ಲೆ ಬಲಕ್ಕೆ ಕಾಮುಕ್ಯಥಿಯೇಟರ್‌ಇದೆ. ಅಡ್ಡ್ರೆಸ್‌ಇನ್ನು ಸರಿಯಾಗಿಗೊತ್ತಗದೇಇದ್ದರೆ ಹೇಳು, ಪ್ರತಿತಿರುವು, ಪ್ರತಿ ಸಿಗ್ನಲ್, ಎಲ್ಲವನ್ನು ಬರೆದು ನಿನಗೆ ಕಳಿಸುತ್ತೇನೆ. ಎಲ್ಲವೂ ನನಗೆ ಗೊತ್ತಿದೆ.ನಿನ್ನ ನೋಡುವ ಹಂಬಲದಿಂದಅದೆಷ್ಟು ಸಲ ನಿನ್ನ ಮನೆಯವರೆಗೆ ಬಂದು ವಾಪಾಸ್ ಬಂದಿಲ್ಲ ಹೇಳು?ಇಲ್ಲಿಗೆ ಬಂದಾದ ಮೇಲೆ ಇಬ್ಬರೂಒಬ್ಬರನ್ನ ಹುಡುಕುವುದೇ ಬೇಡ, ಹೃದಯಗಳಿಗೆ ತಮ್ಮ ಸಂಬಂಧಿಕರನ್ನಗುರುತಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ನಿನ್ನಲ್ಲಿಒಂದು ವಿನಂತಿ, ಅಪ್ಪಿತಪ್ಪಿಯೂ ನಿನ್ನತೀರ್ಥರೂಪುತಂದೆಯವರೂದೂರ್ವಾಸ ಮುನಿಗಳ ಪರಮ ಶಿಷ್ಯರೂ ಆದ  ಮುನಿರಾಜಯ್ಯನವರಿಗೆ ನಮ್ಮ ಈ ಮಾಸ್ಟರ್ ಪ್ಲಾನ್ ತಿಳಿಯದಂತೆ ನೋಡಿಕೋ. ನಾಳೆಯ ಸಿನಿಮಾ, ಸಿನಿಮಾದಕತ್ತಲು, ನಿನ್ನ ಬೆಚ್ಚನೆಯ ತೋಳು, ಎಲ್ಲವನ್ನ ನೆನಪಿಸಿಕೊಳ್ಳುತ್ತಾ ….. !

ಸದ್ಯಕ್ಕೆ ಏನ್ ಇಲ್ಲ ಮೊಬೈಲು ನೋಡು ಒಂದು ಮುತ್ತು ಕಳುಹಿಸಿದ್ದೇನೆ. ವಾಪಾಸ್ ಕಳುಹಿಸತಕ್ಕದ್ದು.

                                                                                                ನವಿಲೂರ್ ಹುಡ್ಗ

                                                                                                 3622

 

Advertisements

One Response to “ಕನ್ನಡಿ ಮುಂದೆ ಈಗಾಗಲೇ ನೂರಾರು ಸಾರಿ ರಿಹರ್ಸಲ್ ಮಾಡಿ ಆಗಿದೆ”

  1. Naynaaaaaaaaaaaaaaaaaa ಮಾರ್ಚ್ 9, 2012 at 5:10 ಫೂರ್ವಾಹ್ನ #

    Navilugari…………………..?

    channagidheee……………………….
    astena,,,,,,,,,,,,,,,,,,,,,,,,,,,,,,?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: