ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.

27 ಏಪ್ರಿಲ್

ಪ್ರೀತಿಯಲ್ಲಿ ಹೇಳಿಕೊಂಡಿದ್ದನ್ನ ಮತ್ತು ಹೇಳಿಕೊಳ್ಳಲಾಗದೇ ಇದ್ದಿದ್ದನ್ನ ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಳಿಕೊಳ್ಳಲಾಗದ್ದೇ ಹೆಚ್ಚು ತೂಗುತ್ತಂತೆ ನಿಜವಾ? ಬಹುಶ ಈ ಪತ್ರವನ್ನ ಓದಿದ ಮೇಲೆ ನಿನಗೆ ನನ್ನ ಮಾತು ನಿಜವನ್ನಿಸಿದರೂ ಅನ್ನಿಸಬಹುದು. ಅಥವ ಇವನೊಬ್ಬ ಸುಳ್ಳ ಅಂತನೂ ಅನ್ನಿಸಿ ಪತ್ರವನ್ನ ಹರಿದೆಸೆದು ನಿರ್ಲಪ್ತತೆಯಿಂದ ಸುಮ್ಮನಿದ್ದುಬಿಡಬಹುದು. ನಿಜ ದೇವಕಿ, ನಿನ್ನ ಮುಂದೆ ಇಲ್ಲಿಯವರೆಗೂ ಹೇಳಲಾರದ ಸಣ್ಣ ಸಣ್ಣ ಸಂಗತಿಗಳು ತುಂಬಾನೆ ಇವೆ. ಸಣ್ಣ ಸಂಗತಿಗಳಾದರೂ ಅದರಲ್ಲಿ ತುಂಬು ಪ್ರೀತಿಯ ಸಾರ್ಥಕತೆ ಇದೆ. ನಿಜವಾದ ಪ್ರೇಮಿಗಳಿಗೆ ಸಣ್ಣ ಸಣ್ಣ ಸಂಗತಿಗಳೂ ಕೂಡ ಬೆಟ್ಟದಷ್ಟು ದೊಡ್ಡದಾದ ನೆಮ್ಮದಿಯನ್ನ ಕೊಡುತ್ತವಂತೆ.

ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನಿನ್ನನ್ನ ಯಾವತ್ತೂ ದೂರಾಗದ ಹಾಗೆ ಗಟ್ಟಿಯಾಗಿ ತಬ್ಬಿಹಿಡಿದು ಕುಳಿತುಬಿಡಬೇಕು ಅನ್ನಿಸುತ್ತಿತ್ತು. ನೂರಾರು ಕಿಲೋಮೀಟರುಗಳ ದೂರವನ್ನ ಒಂದೇ ಒಂದು ಮಾತನಾಡದೆ ನಿನ್ನ ಕಿರುಬೆರಳ ಹಿಡಿದು ನಡೆಯಬೇಕೆನ್ನಿಸುತ್ತಿತ್ತು. ಸುರಿವ ಸ್ವಾತಿ ಮಳೆಯಲ್ಲಿ ನಾನೆ ನಿನ್ನ ಭುಜಕ್ಕೊರಗಿಕೊಂಡು ಪ್ರೇಮಕವಿ ಕೆ.ಎಸ್.ಎನ್ ಅವರ ಒಂದು ಪೂರ್ತಿ ಕವಿತೆಯನ್ನ ನಿನಗೆ ಓದಿಹೇಳಬೇಕೆನ್ನಿಸಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆ ಕಣ್ಮುಚ್ಚಿ ಉಸಿರು ಕಟ್ಟಿದ ಹಾಗೆ ನಾಟಕವಾಡಿ ನೀನು ಗಾಬರಿ ಬೀಳೋದನ್ನ ಕದ್ದು ನೋಡಿ ನೀನೆಷ್ಟು ಪ್ರೀತಿಸುತ್ತಿಯ ಎಂದು ನಿನ್ನ ಕಿವಿಯಲ್ಲಿ ಹೇಳಿ ಕಣ್ಣು ತುಂಬಿಕೊಳ್ಳಬೇಕೆನ್ನಿಸುತ್ತಿತ್ತು. ದೇವರ ಸನ್ನಿಧಿಯಲ್ಲಿ 3 ಸುತ್ತಿನ ಬದಲು ಮೂವತ್ಮೂರು ಸುತ್ತುಗಳನ್ನ ನಿನ್ನನ್ನ ಹೊತ್ತು ತಿರುಗಿಸಬೇಕೆನ್ನಿಸುತ್ತಿತ್ತು. ಸನಿಹವಿದ್ದಾಗ ನಿನ್ನ ಪ್ರೀತಿಯನ್ನ ದೂರವಿದ್ದಾಗ ನಿನ್ನ ವಿರಹವನ್ನ ಮನಸಾರೆ ಅನುಭವಿಸುವ ಆಸೆಯಾಗುತ್ತಿತ್ತು.

ಹೇಳೋಕೆ ತುಂಬಾನೆ ಇದೆ ದೇವಕಿ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಪ್ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ?

8 Responses to “ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.”

 1. Ganesh K ಏಪ್ರಿಲ್ 30, 2012 at 7:38 ಫೂರ್ವಾಹ್ನ #

  ಭಾಳಾ ದಿವ್ಸದ್ ಮೇಲೆ ನವಿಲುಗರಿ ಅಣ್ಣ ಯಾಕೋ ಫೀಲಿಂಗ್ ನಲ್ಲಿ ಬರೆದಂಗಿದೆ.

  ಯಾವತ್ತಿನಂತೆ, ಇದೂ ಲವ್ ಚೀಟಿ ಸೂಪರ್..!

 2. Nenapu nenapagi huliyali............. ಮೇ 9, 2012 at 11:31 ಫೂರ್ವಾಹ್ನ #

  anthaha asahaaya katheye preethi alva ..
  sorry late agi love chiti odidakke .hage gmail reader list li fav blogs update madtidhe navilugari mariyoke agathe .ayoo edhenidhu 2 letters post agbittidhe gooobe odhe ella ankondhu kuthe office alli ella andre samadana agolla adakke..

  preethi thumbidha patra odhi premiya nenapaythu………..:)

 3. Sunil ಮೇ 9, 2012 at 3:53 ಅಪರಾಹ್ನ #

  What you have wrote in this letter, Its really true. small things in love matters a lot. when I had my girl with you I had so many small things to do with her. Like walking in rain. But I didnt get chance. Sorry for writing in english. I dont have kannda letters in my office system. any way. nice writing. pelase continue.

 4. amaresh.PG ಸೆಪ್ಟೆಂಬರ್ 29, 2012 at 7:11 ಫೂರ್ವಾಹ್ನ #

  somu niage…..
  nimma e hasegalu doddadagive yendu avarige tilidideya

 5. nandu ಅಕ್ಟೋಬರ್ 10, 2012 at 7:54 ಫೂರ್ವಾಹ್ನ #

  hai gelaya…..
  nim manada istonda maatugalalli avrege helade yakri bacchhitidri….
  e ptrada mukaantarnadru eegaladru heludralla… manasu swolpa hagura ansirabodu alva gelay……………

  kelavaru yella vishayadallu bhavanatmkavage thik madatare adu nann prakar tappu ansute yakandre e prapnchadalli namma bhavanegalige spndiso antoru sigodu thumaa kadime… hakasmtaagi antavaru nimage sikkudre antavaranna dayavittu kalkobedi idu “NAVILUGARI” ya yella odugarige aparicha vyktiya madada maatu…..

 6. ನವಿಲುಗರಿ ಅಕ್ಟೋಬರ್ 10, 2012 at 11:14 ಫೂರ್ವಾಹ್ನ #

  ಗಣೇಸಣ್ಣ.. ಥ್ಯಾಂಕ್ಸ್ ಕಣಣ್ಣಾ..

  ಪತ್ರ ಓದಿ ಪ್ರೇಮಿಯ ನೆನಪಾಯ್ತು ಅಂತ ಯಾರೋ ಬರ್ದಿದ್ದಾರೆ… ಅಂದ ಹಾಗೆ ನೆನಪಾಗಿ ಬೇಜಾರಾಯ್ತೋ , ಖುಷಿ ಆಯ್ತೊ ತಿಳಿಯಲಿಲ್ಲ..

  ಸುನೀಲ್ ಸರ್.. ನವಿಲುಗರಿಯಲ್ಲಿ ಬಾಷೆಗಿಂತ ಭಾವನೆಗಳನ್ನ ಅರ್ಥ ಮಾಡಿಕೊಳ್ಳುವ ಹೃದಯಗಳಿವೆ..
  ಪತ್ರ ಮೆಚ್ಚಿದ್ದಕ್ಕೆ ಧನ್ಯವಾದ

 7. ಅನಾಮಿಕ ಜೂನ್ 27, 2013 at 7:52 ಫೂರ್ವಾಹ್ನ #

  Somanna thumba channagide, namma manadallirodanna hage baredidiri, bareyabekemba nanna hambala yako nimma barahadalle karagide, yakandre nan ankondidella nimma barahadalle ide. so nice and cute.

 8. Srinivasa m ಡಿಸೆಂಬರ್ 12, 2017 at 7:05 ಅಪರಾಹ್ನ #

  Preeti yemba swapna lokadalli mindeddavanu nanu. Nanna hudugiya tunta mathugalu, savira samashyagala madya naguva manasu. Hakiyante kaleda haru varsagalu, karanavillade nee balinalli banda adrusta, karanavillade nee dooraada dooranta. Hakiyante harata madisida neenu nange jeevanada dariyalli nee yalli bittu ode yake bittu ode yemba yaksa prense. Ondu nija heltini gelati nee yalladru eru nee sukavagiru. Jeevanada samsarika jeevana ninnodige kalibeku anta edda nanage onti madi odeya.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: