ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆ ಇರ್ತೀರ?

14 ಜನ

ಜಗತ್ತಿನ ಸಾಧಾರಣ ಸುಂದರಿ,ಹಾಗು ನನ್ನಜಗತ್ತಿನ ದೀಪಿಕ,ಐಶು,ಜಿಂಟಾ,ರಾಧಿಕ,ರಮ್ಯ,ದಿವ್ಯ,ಸೌಮ್ಯ ಕಾವ್ಯರಿಗಿಂತಲೂ ಎರಡು ಕೈ ಮಿಗಿಲಿಲಾದ, ಜಗತ್ತಿನಎಲ್ಲ ಪೋಲಿ ಹುಡುಗರ ಪಾಲಿನ ಸೋದರಿ,ಹಾಗು ನನ್ನ ಪಾಲಿನ,ಪುಟ್ಟಿ,ಪಾಪು, ಜಾನು ಮುದ್ದು, ಲವ್ಲಿ,ಬಂಗಾರು,ಸೋ ಸ್ವೀಟಿ ಚೂಟಿಯಾದ, ರಾಜಾಜಿ ನಗರದದಗ್ರೇಟ್ ವಿವೇಕಾನಂದಕಾಲೇಜಿನ,ಸಮಸ್ತ ಸುಂದರ ಸುಂದರಿಯರ ಪಾಲಿನ ಸುಹಾಸಿನಿಯಾದ, ಹಾಗು ಕಬ್ಬನ್ ಪೇಟೇ ಅವಿನ್ಯೂರೋಡಿನ ಲೋಟಸ್ ಫ್ಯಾನ್ಸಿ ಸ್ಟೋರಿನಯಜಮಾನಿಯಾದ, ಎಲ್ಲಕ್ಕಿಂತಲೂ ೨೦೧೨ ಮಾರ್ಚ್ ೧೪ ಮತ್ತು ೧೫ರಂದು ನನ್ನ ಮೊದಲ ಹಾಗು ಕೊನೆಯ ಹೆಂಡತಿಯಾಗುವತಯಾರಿಯಲ್ಲಿರುವ ಹಾಗು, ೨೦೧೩ ಮಾರ್ಚ್ ೧೪ ಅಥವ ೧೫ರಂದು ನನ್ನ ಮುದ್ದು ಮಗುವಿನ ತಾಯಿಯಾಗಲುಗಡಿಬಿಡಿಯಲ್ಲಿರುವ,ನನ್ನ ಪ್ರೀತಿಯ ನಳಿನಿ ಮೇಡಮ್‌ಗೆ, ಈ ಪತ್ರದ ಮೂಲಕ ಲವ್ ಯೂಅಂತ ಹೇಳ್ತಾ ಇದ್ದೀನಿ,ಜೊತೆಗೆ ಮೊನ್ನೆತಾನೆ ಆಚರಿಸಿಕೊಂಡ ನಿಮ್ಮ ಬರ್ಥ್‌ಡೇ ಗೆ ವಿಷ್ ಮಾಡಲಾಗದ ನನ್ನ ಮರೆಗುಳಿತನವನ್ನ ಕ್ಷಮಿಸಿ ಮೇಡಂಅನ್ನುತ್ತ ಮತ್ತೊಮ್ಮೆ ಲವ್ ಯೂಅಂತಿದ್ದೀನಿ,

ಚಿನ್ನಾ, ಈ ಬದುಕು ನನ್ನನ್ನಎಲ್ಲಿಂದಎಲ್ಲಿಗೆಕರೆದುಕೊಂಡು ಬಂತುಅಂತಯೋಚಿಸುತ್ತಾ ಹೊರಟರೆಅದೇ ನಾಲ್ಕು ಮಾಂಗಲ್ಯ,ಐದುರಂಗೋಲಿ ಸೀರಿಯಲ್ಲುಗಳ ಎಪಿಸೋಡುಗಳಾಗುವಷ್ಟು ಸರಕಾಗುತ್ತದೆ,ನನ್ನಂತ ಸಾಧಾರಣ ಹುಡುಗನಿಗೆ,ನಿಮ್ಮಂತ ಸಿಂಪಲ್ ಡಿಂಪಲ್ ಸೂಪರ್ ಹುಡುಗಿಯನ್ನಜೊತೆ ಮಾಡ್ತಇರೋ ನಮ್ಮಎರಡೂ ಮನೆಯವರಿಗೆಥ್ಯಾಂಕ್ಸ್ ಹೇಳ್ಬೇಕು ಅನ್ನಿಸ್ತಿದೆ. ನನಗೆಂತ ಹೃದಯ ಬೇಕು ಅಂದುಕೊಂಡಿದ್ದೆನೋಅದೇ ಹೃದಯವನ್ನ ನನ್ನಜೊತೆ ಮಾಡ್ತಿರೋದೇವರಿಗೆಇಲ್ಲಿಂದಲೇ ನನ್ನ ನೂರು ಧನ್ಯವಾದಗಳನ್ನ ಇಲ್ಲಿಂದಲೇರವಾನೆ ಮಾಡ್ತಿದ್ದೀನಿ ಮುದ್ದು.ಗೊತ್ತುಗುರಿಯಿಲ್ಲದೆ ಸಾಗುತ್ತಿದ್ದ ನನ್ನ ಬದುಕಿನೊಳಗೆ ನಿಮ್ಮ ಮೊದಲ ಹೆಜ್ಜೆಯಿಟ್ಟು ಬರ್ತಿದ್ದೀರಿ, ಐವತ್ತುಕೇಜಿ,ಪ್ರೀತಿ,ನೂರುಕೇಜಿ ಮಮತೆ, ಟನ್ನುಗಟ್ಟಲೆ ನಂಬಿಕೆಯನ್ನ ಹೊತ್ತುಕೊಂಡು ನನಗೋಸ್ಕರ ಬನ್ನಿ ನಳಿನಿ ಮೇಡಮ್. ಅದರಜೊತೆಗೆ ಕೆಲವು ಗ್ರಾಮುಗಳಷ್ಟು ನೋವನ್ನುತಂದು ನನ್ನೆದೆಗೆ ಸುರಿದುಬಿಡಿ, ಹೇಗಿದ್ದರು ಅತ್ತು ಹಗುರಾಗಲಿಕ್ಕೆ ನಿಮ್ಮ ಮಮತೆತುಂಬಿದ ಮಡಿಲುಇದ್ದೇಇದೆ.

ಒಂದು ಬದುಕನ್ನಕಟ್ಟಲಿಕ್ಕೆ ಹೊರಟಿದ್ದೀವಿ, ನಮ್ಮ ಸಿಟ್ಟು ಸೆಡವು ಕೋಪ ತಾಪ,ಅಹಮ್ಮು,ಅಹಂಕಾರಗಳನ್ನ ಮೂಟೆಕಟ್ಟಿ ಪಕ್ಕಕ್ಕೆತ್ತಿಬಿಡೋಣ, ಒಂದು ಮುತ್ತಾದರೂ ಸರಿಒಂದುತುತ್ತಾದರೂ ಸರಿ, ಇಬ್ಬರೂ ಹಂಚಿಕೊಳ್ಳೋಣ, ಯಾರುಯಾರನ್ನೂ ಹಚ್ಚಿಕ್ಕೊಳ್ಳಲಾಗದಷ್ಟು ಹಚ್ಚಿಕ್ಕೊಳ್ಳೋಣ,ಮೆಚ್ಚಿಕ್ಕೊಳ್ಳೋಣ, ತಪ್ಪು ನನ್ನದಿದ್ದರೂಚಿಂತೆಯಿಲ್ಲ ನಾನೇ ಕ್ಷಮೆ ಕೇಳ್ತೀನಿ, ತಪ್ಪು ನಿಮ್ಮದಿದ್ದರೂ ಪರ್ವಾಗಿಲ್ಲ, ಲವ್ ಯು ಮುದ್ದುಅಂತ ನಾನೆ ಮುದ್ದು ಮಾಡ್ತೀನಿ, ಆದ್ರೆ ಕೆಲವೊಂದು ಸಲ ನಿಮಗೆ ದುರಾಸೆ, ಎರೆಡೆರೆಡು ಮಕ್ಕಳು ಬೇಕು ಅಂತ ನನ್ನಜೊತೆ ಜಗಳಕ್ಕೇ ನಿಲ್ತೀರಿಅಲ್ವ? ಪ್ರೀತಿಯಿಂದ ಜಗಳ ಆಡೋಕೆರೆಡಿಇದ್ದೀರ ಹೇಳಿ ನಾನು ತಯಾರಾಗೇ ಇದ್ದೀನಿ, ಒಂದೇ ಮಗು ಸಾಕು ಅನ್ನುವ ನನ್ನಜನ್ಮ ಸಿದ್ಧ ಹೋರಾಟದಲ್ಲಿಯಾವುದೇ ಬದಲಾವಣೆಯಿರುವುದಿಲ್ಲ ತಿಳ್ಕೊಳ್ಳಿ ಅಷ್ಟೆ.

ತುಂಬಾ ಭಾವುಕ ಹುಡುಗನಂತೆ ನಾನು, ನನಗೆ ಯಾವುದೂ,ಯಾರೂಗ್ರೇಟ್‌ಅನ್ನಿಸೋದೆಇಲ್ವಂತೆ.ಎಲ್ಲದಕ್ಕು ಸ್ವಲ್ಪಅತಿಯಾಗಿರಿಯಾಕ್ಟ್ ಮಾಡ್ತೀನಂತೆ, ಅದೇಕಾರಣಕ್ಕೆಯಾರೂ ನನ್ನನ್ನ ಅಷ್ಟಾಗಿ ಹಚ್ಚಿಕ್ಕೊಳ್ಳಲಿಲ್ಲ, ನನ್ನ ಪ್ರಪಂಚ ನನ್ನದು, ನನ್ನ ಬದುಕು ನನ್ನದುಅಂತ ನಾನು ಕೂಡಯಾರನ್ನೂ,ಯಾವುದನ್ನು ಅಷ್ಟು ಸುಲುಭವಾಗಿ ಮೆಚ್ಚಿಕ್ಕೊಳ್ಳಲಿಲ್ಲ. ಮುಂಗೋಪಿ ಅಂದ್ರು, ಭಾವನೇಗಳೇ ಇಲ್ಲದಯಾವುದೋ ಪ್ರಪಂಚದಜೀವಿ ಅಂದ್ರು ಐ ಡೋಂಟ್‌ಕೇರ್‌ಚಿನ್ನ, ನಾನು ಏನಂತ ನನಗೆ ಮಾತ್ರಗೊತ್ತು, ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆಇರ್ತೀರಅನ್ನೊ ಸಂಗತಿಯೇತುಂಬಾ ಖುಷಿ ಕೊಡ್ತಿದೆ, ಇನ್ನು ಈ ಬದುಕಿನ ಪುಟಗಳೊಳಗೆ ಏನು ಬರುತ್ತೋ ಬರಲಿ, ಎಲ್ಲವನ್ನೂ ನಿಮ್ಮಜೊತೆಗೂಡಿ ಎದುರುಗೊಳ್ತೀನಿ, ಪ್ರಪಂಚದಲ್ಲಿ ಪ್ರೀತಿಅನ್ನೊ ಪ್ರಶ್ನೆಗೆಕೋಟ್ಯಾಂತರ ಉತ್ತರಗಳಿರಬಹುದು, ಆದರೆ ನನ್ನ ಪ್ರಪಂಚದ ಪ್ರೀತಿ,ನಂಬಿಕೆ,ಮಮತೆಅಂದ್ರೆ ,ಎಲ್ಲವೂ ನೀವೆ ಮೇಡಮ್. ಪರಿಚಯವಾದ ಇಷ್ಟೇ ದಿನಗಳನ್ನ ಅದೆಷ್ಟೋಜನುಮದ ಪ್ರೀತಿ ಮಮತೆ ತೋರಿಸಿದ್ದೀನಿ, ನಂಬಿಕೆ ಹುಟ್ಟಿಸಿದ್ದೀರಿ, ಇದೆಲ್ಲವನ್ನು ನಾವು ನಮ್ಮ ಬದುಕಿನ ಮುಸ್ಸಂಜೆಯವರೆಗೂ ಉಳಿಸಿಕೊಳ್ಳೋಣ ಏನಂತೀರಿ. ?

 

nimma

M

7 Responses to “ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆ ಇರ್ತೀರ?”

 1. anu ಜನವರಿ 19, 2012 at 11:51 ಫೂರ್ವಾಹ್ನ #

  yaarapa idu hosa nalinaakshi…………………

 2. anu ಜನವರಿ 19, 2012 at 11:54 ಫೂರ್ವಾಹ್ನ #

  kanavaariso aa hudugi yaru antha ?

 3. ಅನಾಮಿಕ ಜನವರಿ 26, 2012 at 12:33 ಅಪರಾಹ್ನ #

  please reply nalini

 4. prathibha (paatil alla) ಫೆಬ್ರವರಿ 2, 2012 at 2:31 ಅಪರಾಹ್ನ #

  vaarakkond hudugige heege baredre en swami…

 5. ನವಿಲಗರಿ ಫೆಬ್ರವರಿ 20, 2012 at 3:32 ಅಪರಾಹ್ನ #

  ಅನು, ಅದು ಸಸ್ಪೆನ್ಸು…
  ರಾಷ್ಟ್ರಪತ್ನಿ ಪ್ರತಿಭ ಪಾಟೀಲರಿಗೆ ನವಿಲುಗರಿ ಕಡೆಯಿಂದ ಧನ್ಯವಾದಗಳು

 6. Nayana(waiting for navilugari) ಮಾರ್ಚ್ 8, 2012 at 11:51 ಫೂರ್ವಾಹ್ನ #

  wow super ………

  nan kuda e thara ondhu putta leteer ge wait madtidini,,,,,,,,,,,,,,,,,,,,,,,!

 7. Roopa ಜೂನ್ 13, 2012 at 10:12 ಫೂರ್ವಾಹ್ನ #

  Devaki elli

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: