ನೀನು ಕರಿಯ, ನಾನು ಬೆಳದಿಂಗಳು. ನೀನು ಪೆದ್ದು, ನಾನು ಮುದ್ದು.

28 ಸೆಪ್ಟೆಂ

ಹಾಯ್ ಈಡಿಯಟ್ ಹೇಗೆದ್ದೀಯಾ? ನಿಂಗೆ ಈಡಿಯಟ್ ಅಲ್ಲದೇ ಬೇರೆ ಹೆಸರು ಒಪ್ಪಲ್ಲ ಕಣೋ, ಅಮ್ಮನ ಪಕ್ಕ ಕುಳಿತು ಲಕ್ಷ್ಮೀ ಸರಸ್ವತಿ ಪೂಜೆ ಮಾಡ್ತಾ ಇದ್ದ ಮುದ್ದು ಗೌರಿಯಂತ ಹುಡುಗೀನ, ಹೀಗೆ ಕೋಣೆಯ ಬಾಗಿಲು ಹಾಕೊಂಡು ೧೪೩ ಮಗ್ಗಿ ಗಟ್ಟು ಮಾಡುವ ಹಾಗೆ ಮಾಡ್ಬಿಟ್ಯಲ್ಲೋ? ನೀನು ಕರಿಯ ನಾನು ಬೆಳದಿಂಗಳು, ನೀನು ಪೆದ್ದು ನಾನು ಮುದ್ದು, ನೀನು ಕೊಳ್ಕ ನಾನು ಫೇರ್ ಅಂಡ್ ಲವ್ಲಿ, ನೀನು ಒರಟ ನಾನು ಹಾಲುಗೆನ್ನೆಯ ಹುಡುಗಿ, ನೀನು ಯೆಸ್ಸೆಸ್ಸೆಲ್ಸಿ ಡುಮ್ಕಿ, ನಾನು ಬೀಯೆಸ್ಸಿ ಟಾಪು, ನಾನು ಎಮ್.ಜಿ ರೋಡು ನೀನು ಕೊತ್ತನೂರು, ನಾನು ಪಿ.ವಿ.ಅರ್, ನೀನು ಬಾಲಜಿ ಟೆಂಟು, ನಾನು ಪುಳಿಯೊಗರೆ ನೀನು ಎಸ್.ಎಲ್.ವಿ ಕಾಲುಸೂಪು, ನಾನು ಎಮ್ಮೆಸ್ ಸುಬ್ಬುಲಕ್ಷ್ಮಿ ನೀನು ಹರಿಕೃಷ್ಣ, ನಾನು ಶಿವ ಶಿವ ಗುರುರಾಘವೇಂದ್ರ ಸ್ವಾಮಿ, ನೀನು ಜಲಗೇರಮ್ಮ ಮುಳ್ಕಟ್ಟಮ್ಮ ದೇವಿ, ನಾನು ತುಳಸಿ ಪಂಚಾಮೃತ ತೀರ್ಥ, ನೀನು ಪಕ್ಕ ಲೋಕಲ್ ಒರ್ಜಿನಲ್ ಚಾಯ್ಸು, ಛೇ ಏನ್ ಜೀವ್ನನೋ ನಿಂದು? ಒಂದೂ ಮ್ಯಾಚ್ ಆಗ್ತಾ ಇಲ್ವಲ್ಲ?

ನಂಗೆ ಈಗಾಗ್ಲೆ ಭಯ ಶುರುವಾಗಿದೆ. ಮನೆಯಲ್ಲಿ ಗಂಡಿನ ಭೇಟೆ ಶುರುವಾಗಿದೆ ಕಣೋ, ಶಂಡಿಗೆ ಮುಖದ ಜೋಯಿಸ ಅದೆಲ್ಲೆಲ್ಲಿಂದನೋ ಕುರಿಗಳನ್ನ ಹಿಡ್ಕೊಂಡ್ ಬರೊ ಹಾಗೆ ಗಂಡುಗಳನ್ನ ಹಿಡ್ಕೊಂಡ್ ಬರ್ತಿದ್ದಾನೆ.. ಗಂಡಿನ ಮುಖ ಸರಿ ಇಲ್ಲ, ಕಿವಿ ಅಗಲ, ಮೂಗು ಸೊಟ್ಟಗಿದೆ, ತಲೇನಲ್ಲಿ ಬಿಳಿ ಕೂದ್ಲು ಶುರುವಾಗಿದೆ, ಹುಡುಗನ ಕಾಲು ಸಣ್ಣ, ಹೀಗೆ ಪ್ರದಿ ದಿನ ಒಂದೊಂದು ಕಾರಣ ಹೇಳಿ ತಪ್ಪಿಸ್ಕೋತ ಇದ್ದೀನಿ, ಅದ್ಯಾವ ಜನ್ಮದಲ್ಲಿ ನನ್ ಶತೃ ಆಗಿದ್ನೋ ಜೋಯೀಸ ಗಂಡುಗಳನ್ನ ಮನೆಯ ಮುಂದೆ ತಂದು ಪೆರೇಡ್ ಮಾಡಿಸ್ತಾನೆ ಇದ್ದಾನೆ, ಅಪ್ಪ ಮಾತ್ರ ನನ್ ಮುದ್ದಿನ ಮಗಳು ಅಂದ್ಕೊಂಡು ನಾನ್ ಹೇಳಿದ್ದಕ್ಕೆಲ್ಲ ಕುಣಿತಾ ಇದ್ದಾರೆ. ನೀನ್ ಮಾತ್ರ ನಾನೊಬ್ಳು ಬದ್ಕಿದ್ದೀನಿ ಅನ್ನೋದು ಮರೆತು ಅದ್ಯಾವ ಕೋಟೆ ಗೆಲ್ಲೋಕ್ ಹೋಗಿದ್ಯೋ ಕೋತಿ?

ನಿನ್ನ ಪ್ರೀತೀಲಿ ಬೀಳಬಾರದು ಅಂತ ಎಷ್ಟೆಲ್ಲ ಕಷ್ಟಪಟ್ಟೆ ಗೊತ್ತಾ? ನೀನು ಹೇಳಿದ ಜಾಗಕ್ಕೆ ಬರಲಿಲ್ಲ, ನಿನ್ನ ಪತ್ರಗಳಿಗೆ ಉತ್ತರ ಬರೆಯಲಿಲ್ಲ, ಕಾಲೇಜಿಗೆ ಹೋಗುವಾಗ ಬಿಕ್ಷುಕನ ಹಾಗೆ ನಿಂತಿರುತ್ತಿದ್ದ ನಿನ್ನ ತಿರುಗಿ ಕೂಡ ನೋಡಲಿಲ್ಲ, ಆದರೆ ನೀನು ಮಾತ್ರ ಅಖಂಡ ತಪಸ್ವಿ, ನಿನಗೆ ಗೊತ್ತಿತ್ತಾ? ಒಂದಲ್ಲ ಒಂದು ದಿನ ಈ ಪುಳಿಚಾರು, ಚಿಕನ್ ಬಿರಿಯಾನಿಗೆ ಫೀದಾ ಆಗುತ್ತೆ ಅಂತ ? ಬರೊಬ್ಬರಿ ಐದು ವರ್ಷದ ಪ್ರಾಮಾಣಿಕ ಪ್ರೀತಿಗೆ ಫಿದಾ ಆಗದೆ ಹೇಗಿರಲಿ ಹೇಳು? ನಿನ್ನಲ್ಲಿ ಕಪಟವಿರಲಿಲ್ಲ, ವಂಚನೆಯಿರಲಿಲ್ಲ, ಸುಳ್ಳು ಇರಲಿಲ್ಲ, ನನಗಾಗಿ ಸುಳ್ಳೇ ಬದಲಾಗಲಿಲ್ಲ, ನೀನು ಹೇಗಿದ್ದೇಯೋ ಹಾಗೆ ಇದ್ದೆ. ಅದೇ ಪ್ರೀತಿಯನ್ನ, ಅದೇ ಅಂತರವನ್ನ, ಇವತ್ತಿಗೂ ಉಳಿಸಿಕೊಂಡು ಬಂದಿದ್ದೀಯಾ ಅಲ್ವಾ ಅದೇ ನನಗಿಷ್ಟವಾಗಿದ್ದು.

ಇನ್ನು ಮುಂದೆ ಮನೆ ಕೆಲ್ಸದವಳ ಹತ್ತಿರ ಕಾಗುಣಿತ ಸರಿ ಇಲ್ಲದ ನಿನ್ನ ಪ್ರೇಮ ಪತ್ರ ಕಳ್ಸೋದು ನಿಲ್ಸು ಮರಾಯ, ನಿನ್ನ ಕನ್ನಡ ನೋಡಿ ನನ್ನ ಕನ್ನಡ ಆತ್ಮಹತ್ಯೆ ಮಾಡ್ಕೊಳ್ಳುತ್ತೆ, ಸ್ವಲ್ಪ ಹುಡುಗಾಟ ಕಡ್ಮೆ ಮಾಡು, ಇಲ್ಲಿಯವರೆಗೆ ಹಿಂದೆ ಸುತ್ತಿದ್ದು, ಅತ್ತಿದ್ದು, ಬೇಡಿಕೊಂಡಿದ್ದು ಎಲ್ಲ ಮುಗಿದ ವಿಷಯ, ನಾನು ಬದುಕೋದಾದ್ರೆ ನಿನ್ನ ಜೊತೆ ಅಂತ ತೀರ್ಮಾನಿಸಿಯಾಗಿದೆ, ನನ್ನ ಚನ್ನಾಗಿ ನೋಡ್ಕೊತೀಯಾ ಅನ್ನೋ ನಂಬಿಕೆ ನನಗೂ ಬರಬೇಕಲ್ಲ ಹುಡುಗಾ? ಒಂದು ಸಣ್ಣ ಕೆಲ್ಸ, ಓಹೋ ಅನ್ನುವಷ್ಟಲ್ಲದಿದ್ರು ಓಕೆ ಅನ್ನುವಷ್ಟು ಸಂಬಳ, ಸೂಪರ್ ಅಲ್ಲದಿದ್ದರೂ ಸಾಧಾರಣ ಅನ್ನುವಂತ ಮನೆ, ಈಗ ಉಳಿಸಿಕೊಂಡಿದ್ದೀಯಲ್ಲ ಅದೇ ಪ್ರೀತಿಯನ್ನ ಜೀವನಪೂರ್ತಿ ನನಗೆ ಕೊಡ್ತೀನಿ ಅನ್ನೊ ಒಂದು ನಂಬಿಕೆ ಇಷ್ಟೆ ಸಾಕು ಕಣೊ ಈ ಹುಡುಗಿಗೆ. ಇನ್ನು ನಿನಗೇ ಪುಳಿಯೊಗರೆ ತಿನ್ನಿಸೋದ ಅಥವ ನಾನೆ ಬಿರಿಯಾನಿ ಮಾಡೋದ್ನ ಕಲಿಯೋದ ಅನ್ನೋದನ್ನ ಇಬ್ಬರು ಕುಳಿತು ಯೊಚಿಸೋಣ.

ನಿನ್ನ
ನವಿಲೂರ್ ಹುಡುಗಿ

14 Responses to “ನೀನು ಕರಿಯ, ನಾನು ಬೆಳದಿಂಗಳು. ನೀನು ಪೆದ್ದು, ನಾನು ಮುದ್ದು.”

  1. yashu ಸೆಪ್ಟೆಂಬರ್ 29, 2012 at 10:21 ಫೂರ್ವಾಹ್ನ #

    wonderfulll birayani madodna kalisi next time….

  2. sundaranadu ಸೆಪ್ಟೆಂಬರ್ 29, 2012 at 1:31 ಅಪರಾಹ್ನ #

    ನವಿಲೂರ ಹುಡುಗಿ ಪ್ರೀತಿ ಚೆನ್ನ, ನವಿಲುಗರಿಯ ಹುಡುಗನ ಬರಹ ಚೆನ್ನ

  3. jamunarani ಸೆಪ್ಟೆಂಬರ್ 29, 2012 at 1:33 ಅಪರಾಹ್ನ #

    lovely letter

  4. nandu ಅಕ್ಟೋಬರ್ 3, 2012 at 8:42 ಫೂರ್ವಾಹ್ನ #

    super kandri….

  5. nandu ಅಕ್ಟೋಬರ್ 3, 2012 at 8:43 ಫೂರ್ವಾಹ್ನ #

    super kandri.

  6. amaresh.PG ಅಕ್ಟೋಬರ್ 4, 2012 at 6:08 ಫೂರ್ವಾಹ್ನ #

    ”’yaru yegidre yenu
    priti yidre saku ade halu jenu”’
    ******AMARESH.PG******

  7. Niriksheya kannugalu................. ಅಕ್ಟೋಬರ್ 9, 2012 at 10:28 ಫೂರ್ವಾಹ್ನ #

    chooryyyy:(
    late agi letter oditini.nange gothu kshamisuhudu sagardavara dodda guna antha 🙂
    channagidhe somu.bere ella lettergaligintha swalpa different age edhe.short and sweet agi letter mugidhu ogidhu gothe aglilla
    just rock…………..:)

  8. ನವಿಲುಗರಿ ಅಕ್ಟೋಬರ್ 10, 2012 at 10:35 ಫೂರ್ವಾಹ್ನ #

    ಯಶೂ,,ನಂದು, ಸುಂದರನಾಡಿನ ಸುಂದರಣ್ಣ, ಅಮರೇಶ್.. ಎಲ್ಲರೂ ಮೆಚ್ಚಿದ್ದಕ್ಕೆ..ನವಿಲುಗರಿ ಖುಷಿಯಾಗಿದೆ

  9. Shanmukh ಮಾರ್ಚ್ 16, 2013 at 6:42 ಫೂರ್ವಾಹ್ನ #

    super kanri,

  10. ಅನಾಮಿಕ ಸೆಪ್ಟೆಂಬರ್ 9, 2013 at 1:58 ಅಪರಾಹ್ನ #

    simply superb…..

  11. ಅನಾಮಿಕ ಮಾರ್ಚ್ 22, 2014 at 3:05 ಅಪರಾಹ್ನ #

    ಹುಡುಗಿಯರು 2-3 ವರ್ಷ ಅಪ್ಪಟ ಪ್ರೀತಿ ಮಾಡಿದ ನಂತರ ಕುಟುಂಬದ ಭಾವಕ್ಕೆ ಒಳಗಾಗಿ ಪ್ರೀತಿ ತ್ಯಾಗ ಮಾಡುವಳು ಎಂದು ತಿಳಿದೆ. ಒಂದು ಹುಡುಗ ಹುಡುಗಿ ಜೊತೆ ವಿಶೇಷವಾಗಿ ಮಾತನಾಡುವುದನ್ನು ಲವ್ ಎಂದು ತಿಳಿಯಬಹುದೇ? plz reply to soorajame28@gmail.com

  12. ಅನಾಮಿಕ ಮೇ 5, 2015 at 10:57 ಫೂರ್ವಾಹ್ನ #

    super duper kanreee somu avre

  13. Abdulrajak k ನವೆಂಬರ್ 21, 2016 at 6:28 ಅಪರಾಹ್ನ #

    Super friend

  14. Raj ಅಕ್ಟೋಬರ್ 22, 2019 at 2:26 ಅಪರಾಹ್ನ #

    Super 👌

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: