ಪ್ರೇಮಕಥೆಯ ಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲ

14 ಜನ

ರೀ ಹೇಗಿದ್ದೀರಿ? ಎಲ್ಲಿದ್ದೀರಿ?ಮೊದಲಿದ್ದ ನಿಮ್ಮ ಮಗುವಿನಂತ ಮುಗ್ಧತೆಯನ್ನ ಹಾಗೆ ಉಳಿಸಿಕೊಂಡಿದ್ದೀರೋ ಅಥವ ಬೆಂಗಳೂರೆಂಬ ಮಾಯಾವಿಯತೆಕ್ಕೆಯಲ್ಲಿ ಕಳೆದುಕೊಂಡಿದ್ದೀರೋ?ಈಗಲೂ ನಿಮ್ಮ ಹಣೆಯಲ್ಲಿ ವಿಭೂತಿ ಕುಂಕುಮಗಳೂ ಶೊಭಿಸುತ್ತಿವೆಯೆ?ಪ್ರತಿನಿತ್ಯ ಮನೆಯಲ್ಲಿಗಾಯತ್ರಿ ಮಂತ್ರವನ್ನ ಈಗಲೂ ಜಪಿಸುತ್ತಿದ್ದೀರಾ?ನಿಮ್ಮತಲೆಯ ಕೂದಲಿಗೆ ಈಗಲಾದರೂ ಶಾಂಪುವಿನ ದರ್ಶನ ಮಾಡಿಸುತ್ತಿದ್ದೀರೋ ಅಥವ “ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ”ಅಂತ ಯಾಮಾರಿಸುತ್ತಿದ್ದೀರೋ?ನಿಮ್ಮನ್ನ ಮರೆಯೋಕಾಗ್ತಿಲ್ಲರೀ, ಬದುಕಿನಲ್ಲಿ ಕೆಲವೊಂದು ಆದರ್ಶಗಳನ್ನಿಟ್ಟುಕೊಂಡವರಿಗೆ ನೀವೊಂದು ಆದರ್ಶ. ಪಿಜಾರೋ, ಸ್ಕೋಡ, ಫೆರಾರಿ ಕಾರುಗಳಲ್ಲಿ ಮೋಜು ಮಸ್ತಿ ಮಾಡಲು ಕಾಲೇಜಿಗೆ  ಬರುತ್ತಿದ್ದ ಹುಡುಗರ ಮದ್ಯೆ ಅಟ್ಲಾಸ್ ಸೈಕಲ್ಲು ತುಳಿದುಕೊಂಡು ಬರುತ್ತಿದ್ದ ನೀವು ತುಂಬಾನೆ ಹಿಡಿಸಿದ್ರಿ. ಹುಡುಗಿಯರನ್ನ ಬೈಕು ಹತ್ತಿಸಿಕೊಳ್ಳೋಕೆ ನಾ ಮುಂದುತಾ ಮುಂದು ಅಂತ ಕಿತ್ತಾಡುತ್ತಿದ್ದ ಅಷ್ಟೂ ಹುಡುಗರ ಮದ್ಯೆ ನಿಮ್ಮ ಡಕೋಟ ಸೈಕಲ್ಲನ್ನ ಅಷ್ಟು ದೂರ ತಳ್ಳಿಕೊಂಡು ಹೋಗಿ ಹತ್ತುತ್ತಿದ್ದ ನಿಮ್ಮ ಪುಕ್ಕಲುತನವೇ ನಿಮ್ಮೆಡೆಹೆ ನನ್ನನ್ನ ಸೆಳೆದಿದ್ದು.

ನೋಟುಗಳು,ಸೈಟುಗಳು,ಬಂಗಲೆಗಳು ನನ್ನಲ್ಲಿಯಾವತ್ತೂ ಪ್ರೀತಿಯನ್ನ ಹುಟ್ಟಿಸಲಿಲ್ಲ ಸಾರ್,  ನನಗೆ ದುಬಾರಿ ಬೈಕು ಕಾರುಗಳಲ್ಲಿ ಬರುತ್ತಿದ್ದಯಾವ ಹುಡುಗನ ಮೇಲೂ ಮನಸ್ಸಾಗಲಿಲ್ಲ, ಆಡಂಬರದ ಬದುಕಿನಿಂದ ದೂರವಿದ್ದು,ಹೃದಯಕ್ಕೆ ಹತ್ತಿರವಾಗಿದ್ದ ನಿಮ್ಮ ಮೇಲೆ ಇವತ್ತಿಗೂ ಮನಸ್ಸಿದೆ ಸಾರ್. ನಿಮ್ಮಿಂದ ನನಗೆ ಪತ್ರ ಬರುವುದಿಲ್ಲ, ನಾನು ಈ ಜನುಮದಲ್ಲಿ ನಿಮ್ಮ ಮುಖ ನೋಡಲಾಗುವುದಿಲ್ಲ ಅನ್ನುವ ಸತ್ಯ ನನಗೆ ತಿಳಿದ್ದಿದ್ದರೂ, ನಿಮ್ಮ ನೆನಪಾದಾಗಲೆಲ್ಲ ನನ್ನೆದೆಯ ಭಾರವನ್ನ ಕಳೆದುಕೊಳ್ಳಲು ಪತ್ರ ಬರೆಯುತ್ತಲೇ ಇದ್ದೀನಿ.ಈ ಪ್ರೀತಿತುಂಬಿದ ಪತ್ರಗಳನ್ನ ನಿಮಗೆ ತಲುಪಿಸುವುದಾದರೂ ಹೇಗೆ ಸಾರ್?ಇನ್ನು ಮೂರು ದಿನ ಕಳೆದರೆ ನಿಮ್ಮ ಹುಟ್ಟುಹಬ್ಬ,  ಹೌದು ನಿಮಗೆಷ್ಟು ವರ್ಷವಾಯಿತು? ನನ್ನ ಲೆಕ್ಕ ತಪ್ಪಿಲ್ಲದಿದ್ದರೆ ಮೂವತ್ತುಅಲ್ವ?ನನ್ನ ಹೃದಯದ ಲೆಕ್ಕ ನಿಜವೇಆಗಿದ್ದರೆ ನೀವಿನ್ನೂ ಮದುವೆಯಾಗಿರುವುದಿಲ್ಲ, ಅಪ್ಪಟ ಪ್ರೇಮಿಯಂತೆ ನನ್ನ ಪ್ರೀತಿಸಿದವರು ನೀವು, ಥೂ ಹೋಗಾಚೆ ಎಂದು ನಿಮ್ಮ ಬದುಕಿನಿಂದಎದ್ದು ಬಂದವಳು ನಾನು ಅಲ್ವ ಸಾರ್?ಅಪ್ಪಅಮ್ಮನ ಪ್ರೀತಿಗೋಸ್ಕರ ನನ್ನ ಪ್ರೀತಿ ಬಲಿಕೊಟ್ಟೆಅನ್ನುವ ಸತ್ಯ ನಿಮಗೆ ಗೊತ್ತಿರಲಿಕ್ಕಿಲ್ಲಅಲ್ವ ಸಾರ್, ಕೊನೆಗೂ ನಿಮಗೊಂದುಕಾರಣವನ್ನೂ ಹೇಳದೆ ನಿಮ್ಮ ಬದುಕಿನಿಂದ ಹೊರಗೆ ಬಂದ ನನ್ನನ್ನದಯವಿಟ್ಟು ಕ್ಷಮಿಸಿಬಿಡಿ.

ಕೋಟ್ಯಾಧಿಪತಿಗಂಡ,ಬಂಗಲೆಯಂತಹ ಮನೆ,ಕೈಗೊಂದುಕಾಲಿಗೊಂದು ಆಳು, ವಿಲಾಸಿ ಜೀವನ,ಕಷ್ಟ ತಿಳಿಯದ ಬದುಕು, ನನಗಿದೆಲ್ಲ ಬೇಕಿರಲಿಲ್ಲ, ನನಗೆ ನೀವು ಬೇಕಿತ್ತು, ನಿಮ್ಮ ಮಗುವಿನಂತಹ ಪ್ರೀತಿ ಬೇಕಿತ್ತು, ಬದುಕಿನಲ್ಲಿ ಕಷ್ಟಗಳು ತಿಳಿಯದೆ ಬದುಕು ಪರಿಪೂರ್ಣವಾಗುವುದಾದರೂ ಹೇಗೆ? ಕೊನೆಗೂ ಯಾವುದೂ ನನ್ನಕೈಗೆಟುಕಲಿಲ್ಲ, ಕೊನೆಯ ಪಕ್ಷ ಈ ಬದುಕು ಮುಗಿಯುವುದರೊಳಗೆ ಮತ್ತೆ ನಿಮ್ಮನ್ನ ನೋಡುತ್ತಿನೋ ಇಲ್ವೋ ಅದೂ ಗೊತ್ತಿಲ್ಲ, ಬರೆದ ಅಷ್ಟೂ ಪತ್ರಗಳನ್ನೂ ನಿಮಗೆ ತಲುಪಿಸಬೇಕು ಸಾರ್, ಒಂದು ಸುಂದರ ಪ್ರೇಮಕಥೆಯಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲಅನ್ನುವ ಸತ್ಯವನ್ನ ನಿಮಗೆ ತಿಳಿಸಬೇಕು, ಮೊದಲು ದಿನಕ್ಕೆಷ್ಟು ಬಾರಿ ನಿಮ್ಮ ಹೆಸರನ್ನಕರೆದು ಗೋಳು ಹೋಯ್ದುಕೊಳ್ಳುತ್ತಿದ್ದ ನಾನು ಇವತ್ತು ನಿಮ್ಮ ಹೆಸರು ಹೇಳುವ ಯೋಗ್ಯತೆಯನ್ನೂ ಕಳೆದುಕೊಂಡಿದ್ದೀನಿ ಸಾರ್, ದೇವರಲ್ಲಿ ನನ್ನ ಮೊದಲ ಕೊನೆ ಬೇಡಿಕೆಯೊಂದೆ, ನೀವು ಚನ್ನಾಗಿರಬೇಕು, ಪ್ಲೀಸ್ ಮದುವೆಯಾಗಿ ಸಾರ್, ಎಲ್ಲ ಹುಡುಗಿಯರೂ ನನ್ನಷ್ಟುಕ್ರೂರಿಯಾಗಿರೋದಿಲ್ಲ. ದೇವರಂತ ನಿಮಗೆ ದೇವತೆಯಂತ ಹುಡುಗಿ ಸಿಕ್ಕೇ ಸಿಕಾಳೆ. ದಯವಿಟ್ಟು ಕ್ಷಮಿಸಿಬಿಡಿ ತಪ್ಪು ನನ್ನದಲ್ಲ ಆ ದೇವರದ್ದು.  ನನ್ನಐದು ತಿಂಗಳ ಮಗುವಿಗೆ ನಿಮ್ಮದೇ ಹೆಸರಿಟ್ಟಿದ್ದೀನಿ ಸಾರ್, ಮೇಲ್‌ಐಡಿಗೆ  ಪಾಸ್‌ವರ್ಡ್‌ಕೂಡ ನಿಮ್ಮ ಹೆಸರೆ..! ಈ ಜನುಮದಲ್ಲಿ ನಾನು ಪಡೆದುಕೊಂಡು ಬಂದಿದ್ದಿಷ್ಟೆ.

ಯಾವತ್ತೂ ನಿಮ್ಮವಳು

 ಮೋಸದ ಹುಡುಗಿ

 

Advertisements

10 Responses to “ಪ್ರೇಮಕಥೆಯ ಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲ”

 1. ಅನಾಮಿಕ ಜನವರಿ 20, 2012 at 7:54 ಫೂರ್ವಾಹ್ನ #

  wowwwwww hudugeerige paapa prajne annod koodaa erattta? great kanri…but i love this letter

 2. Anu ಜನವರಿ 21, 2012 at 12:28 ಅಪರಾಹ್ನ #

  ನಿಮ್ಮ ಭಾವನೆಗಳೇನೋ ಕಾಮನಬಿಲ್ಲು……ಆದರೆ ಇದು ನಿಮ್ಮ ಕಲ್ಪನೆಯಲ್ಲ ಅಂತ ನನ್ನ ಭಾವನೆ…….ಯಾರೋ ಹುಡುಗಿ ನಿಮಗೆ ನಿಜವಾಗಲು ಬರೆದಿರುವ ಹಾಗಿದೆ…..ಏನು ಸಮಾಚಾರ …?

 3. ಅನಾಮಿಕ ಜನವರಿ 23, 2012 at 7:13 ಫೂರ್ವಾಹ್ನ #

  yakri evaga amavasege hunnimego 1 sari barithira somu sir.yavaglu bariri pls.

 4. ನವಿಲಗರಿ ಫೆಬ್ರವರಿ 20, 2012 at 3:34 ಅಪರಾಹ್ನ #

  ಹೆಸರು ಕುಲ ಗೋತ್ರ ಗೊತ್ತಿಲ್ಲದೇ ಇರುವ ೨ Anonymous ಗಳಿಗೆ ಥ್ಯಾಂಕ್ಸು…

  ನಿಜವಾಗಿ ಬರೆದಿರೋ ಹಾಗಿದೆ ಅನ್ನೋ ಮಾತೇ ಇಲ್ಲ ಅನು… ಎಲ್ಲ್ಲ ಪಕ್ಕ ಅಂದ್ರೆ ಪಕ್ಕ ಲೆಟರ್ಸ್:)

 5. Shashi Kumar ಮಾರ್ಚ್ 6, 2012 at 6:35 ಫೂರ್ವಾಹ್ನ #

  its really good one Mr…

 6. ragini ಮೇ 1, 2012 at 10:47 ಫೂರ್ವಾಹ್ನ #

  somu anna tumbane chennage ide…………nanu helo story na nimmmde style ali bartira.ondu hudugi obbannannu tumbane love madtirtale adre huduga avala mele nambikene ittiralla ade karanakke avanu avara menege vishya tilisi avara appa amma oppkondirtare adre hudugi maneli oppkolalla…e vishya tilida avanu madbekagirodu yenu anna…..avanu avalanna tumbane preetisbekalva adre avanu hudugi appa ammanige vishya tilisdale nan jote nataka adtayidiya, bere avananna hudkoloke ready agidya, ninu henna antha avalanna avamana madi odedu daily manasikavagi himshe kodtairtane, avanu ondu kade adre avala appa amma ondu kade bydu hodiyoke suru madtare……avalu yenu madbeku anna….avana jote balbeka ela saybeka…….ondondu vishyakku anumana……plz anna nan katena nim style ali bariri anna…………plz adannadru odi kushi padtini nan jeevanane isttu antha……..plzzzzzzzzz anna.

 7. kushi naguvillada aramaneya naayaka ಜೂನ್ 5, 2012 at 5:30 ಫೂರ್ವಾಹ್ನ #

  hii raagi ninna kanniranna varesalu nanna kaigalu ninna attiravillla. aadre neenu matte atre ninna kannugalaagi nanna kanngalirali

 8. c.anju gowda ಸೆಪ್ಟೆಂಬರ್ 28, 2012 at 7:54 ಫೂರ್ವಾಹ್ನ #

  Hai somu avre, realy padagale sigtilla nim kavanagala bagge heloke.tumbane chenagide.

  Anju

 9. sudha ಸೆಪ್ಟೆಂಬರ್ 28, 2012 at 12:12 ಅಪರಾಹ್ನ #

  Free time nali ella blogs odthine very nice & wonderful

 10. amaresh.PG ಸೆಪ್ಟೆಂಬರ್ 29, 2012 at 10:38 ಫೂರ್ವಾಹ್ನ #

  :::::::namma bavanegalu halavaru
  hanchikollodakke bekalla yaradru::::::::
  nimmava:-amaresh.pg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: