ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ !

10 ಮೇ

ಮನುಷ್ಯ ಸಹಜ ಬದುಕಿನಿಂದ ತುಂಬಾನೆ ದೂರವಿದ್ದ ನನ್ನನ್ನ ಬದುಕಿನ ತೇರ ದಾರಿಗೆ ಕರೆದುಕೊಂಡು ಬಂದ ದೇವತೆ ನೀನು.. ನಿನ್ನನ್ನ ಆತ್ಮಬಂಧುವೆಂದು ಹೆಸರಿಡದೇ ಬೇರೆ ಯಾವ ಹೆಸರಿಡಲಿ ಹೇಳು?. ಕತ್ತಲ ಪ್ರಪಂಚದ ಯಾವುದೋ ಮೂಲೆಯಲ್ಲಿದ್ದ ನನ್ನನ್ನ ಬೆಳಕಿನ ದಾರಿಗೆ ಕೈ ಹಿಡಿದ ನನ್ನ ಬದುಕಿನ ಪುಟ್ಟ ಹಣತೆ ನೀನು . ನೀನು ಕೊಡುವ ಇಷ್ಟಿಷ್ಟೇ ಬೆಳಕಿನಲ್ಲಿ ನನ್ನ ಈ ಪೂರ್ತಿ ಬದುಕನ್ನ ಕಾಣ ಹೊರಟ ನಿನ್ನ ಬದುಕಿನ ನಾವಿಕ ನಾನು. ನಿನ್ನ ಕುರಿತಾದ ಪ್ರತಿ ಕನಸುಗಳನ್ನು ಆಕಾಶದೆತ್ತರಕ್ಕೇ ಹೋಲಿಸಿ ಸಂಭ್ರಮಿಸಿದ್ದು ಸುಳ್ಳಲ್ಲ, ಆದರೆ ಅದೇ ಪ್ರೀತಿಯಲ್ಲಿ ಆಕಾಶದ ಅಗಾಧತೆಗೂ ಮಿಗಿಲಾದ ನೋವು ಇದ್ದೀತೆಂದು

ಪ್ರಾಮಿಸ್ ನಿನ್ನಾಣೆ ನನಗೆ ಗೊತ್ತಿಲ್ಲ.

ಹುಟ್ಟುತ್ತಲೆ ಎಲ್ಲರನ್ನು ಮತ್ತು ಎಲ್ಲವನ್ನೂ ಕಳೆದುಕೊಂಡು ಈ ಜಗತ್ತಿಗೆ ಖಾಲಿ ಜೇಬಿನ ಪಕೀರನಾಗಿ ಬಂದವನು ನಾನು . ಜೊತೆಗೆ ಈ ಜಗತ್ತಿಗೆಲ್ಲ ಹರಿದು ಹಂಚಿದರೂ ಖಾಲಿಯಾಗದಷ್ಟು ನೋವು, ದುಃಖ, ಹತಾಷೆ, ಒಬ್ಬಂಟಿತನಗಳನ್ನೆಲ್ಲ ಒಡಲಲ್ಲಿಟ್ಟುಕೊಂಡೇ ಬೆಳೆದು ಬಂದ ಮಾಮೂಲಿ ಹುಡುಗ ನಾನು. ಆದರೇ ನನ್ನ ಪಾಲಿಗೆ ಯಾವತ್ತೂ ಇಲ್ಲದಿದ್ದ ಆ ದೇವರು, ಕೆಲ ಸಮಯದಲ್ಲಿ ಕರುಣಾಳುವಾಗಿರುತ್ತಾನೆ ಎಂಬ ಮಾತಿಗೆ ಸಾಕ್ಷಿಯಂತೆ ನನಗೆ ನಿನ್ನ ತೋರಿಸಿಬಿಟ್ಟ . ಖಾಲಿಯಾಗಿದ್ದ ಬದುಕಿನ ಬಟ್ಟಲುಗಳೆಲ್ಲ ಒಮ್ಮೆಲೆ ತುಂಬಿದ ಹಾಗಾಯಿತು. ತಂದೆ ತಾಯಿಯ ಮುಖವನ್ನೇ ನೋಡಿರದಿದ್ದ ಈ ಹುಡುಗನಿಗೆ ಎಲ್ಲಾ ತಂದೆ ತಾಯಿಚಿiರು ಒಟ್ಟಿಗೆ ಜೋಗುಳ ಹಾಡಿದ ಅನುಭವವಾಗಿದ್ದು ಸುಳ್ಳಲ್ಲ .

ನಿನ್ನ ಮಡಿಲಲ್ಲಿ ಎಲ್ಲ ನೋವುಗಳನ್ನ ಮರೆಸುವಂತ ಮಮತೆ ಅದೆಷ್ಟಿತ್ತು ?. ಒಂದಕ್ಷರಗನ್ನೂ ಬರೆಯದಿದ್ದ ಈ ಬದುಕಿನ ಪುಟಗಳಲ್ಲಿ ನೀನು ಬಂದ ಮೇಲೆ ಮೂಡಿದ್ದು ಬರಿ ಸುವರ್ಣಾಕ್ಷರಗಳೆ ಅಲ್ಲವೆ? ಆದರೆ ಭಯವಾಗುತ್ತಿದೆ, ಬದುಕಿನ ಪುಟಗಳಲ್ಲಿ ಜೋಗುಳ ಹಾಡುತ್ತಿದ್ದ ಪ್ರತಿ ಅಕ್ಷರಗಳು ಯಾವುದೋ ನೋವಿನ ಗೀತೆಗೆ ಸಾಲುಗಳಾಗುತ್ತಿವೆ. ಬದುಕಿನುದ್ದಕ್ಕೂ ನೋವನ್ನ ಜೊತೆಗಿಟ್ಟುಕೊಂಡೇ ಬಲವಂತದ ನಗು ಬಗಲಿಟ್ಟುಕೊಂಡು ಸಾಗುತ್ತಿರೋನು ನಾನು. ಆ ಜೋಳಿಗೆಗೆ ಇನ್ನೊಂದಷ್ಟು ನೋವಿನ ಭಿಕ್ಷೆಯನ್ನ ತುಂಬಿಸಿದ್ದೀಯ.ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರ ಆಗೋದಿಲ್ಲ..:(

11 Responses to “ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ !”

  1. Niriksheya kannugalu................. ಮೇ 10, 2012 at 9:57 ಫೂರ್ವಾಹ್ನ #

    preethisidavaru inillavadaru preethige agadavadha nenpu mathu novhu koduva shakthi edhe………ಪ್ರೀತಿಯಲ್ಲಿ ಆಕಾಶದ ಅಗಾಧತೆಗೂ ಮಿಗಿಲಾದ ನೋವು ಇದ್ದೀತೆಂದು ಪ್ರಾಮಿಸ್ ನಿನ್ನಾಣೆ ನನಗೆ ಗೊತ್ತಿಲ್ಲ…..(e mathu nija).
    ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರ ಆಗೋದಿಲ್ಲ..(shishike channagidhe)
    nimma patrada jothe ge nimmavala patravannu nididare santhosh……..
    padagala balake channagidhe:)

    patradalli badalavane bayasuva……………..

    Niriksheya kannugalu:)

  2. ಅನಾಮಿಕ ಮೇ 11, 2012 at 5:45 ಫೂರ್ವಾಹ್ನ #

    jogayyana jolige yavttu bhara alla… aadare baridaagde irali annode nanna ashaya…..

  3. ರಂಜಿತ್ ಮೇ 12, 2012 at 3:10 ಫೂರ್ವಾಹ್ನ #

    ಜೋಗಯ್ಯನಿಗೆ ಜೋಳಿಗೆಗಿಂತ ಮನಸ್ಸೇ ಭಾರ… ಯಾಕೆಂದರೆ ಮನಸ ತುಂಬಾ ಅವಳೇ ತುಂಬಿರ್ತಾಳಲ್ವಾ…

  4. kushi arda hrudayada aramaneya raja ಜೂನ್ 5, 2012 at 6:13 ಅಪರಾಹ್ನ #

    hii gelaya ninnna mansu puttaddo doddado gottilla adre nin preethi sada hasiragirali
    wish all the best

  5. mahantesh .H.K Chitradurga ಜುಲೈ 26, 2012 at 6:58 ಫೂರ್ವಾಹ್ನ #

    hai frd nimma prati saalugalallu estu artta garbbitavagive

  6. kushal ಆಗಷ್ಟ್ 8, 2012 at 11:05 ಫೂರ್ವಾಹ್ನ #

    yako gottilla gelaya ninnatra yummaba matadbeku anstide
    gottiladene edeyasilo nenapugalu manada munde bandu nintaagagtive.avalanna nenasikondre kambani taanage jaari hariyutte.naale avala birthday nanna hrudayadalli avalanna tumba chanag noodkondideni adre avlige nanna preethine artha agtilla yako gottilla naan ontiyadneno anstide

  7. nandu ಅಕ್ಟೋಬರ್ 9, 2012 at 12:31 ಅಪರಾಹ್ನ #

    hai gelayaaaaaaaaaaa…………… nim ee bharavanige bage yen helodu gottilla… kelavarige bhavanatmakavaagi sumaduravada maatugalinda samadaana madtira…. innu kelavarige tereyabaaradendu bacchhitta bhavanegala pustakada nenapu maadatira…. ottanalli nonda manasugala teredaha pustaka neevu……

  8. nandu ಅಕ್ಟೋಬರ್ 9, 2012 at 12:37 ಅಪರಾಹ್ನ #

    hai kushal nim comment nodi one matu helabeku anustu…. nin beda andru helatini hage adavance hagi sorryyyyyyyyyyyyyyyyy…………. e prapchadalli yaru ontiyall pa,… andamele nin hege ontiyaktiyaa… nin yella novu.. nalivu…. prahne.. uttaragalige ondalla ondu reeti ninna “MANASU” pratikriye i mean spandiso anta astu olle best friend nin jote irabekadre nin hege ontiyaktiyaaaa…..(SORRYYYYYYYYYYYYYYY)

  9. ನವಿಲುಗರಿ ಅಕ್ಟೋಬರ್ 10, 2012 at 10:50 ಫೂರ್ವಾಹ್ನ #

    ರಂಜಿತ್ ಸಾರ್.. ಎಂದಿನಂತೆ ನಿಮ್ಮ ಮಾತು ನಿಜ…

  10. ನವಿಲುಗರಿ ಅಕ್ಟೋಬರ್ 10, 2012 at 10:55 ಫೂರ್ವಾಹ್ನ #

    ಅರ್ದ ಹೃದಯದ ಅರಮನೆಯ ರಾಜರಿಗೆ ಇನ್ನರ್ದ ಹೃದಯ ಆದಷ್ಟು ಬೇಗ ಸಿಗಲಿ ಅಂತ ನವಿಲುಗರಿ ಹಾರೈಸುತ್ತೆ…:)

    ರೀ ಕುಶಾಲ್ ಬೇಜಾರ್ ಮಾಡ್ಕೊಬೇಡಿ.. ಹಾಳು ಬದುಕು ನೆನಪು ಮಾಡ್ಕೊಳ್ಳೊಕ್ಕಾದ್ರು ಅವಕಾಶ ಕೊಟ್ಟಿದ್ಯಲ್ಲ ಅದ್ಕೆ ಋಣಿಯಾಗಿರೋಣ ಬಿಡಿ..ಒಂದೊಳ್ಳೆ ಬದುಕು ನಿಮಗೆ ಸಿಗ್ಲಿ ಅಂತ ನವಿಲುಗರಿ ಹಾರೈಸುತ್ತೆ.:)

  11. ನವಿಲುಗರಿ ಅಕ್ಟೋಬರ್ 10, 2012 at 10:59 ಫೂರ್ವಾಹ್ನ #

    ಥ್ಯಾಂಕ್ಸ್ ನಂದು ಅವರೆ… ಕುಶಾಲ್ ಅವರಿಗೆ ಧೈರ್ಯ ತುಂಬೋ ಮಾತಾಡಿದ್ದಕ್ಕೆ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: