ಲವ್ ಮಾಡ್ತೀಯಾ ಅಂತ ಕೇಳ್ತಿಲ್ಲ, ಮದುವೆ ಆಗ್ತೀಯ ಅಂತ ಕೇಳ್ತಿದ್ದೀನಿ

19 ಜೂನ್

ಪ್ರತಿಷ್ಠಿತ ಸರ್ಕಾರಿಪಿ.ಡಬ್ಲೂ.ಡಿಇಲಾಖೆಯಯಲ್ಲಿ ನೌಕರಿ ಮಾಡ್ತಇರೋಒಂದು ಬ್ಯೂಟಿಫುಲ್ ಹುಡುಗಿಗೆ, ಅಟ್ಲೀಸ್ಟ್ ಎಸ್.ಎಸ್.ಎಲ್.ಸಿ.ಪಾಸ್ ಮಾಡೋಕೂ ಆಗ್ದೆ ಎರೆಡೆರೆಡುಸಲ ಫೇಲ್ ಆಗ್ದೇ ಇರೋ ಸೋಮಾರಿ ಹುಡುಗಒಂದ್ ಲವ್ ಲೆಟರ್ ಬರಿಯೋಕ್ ಹೋದ್ರೆ ಹೇಗಿರತ್ತೆಗೊತ್ತ ಹುಡುಗಿ?ಇದೇ ತರ ತಗಡುತಗಡಾಗಿರತ್ತೆ.ಮೊದಲಿಗೆ ನಾನು ನಿನ್ನ ವಿಳಾಸ ಹುಡ್ಕೋಕೆ ಪಟ್ಟ ಕಷ್ಟಗಳನ್ನ ನೆನೆಸಿಕೊಂಡ್ರೆ, ಮೂರು ಮಾಹಾಭಾರತದಕಥೆ, ಎರಡುರಾಮಾಯಣದ ವ್ಯಥೆ, ಒಂದಷ್ಟುಕನ್ನಡ ಸಿನಿಮಾಗಳ ಸರಕು, ಮತ್ತಷ್ಟು ಗೋಳಿನ ಸೀರಿಯಲ್ಲುಗಳ ಸಾವಿರಾರು ಎಪಿಸೋಡುಗಳ ಸ್ಕ್ರೀನ್ ಪ್ಲೇ ಖಂಡಿತಆಗುತ್ತೆ.ನಿನ್ನತುಮಕೂರಿನ ಆದರ್ಶನಗರ್,ಅಶೋಕನಗರ್,ಎಸ್.ಐ.ಟಿ,ಎಂ.ಜಿ ರೋಡು,ಗಿರಿನಗರ, ಸೋಮೇಶ್ವರದ ಬೀದಿಬೀದಿಗಳನ್ನೆಲ್ಲ ಅಲೆದು ಕೊನೆಗೆ ಕೃಷ್ಣ ನಗರದ ನಿನ್ನ ಮನೆಯ ವಿಳಾಸ ಹುಡುಕುವಷ್ಟರಲ್ಲಿ ನಾನೂ ಕೂಡಇಪ್ಪತ್ತೊಂದನೆಯ ಶತಮಾನದ ವಾಸ್ಕೋಡಿಗಾಮನಾಗಿ ಹೋಗಿದ್ದೆ.

ಈ ಪತ್ರದ ಮೊದಲ ಸಾಲನ್ನ ಬರಿಯೋಕು ಕೆಲವಾರು ಗಂಟೆಗಳನ್ನ ನೀರಿನಂತೆಕರ್ಚು ಮಾಡಿದ್ದೀನಿ.ಕೊನೆಗೂ ನಿನಗೆ ನಾನು ಏನಂತಕರಿಬೇಕುಅಂತ ನಿರ್ಧರಿಸೋಕೆಆಗ್ಲೇಇಲ್ಲ. ವಿಜಿ ಅನ್ಬೇಕ? ವಿಜಯಅಂತ ಪ್ರೀತಿಯಿಂದಕರಿಬೇಕು? ಜಾನುಅಂತ ಮುದ್ದಿನಿಂದ ಕೂಗಬೇಕಾ? ಹೀಗೆ ನನ್ನಎಲ್ಲ ಪ್ರಯತ್ನಗಳು ವಿಫಲವಾದ ನಂತರ ನಿನಗೆ ನಾನು ಇಟ್ಟ ಪ್ರೀತಿಯ ಹೆಸರುತುಮಕೂರುತುಂಟಿ.

 ನಾನು ರೀತಿರಿವಾಜುಇಲ್ಲದ ಹುಡುಗ.ಸೋ ಡೈರೆಕ್ಟ್‌ಅಟ್ಯಾಕ್‌ಅಂತಾನೆಅಂದ್ಕೊ.ನಂಗೆ ನೀನಂದ್ರೆ ಇಷ್ಟ.ತುಂಬ ಇಷ್ಟಾ ಅಂತಾನೆಅಂದ್ಕೊ ಪರ್ವಾಗಿಲ್ಲ. ನಿಂಗೆ ಈ ಹುಂಬನ ಜೊತೆ ಲೈಫ್‌ಇಡೀಜೊತೆಗಿರೋಕ್ ಇಷ್ಟಾನಾ?  ಶಾಸ್ತ್ರ ಸಂಪ್ರದಾಯದ ಪ್ರಕಾರ ನಿಂಗೆ ಅಪ್ಲಿಕೇಷನ್ ಹಾಕಿ ನೀನ್‌ಅದ್ಕೆ ಒಪ್ಗೆ ಕೊಟ್ಟು, ನೀನ್ ಒಪ್ಗೆ ಕೊಡೋವರೆಗು ನಾನ್ ನಿನ್ ಹಿಂದೆ ಸುತ್ತಾಡಿ, ನಿನ್ ಹತ್ರಉಗುಸ್ಕೊಂಡು, ನಾನ್ ಬೇಜಾರ್ ಆಗಿ, ಮತ್ತೆ ನಾನ್ ಬೇರೆ ಹುಡುಗಿ ಹುಡುಕೊಂಡ್ ಹೋಗಿ, ನೀನ್ ನನಗೆ ಮಿಸ್ ಆಗಿ, ಇದೆಲ್ಲ ಬೇಕಾ?ಪತ್ರತಲುಪಿದ್‌ಕೂಡ್ಲೇಒಂದ್ ಪತ್ರ ಕಳಿಸಿಬಿಡು.ನಿಂಗೆ ನನ್ನಿಂದ ಪ್ರತಿದಿನ ಒಂದ್‌ಕ್ವಿಂಟಾಲ್ ಪ್ರೀತಿಒಂದ್‌ಕ್ವಿಂಟಾಲ್ ಮುದ್ದು, ಒಂದುಕ್ವಿಂಟಾಲ್ ಮಮತೆ, ಒಂದುಕ್ವಿಂಟಾಲ್‌ಅಕ್ಕರೆ, ಜೀವನ ಪರ್ಯಂತ ಸಿಗುತ್ತೆ.ಜೀವನ ಪರ್ಯಂತಕಷ್ಟಪಟ್ಟುದುಡಿತೀನಿ ನಿನ್ನಚನ್ನಾಗ್ ನೋಡ್ಕೋತೀನಿ ಇಷ್ಟ್ ಸಾಕಲ್ವ ?ಇದ್ಕಿಂತ ಹೆಚ್ಚ್ಗೆ ಒಬ್ಬ ಹುಡುಗಏನ್ ಹೇಳೊಕ್ ಸಾಧ್ಯ ಹೇಳು?

 ಸ್ವಲ್ಪಒರಟ, ಸಕತ್ ಮುಂಗೋಪಿ, ಸ್ವಲ್ಪಗಲೀಜು, ಸ್ವಲ್ಪ ಸೋಮಾರಿ, ಒಂದು ಸಣ್ಣಕೆಲ್ಸ, ಇದು ಸಧ್ಯದ ನನ್ ಬಯೋಡೇಟ.ನೀನು ನನಗೆ ಸಿಗುವುದೇ ಆದ್ರೆಇದೆಲ್ಲಖಂಡಿತ ಬದಲಾಗುತ್ತೆ, ಒಂದೊಳ್ಳೆ ಕೆಲ್ಸ ಹಿಡಿತೀನಿ, ಒರಟುತನಕಡ್ಮೆಆಗುತ್ತೆ, ನಿನ್ ಮುದ್ದು ಮುಖ ನೋಡಿದ್ರೆ ಕೋಪ ತನ್ನಿಂತಾನೆ ಹೊರಟ್‌ಹೋಗುತ್ತೆ,ಯಾವುದಕ್ಕೂ ನೀನ್ ಮನ್ಸು ಮಾಡ್ಬೇಕು ಅಷ್ಟೆ.ಪತ್ರನಇಷ್ಟ್ ವರಟಾಗಿ ಬರ್ದಿದ್ದಾನಲ್ಲಅಂದ್ಕೊಬೇಡ ಎಸ್.ಎಸ್.ಎಲ್.ಸಿ.ಫೇಲ್‌ಆದ ಹುಡುಗನಿಂದ ನೀನ್‌ಇನ್ನೆಂತ ಪತ್ರ ನಿರಿಕ್ಷಿಸೋಕ್ ಸಾಧ್ಯ ಹೇಳು?ಪತ್ರಒರಟಾಗಿದೆ ಅಷ್ಟೆ, ಆದ್ರೆಇಂಥಒರಟು ಹುಡುಗನ ಹತ್ರಾನು ಪ್ರೇಮ ಪತ್ರ ಬರೆಸಿಕೊಳ್ಳುವ ಅದೃಷ್ಟ ನಿಂಗಿದ್ಯಲ್ಲಜಾನು?ನೀನ್‌ಒಂಥರ ಸೂಪರ್‌ಅಲ್ವಾ?ತುಂಬಾ ಪ್ರಾಮಾಣಿಕ ಹುಡುಗ್ರು ಸಿಗೋದು ಈಗಿನ್‌ಕಾಲದಲ್ಲಿತುಂಬಾ ಕಷ್ಟ ಅಂತೆ.ಎಲ್ಲ ಹುಡುಗರ ಹಾಗೆ ಲವ್ ಮಾಡ್ತೀಯಾಅಂತ ಕೇಳ್ತಿಲ್ಲ, ಮದುವೆಆಗ್ತೀಯಅಂತ ಕೇಳ್ತಿದ್ದೀನಿ.ಎಷ್ಟು ಜನ ಹುಡುಗರಿಗೆಇಂಥ ನಿಯತ್ತಿರುತ್ತೆ ಹೇಳು ಜಾನು?ಮನೆ ಬಾಗಿಲಿಗೆ ಅದೃಷ್ಟ ಹುಡುಕೊಂಡ್ ಬಂದಿದೆಅಂದ್ಕೊಂಡ್ ಬಿಡು, ಬಿಟ್ರೆಚಾನ್ಸ್ ಸಿಗಲ್ಲ.ಈಗಾಗಲೇ ಪಕ್ಕದ ಮನೆಯ ಲಕ್ಷಕ್ಕನ ಮಗಳು ಯಾಕೋಒಂಥರಾನೋಡ್ತಾ ಇರ್ತಾಳೆ, ಹಾಳಾದ್ ವಯಸ್ಸುಯಮಾರ್‌ಬಿಟ್ಟುನಿಂಗೆ ಬೀಳೋ ತಾಳಿ ಅವಳಿಗೆ ಬಿದ್ರೆ ಕಷ್ಟ.ತುಂಬಾಎನ್ ಬೇಜಾರ್‌ಇಲ್ಲ, ನಿನ್ನಂತಒಂದು ಹುಡುಗಿ ಮಿಸ್ ಆಗ್ತಾಳಲ್ಲ ಅಂತ ಸ್ವಲ್ಪ ಬೇಜಾರು ಅಷ್ಟೆ.ಸರಿ ಸಧ್ಯಕ್ಕೆ ಇಷ್ಟು ಸಾಕು, ಪತ್ರ ಓದಿ ರಿಪ್ಲೆ ಮಾಡಿದ್ರೆ ನಾನ್‌ ಅದೃಷ್ಟವಂತಾ .ಇಲ್ಲದಿದ್ರೆ ನೀನು ದುರದೃಷ್ಟವಂತೆ.

                                                                                                ಬೆಂಗಳೂರು ಹುಡ್ಗ.

                                                                                                ನವಿಲೂರ್ ಪಾಳ್ಯ.

Advertisements

6 Responses to “ಲವ್ ಮಾಡ್ತೀಯಾ ಅಂತ ಕೇಳ್ತಿಲ್ಲ, ಮದುವೆ ಆಗ್ತೀಯ ಅಂತ ಕೇಳ್ತಿದ್ದೀನಿ”

 1. ಅನಾಮಿಕ ಅಕ್ಟೋಬರ್ 16, 2011 at 4:49 ಅಪರಾಹ್ನ #

  nija helodu ollede …………………..adre….. ok
  did she replyed u dear

 2. ಅನಾಮಿಕ ಅಕ್ಟೋಬರ್ 16, 2011 at 4:51 ಅಪರಾಹ್ನ #

  helllllllloooooooooooooooooo…………………….did she reply u

 3. Chidu Gowda ನವೆಂಬರ್ 19, 2011 at 4:46 ಅಪರಾಹ್ನ #

  so niceeeeeeee

 4. Chidu Gowda ನವೆಂಬರ್ 19, 2011 at 4:47 ಅಪರಾಹ್ನ #

  yssssss so funnyyyy

 5. ಅನಾಮಿಕ ಜನವರಿ 27, 2012 at 10:19 ಫೂರ್ವಾಹ್ನ #

  jyo says

  so nice………..

 6. Naynaaaaaaaaaaaaaaaaaa ಮಾರ್ಚ್ 9, 2012 at 5:30 ಫೂರ್ವಾಹ್ನ #

  navilugarii……………?

  :)vaskodigama………….pathra tumba bombatagidhe………..
  yav hudgi thane beda anthale elu,,,,,,,,,,,,,,,,,,,?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: