ತುಂಬ ಸಂತೋಷವಾಗಿದ್ದೀನಿ ಅಂದುಕೊಂಡು ಬದುಕುತ್ತಿದ್ದೆ… ನೀನು ನೆನಪಾಗುವವರೆಗೆ !

25 ಆಗಸ್ಟ್

  ಕ್ಷಮೆ ಇರಲಿ ಗೆಳೆಯ ,

ಕ್ಷಮಿಸಲು ಅರ್ಹಳಲ್ಲದವಳು. ಕ್ಷಮೆ ಇರಲಿ ಗೆಳೆಯ ಅಂದರೆ ನಗುತ್ತೀಯ ಅಲ್ವಾ.. ಜನ ತಪ್ಪು ಮಾಡಿದ್ರೆ ಕ್ಷಮಿಸ್ತಾರೆ. ಆದ್ರೆ ನಾನು ಮಾಡಿದ್ದು ಪಾಪ. ಪಾಪಕ್ಕೆ ಕ್ಷಮೆ ಇಲ್ಲ. ಹಿಂದೆ ಸುತ್ತಿದ್ದು ನಾನು, ಪ್ರೀತಿಸು ಅಂತ ಬೇಡಿಕೊಂಡಿದ್ದು ನಾನು. ನಿನ್ನ ಜೊತೆ ಇರ‍್ತಿನಿ ಅಂತ ಅರ್ಥವಿಲ್ಲದೇ ಇರುವ ಆಣೆ ಪ್ರಮಾಣಗಳನ್ನು ಮಾಡಿದ್ದು ನಾನು. ಯಾವತ್ತೂ ಕಣ್ಣೀರಾಗದವಳು ನಿನಗೋಸ್ಕರ ಕಂಗಳ ಅಣೆಕಟ್ಟು ಒಡೆಯುವಂತೆ ಅತ್ತವಳು ನಾನು. ಸುಳ್ಳಾಡದವಳು ದೇವರಂಥ ಅಮ್ಮನ ಮುಂದೆ ಕೇವಲ ನಿನಗೋಸ್ಕರ ಸುಳ್ಳಾಡಿದವಳು ನಾನು.. ನಿಜ ಹೇಳ್ತೀನಿ ಕಣೋ. ಪ್ರೀತಿಸಿದಷ್ಟು ದಿನ ದೇವರ ಹಾಗೆ ನಿನ್ನ ಪ್ರೀತಿಸಿದ್ದು ಆ ದೇವರಷ್ಟೇ ನಿಜ, ಅಮ್ಮನಷ್ಟೇ ನಿಜ ಅವನು ಬರುವವರೆಗೆ…

ಕೇವಲ ಹಣ, ಅಂತಸ್ತು, ರೂಪಕ್ಕೆ ನಿಜವಾದ ಪ್ರೀತಿಯನ್ನು ಮಾರಿಕೊಳ್ಳುವ ನನ್ನಂಥವರಿಗೆ ಆ ದೇವರು ಸಾವು ಯಾಕೆ ತರಲಿಲ್ಲ ಗೆಳೆಯ? ದೇವರಂಥ ನಿನಗೆ ದ್ರೋಹ ಮಾಡುವ ಮುನ್ನ ಆ ದೇವರು ಯಾಕೆ ತಡೆಯಲಿಲ್ಲ? ಮೂರು ವರ್ಷದ ಪ್ರೇಮವನ್ನು ಕೇವಲ ಆರೆಣಿಕೆ ಸಂಬಳದ ಹುಡುಗನ ಮನೆ ಕಾರು ಕೊಲ್ಲುತ್ತೆ ಅಂದ್ರೆ ಎಂತಹ ದುರ್ಬಲ ಮನಸ್ಸಿನ ಹುಡುಗಿಯನ್ನು ಪ್ರೀತಿಸಿದೆಯೋ ನೀನು. ಸಾವಿನ ಮುಂದೆ ಕೈಯೊಡ್ಡಿ ನಿಂತಿದ್ದೀನಿ. ನನ್ನ ಹಾಗೆ ಸಾವಿಗೂ ಕರುಣೆ ಇಲ್ಲ. ನಿನ್ನ ನೆನಪು ಮಾಡಿಕೊಳ್ಳಲಿಕ್ಕೆ ಅರ್ಹತೆ ಇಲ್ಲದವಳು ಬರೆದ ಈ ಪತ್ರವನ್ನು ನೀನು ಓದುತ್ತೀಯ ಅಲ್ವಾ.. ನೀನು ಓದಲೇಬೇಕು ಕಣೋ. ನಿನ್ನ ಮುಂದೆ ನಿಂತು ನಿನ್ನ ಹೆಸರು ಹೇಳಲೂ ಅರ್ಹತೆ ಕಳೆದುಕೊಂಡವಳು ನಿನಗೆ ಬರೆಯುತ್ತಿರುವ ಕೊನೆಯ ಪತ್ರ ಇದಾದರೂ ಆಗಬಹುದು.

ನಾನು ತುಂ ಸಂತೋಷವಾಗಿದ್ದೀನಿ(?) ಗೆಳೆಯ. ಕೊಟಿಗಳೂ ಕೂಡ ಲೆಕ್ಕ ತಪ್ಪುವ ಗಂಡನಿದ್ದಾನೆ. “ರಾತ್ರಿ” ಮಾತ್ರ ತುಂಬ ಪ್ರೀತಿಸುತ್ತಾನೆ. ಕೈಗೊಬ್ಬ ಕಾಲ್ಗೊಬ್ಬ ಆಳು. ಲಕ್ಷ್ಮಿ ಕಾಲು ಮುರಿದುಕೊಂಡು ನನ್ನ ಮುಂದೆ ಬಿದ್ದಿದ್ದಾಳೆ. ಹೆಸರು ಕುಲ ಗೋತ್ರ ಗೊತ್ತಿಲ್ಲದ ಕಾರುಗಳಲ್ಲೇ ದಿನಾ ಓಡಾಡ್ತೀನಿ. ದಿನಕ್ಕೆ ಲಕ್ಷಾಂತರ ರುಪಾಯಿಗಳಷ್ಟು ಷಾಪಿಂಗ್. ಕ್ರೆಡಿಟ್ ಕಾರ್ಡ್‌ಗಳಲ್ಲೇ ವ್ಯವಹಾರ. ನನಗೆ ಪ್ರೀತಿ ಬೇಕು ಅನಿಸಿದಾಗಲೆಲ್ಲ ಅದೆಲ್ಲಿಂದಲೋ ದುಡ್ಡು ತಂದು ಸುರಿಯುತ್ತಾನೆ. ಬಡತನವನ್ನೆಲ್ಲ ಸಿರಿವಂತ ಗಂಡನ ತೋಳ ತೆಕ್ಕೆಯಲ್ಲಿ, ಅವನ ಹಣದ ಕಟ್ಟುಗಳ ಕೆಳಗೆ ತುಳಿದು ಹಾಕುತ್ತಿದ್ದೀನಿ. ತುಂಬ ಸಂತೋಷವಾಗಿದ್ದೀನಿ ಅಂದುಕೊಂಡು ಬದುಕುತ್ತಿದ್ದೆ ನೀನು ನೆನಪಾಗುವವರೆಗೆ.

ಬದುಕು ಅಂದರೆ ಕೇವಲ ದುಡ್ಡಲ್ಲ ಅಂತ ಗೊತ್ತಾಗಲಿಕ್ಕೆ ತುಂಬ ಸಮಯ ಬೇಕಾಗಲಿಲ್ಲ. ಗಂಡ ಅನ್ನಿಸಿಕೊಂಡವನು ರಾತ್ರಿ ಮಾತ್ರ ಪ್ರೀತಿಸುವಾಗ ಯಾಕೋ ನೀನು ನೆನಪಾಗುತ್ತಿದ್ದೆ. ನೀನು ಪ್ರೀತಿಸುದಷ್ಟು ದಿನ ಅಮ್ಮನ ನೆನಪೇ ಆಗದಷ್ಟು ಪ್ರೀತಿಸಿದವನು ನೀನು. ನಾನೇ ಹದ್ದುಮೀರಿ ನಡೆದುಕೊಂಡರೂ ಸಂಯಮದ ಪಾಟ ಕಲಿಸುತ್ತಿದ್ದವನು ನೀನು. ನಿನ್ನ ದೂರ ಮಾಡಿಕೊಂಡು ಕೋಟಿ ಬಂಗಲೆಯೊಳಗೆ ಬಂದಮೇಲೆ ನಿನ್ನ ನೆನಪಾಗಲಿಕ್ಕೆ ತುಂಬ ದಿನ ಬೇಕಾಗಲಿಲ್ಲ. ದುಡ್ಡು ಮಾತ್ರ ಸುಖ ತರುವುದಿಲ್ಲ ಅನ್ನುವ ಸತ್ಯ ನನ್ನಂಥ ಹುಡುಗಿಯರಿಗೆ ನಿನ್ನಂಥ ಹುಡುಗರನ್ನು ಕಳೆದುಕೊಂಡ ಮೇಲೆಯೇ ಗೊತ್ತಾಗಬೇಕು. ಹೇಗಿದ್ದೀಯೋ ಎಲ್ಲಿದ್ದೀಯೊ ಅನ್ನುವುದು ಗೊತ್ತಾಗದೇ ಈ ಪತ್ರ ಬರೆಯುತ್ತಿದ್ದೀನಿ. ಪತ್ರ ಓದಿ ಅಸಹ್ಯ ಪಟ್ಟುಕೊಳ್ಳಬೇಡ ಪ್ಲೀಸ್. ಪ್ರತಿ ಸಲ ತಪ್ಪು ಮಾಡಿದಾಗಲೂ ಕ್ಷಮಿಸುತ್ತಿದ್ದ ಹಾಗೆ ಕೊನೆಯ ಸಲ ಕ್ಷಮಿಸಿಬಿಡು. ಸರಿ, ಅವನು ಬರುವ ಹೊತ್ತಾಯ್ತು. ರಾತ್ರಿ ತುಂಬ ಪ್ರೀತಿಸುತ್ತಾನೆ. ಅವನು ಪ್ರೀತಿಸುವಾಗ ನನ್ನ ಕಣ್ಣಲ್ಲಿ ನೀರಿರುತ್ತೆ. ಅಲ್ಲಿ ನೀನಿರುತ್ತೀಯ.

ಕ್ಷಮೆ ಇರಲಿ ಗೆಳೆಯ

ನಿನ್ನ ಚೋಮಿ..:(

 

27 Responses to “ತುಂಬ ಸಂತೋಷವಾಗಿದ್ದೀನಿ ಅಂದುಕೊಂಡು ಬದುಕುತ್ತಿದ್ದೆ… ನೀನು ನೆನಪಾಗುವವರೆಗೆ !”

 1. shiva kumar ಆಗಷ್ಟ್ 25, 2012 at 3:41 ಅಪರಾಹ್ನ #

  edu 99% nanage thumba athirada kathe agide.adare maduve nathara reply bandila aste

 2. ಅನಾಮಿಕ ಆಗಷ್ಟ್ 25, 2012 at 6:47 ಅಪರಾಹ್ನ #

  thumbane estayitu…. hage kanneru thadeyalagailla gelaya…. !

 3. Niriksheya kannugalu................. ಆಗಷ್ಟ್ 28, 2012 at 11:32 ಫೂರ್ವಾಹ್ನ #

  hmmm… nice one somuuuuuuu….LOVE chiti jothege LIFE teach kuda mado age meaningfull agide letter..liked it:)

 4. kushi ಆಗಷ್ಟ್ 29, 2012 at 5:08 ಫೂರ್ವಾಹ್ನ #

  gelaya kolltidiya kanooooooooooooooooooooooooo

 5. ಅನಾಮಿಕ ಆಗಷ್ಟ್ 29, 2012 at 2:00 ಅಪರಾಹ್ನ #

  idu vkli publish aagitta?

 6. ಅನಾಮಿಕ ಸೆಪ್ಟೆಂಬರ್ 2, 2012 at 11:03 ಫೂರ್ವಾಹ್ನ #

  ಅವನು ಪ್ರೀತಿಸುವಾಗ ನನ್ನ ಕಣ್ಣಲ್ಲಿ ನೀರಿರುತ್ತೆ. ಅಲ್ಲಿ ನೀನಿರುತ್ತೀಯ.

  ಕ್ಷಮೆ ಇರಲಿ ಗೆಳೆಯ …..i don’t have any words 2 say….thanks…

 7. nandu ಸೆಪ್ಟೆಂಬರ್ 5, 2012 at 7:31 ಫೂರ್ವಾಹ್ನ #

  thumba channagide. kandri……….

 8. ಅನಾಮಿಕ ಸೆಪ್ಟೆಂಬರ್ 6, 2012 at 12:07 ಅಪರಾಹ್ನ #

  ತುಂಬಾ ಚೆನ್ನಾಗಿದೆ! ಈ ಪತ್ರ ಬರೆದು,, ಹುಡುಗನಿಗೆ ಕಳಿಸದೆ ಹರಿದು ಹಕಿದ್ರೆ ಒಳ್ಳಯದು ಅನಿಸುತ್ತೆ!

 9. ಅನಾಮಿಕ ಸೆಪ್ಟೆಂಬರ್ 14, 2012 at 10:40 ಫೂರ್ವಾಹ್ನ #

  simply superb somu avare,,,,

 10. Nandi ಸೆಪ್ಟೆಂಬರ್ 20, 2012 at 11:48 ಫೂರ್ವಾಹ್ನ #

  tumba channagide somu avare bahala dinada nantana lekana barediddeera neevu yavagalu bareyuttane irabeku ALL THE BEST

 11. amaresh.pg ಸೆಪ್ಟೆಂಬರ್ 26, 2012 at 6:16 ಫೂರ್ವಾಹ್ನ #

  /////////NOVINA JEEVANAVE YELLARADU
  ADARE NAVENDU NOVE SHASVATA YENDU TILIDUKOLLABARADU////////
  ….(((((AMARESH.PG))))…..

 12. Roopa ಸೆಪ್ಟೆಂಬರ್ 26, 2012 at 12:38 ಅಪರಾಹ್ನ #

  ಸೋಮು ಅವರೇ ಈ ಪತ್ರ ಓದಿದ ನಿಮ್ಮ ಅಭಿಮಾನಿಗಳು ಅವರ ಅವರ ಅಭಿಪ್ರಾಯ ತಿಳಿಸಿದ್ದಾರೆ, ಅದರೆ ನಿಮಗೆ ನನ್ನದೊಂದು ಪುಟ್ಟ ಪ್ರೆಶ್ನೆ, ಅದೇನೋ ನನಗೆ ಪುಟ್ಟ ಪ್ರೆಶ್ನೆ, ನಿಮಗೆ ಪುಟ್ಟ ಪ್ರೆಶ್ನೆಯೇ ತಿಳಿಯದು, ಆ ನಿಮ್ಮ ಪ್ರೇಮಿಯ (ತಪ್ಪಿದ್ದರೆ ಕ್ಷಮಿಸಿ) ಪಶ್ಚಾತ್ತಾಪ ನಿಮಗೆ ಕೋಪ ತರಿಸುತ್ತಿದೆಯೇ? ಇಲ್ಲ ಅನುಕಂಪ ಮೂಡಿಸುತ್ತಿದೆಯೇ?. ಅವರಿಗೆ ನಿಮ್ಮ ಕ್ಷಮೆ ಇದ್ಯಾ?

 13. amaresh.amapg ಸೆಪ್ಟೆಂಬರ್ 27, 2012 at 2:38 ಅಪರಾಹ್ನ #

  …/////,…NEGILA HOTTA RAITA HOOLODU HOLAVANNE …/////,,,,
  ADARE, PREETI HOTTA HUDUGA MATRA YIDIYODU NELAVANNE…////….

  (((((((HAVE A NICE DAY AND SWEET DAY)))))))))
  <<<<<>>>>>>>>

 14. hitaishi ಸೆಪ್ಟೆಂಬರ್ 28, 2012 at 6:28 ಫೂರ್ವಾಹ್ನ #

  avala novu nimge arta ayta pls kshamisi avlana pls

 15. c.anju gowda ಸೆಪ್ಟೆಂಬರ್ 28, 2012 at 8:01 ಫೂರ್ವಾಹ್ನ #

  Nijvaglu mosa madid hudgine bardid letter tara ede.it was tomuch heart touchble letter.

  Anju

 16. Prathibha ಅಕ್ಟೋಬರ್ 4, 2012 at 9:59 ಫೂರ್ವಾಹ್ನ #

  really superb…
  plz avlu thumbane althidale ond sari kshamsidini antha helbidi….

 17. ನವಿಲುಗರಿ ಅಕ್ಟೋಬರ್ 4, 2012 at 10:13 ಫೂರ್ವಾಹ್ನ #

  ಪತ್ರ ಮೆಚ್ಚಿದ ಎಲ್ಲರಿಗು ಧನ್ಯವಾದ 🙂

 18. ನವಿಲುಗರಿ ಅಕ್ಟೋಬರ್ 4, 2012 at 10:14 ಫೂರ್ವಾಹ್ನ #

  ಆಯ್ತು ಪ್ರತಿಭ ಅವರೆ.. ಹಾಗೆ ಮಾಡೋಣ ಬಿಡಿ ಡೋಂಟ್ ವರಿ…

 19. Priya ನವೆಂಬರ್ 7, 2012 at 3:22 ಅಪರಾಹ್ನ #

  Good job, patra tumba chanagide…

 20. gowra ನವೆಂಬರ್ 21, 2012 at 11:35 ಫೂರ್ವಾಹ್ನ #

  very nice

 21. Shanmukh ಮಾರ್ಚ್ 16, 2013 at 6:54 ಫೂರ್ವಾಹ್ನ #

  awesome,ಅವನು ಪ್ರೀತಿಸುವಾಗ ನನ್ನ ಕಣ್ಣಲ್ಲಿ ನೀರಿರುತ್ತೆ. ಅಲ್ಲಿ ನೀನಿರುತ್ತೀಯ.

  ಕ್ಷಮೆ ಇರಲಿ ಗೆಳೆಯ, edana keli one tara feel ait ri thanks……..

 22. shiva nanda` ಮಾರ್ಚ್ 18, 2013 at 7:05 ಫೂರ್ವಾಹ್ನ #

  tumbane chenagide somanna….. paapa choomi….altale ondsala avlige samadhana maadi neevu ondu letter bariri…

 23. Janu and vidya ಜೂನ್ 7, 2013 at 11:21 ಫೂರ್ವಾಹ್ನ #

  Somu geleya anatidini tappagi tilakobeda. Nanu janu nanage bejaradagalella. Nimma patragalanna odakotiratini tumba chennagiddave.nanagantu tumbane khushi aagute hige kushi koduva leteragalanna.baritairi.inti nimma friend janu

 24. ammu ಜುಲೈ 31, 2013 at 9:50 ಫೂರ್ವಾಹ್ನ #

  hai navilu grai ………… preethi masige sambandada vishya alwa adake awlge kannali neeririwaga awana hudga nenpagthane……………. becz mrng afternun even night yawaglu preethi madonu thanna hudgi kannali kannirina hani nodoku ista padalla kanri…… hudugi kuda aste…
  ur story is very nice….

  @ammu@

 25. Vasanth ನವೆಂಬರ್ 27, 2013 at 1:21 ಅಪರಾಹ್ನ #

  Nanna gelatiya nenapige nannadondu kavana…:

  Oh nanna preethiya hakki
  Munisikondeya nanna mele
  Doora sariyadiru nanninda
  Ekendare kalisikottila ninu adanna nanage

  Tappugaliddavu nannavu
  Tiddidavalu ninu
  Hosadada dariyalli nadeyuvaga Edavudu samanya,
  Mathe elisabekada preethi neenallave

  Badukuva reethi badalisikonde ninagagi
  Nanna guriyanna kandukonde ninnalli
  Guriyannu sameepisuttiddaga
  Eke nee tallutiruve doora

  Hosadada yajamananige siguvalu
  Mathondu hakki
  Nanagiruvalu ninobbale hakki
  Naninna yajamananalla ninna preethisuvava

  Roopa nannalilla
  Kaasu nannalilla
  Aadare yaru kodalaradastu preethi nannalide
  Aa preethi ninage matra meesalu

  Edaviruva ee geleyanannu
  Mathe eddu nillisu
  Nee kshamisade mathyaru
  Kshmisuvaru ninene geleyanannu

  Nee baruvadannu kanuvadakke
  Hathoreyuttive ee kannugalu
  Avu batthi hoguva munna bandubidu

  Ninagagi kattuve sundara goodu
  Aa gudinalliruvevu nanu ninu
  Nodikolluve ninna
  Ondu kanna hani jaradanthe

  Mathe bandubidu nanna hakki
  Bechageneya appugeyinda baramadikolluve
  Kelisuttilave ninnee geleyana koogu
  Mathe bandubidu nanna hakki

 26. anuradha sharma ಜೂನ್ 16, 2014 at 7:59 ಫೂರ್ವಾಹ್ನ #

  super aagi baritiri kanri…..

 27. ಅನಾಮಿಕ ಆಗಷ್ಟ್ 24, 2014 at 12:58 ಅಪರಾಹ್ನ #

  very very nice…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: