ನಿಮ್ಮನ್ನ ಪ್ರೀತಿಸೋಕೆ ನಾನು ಸಾವಿರ ಕಾರಣಗಳನ್ನ ಕೊಡ್ತೀನಿ..

29 ಡಿಸೆ

ಹಾಯ್ ಕೆನ್ನೆಯ ಮೇಲಿನ ಮಚ್ಚೆಯ ಹುಡುಗಿ,

ಹೇಗಿದ್ದಿರಿ? ನಿಜ ಹೇಳಿದ್ರೆ ಕೋಪ ಮಾಡ್ಕೋತೀರಿ, ನೀವು ಎಂದಿನಂತೆ ನಿನ್ನೆ ಕೂಡ ನನ್ನ ಕನಸಿಗೆ ಬಂದಿದ್ರಿ, ಅದೆಷ್ಟು ಸಲ ಮುದ್ದು ಮಾಡಿದೆನೊ ಗೊತ್ತಾಗ್ತಿಲ್ಲ, ಹೀಗೆ ಕನಸಿಗೆ ಬರೋದು, ನಾನು ಕನಸಲ್ಲೆ ಜಯಂತ್ ಕಾಯ್ಕಿಣಿ ಅಣ್ಣ ಬರೆದ ಎಲ್ಲ ಪ್ರೇಮದ ಹಾಡುಗಳನ್ನ ನಿಮ್ಮ ಮುಂದೆ ಹಾಡಿಕೊಳ್ಳೋದು, ನೀವು ನಾಚುತ್ತಾ ಮಚ್ಚೆಯಿರುವ ಕೆನ್ನೆ ತೋರಿಸೋದು, ನಾನು ನಿಮ್ಮ ಕೆನ್ನೆಗೆ ಮುತ್ತಿಡೋದ, ಅಲ್ಲಿರುವ ಮುದ್ದು ಮಚ್ಚೆಗೆ ಮುದ್ದು ಮಾಡೋದ ಅಂತ ಯೋಚನೆ ಮಾಡುವಷ್ಟರಲ್ಲೆ, ‘ಗೆಟ್ ಲಾಸ್ಟ್ ಈಡಿಯಟ್’ ಅಂತ ನೀವು ನಿಮ್ಮ ೧೨.ಬಿ ಬಸ್ಟಾಪಿನಲ್ಲಿ ಆರು ವರ್ಷಗಳ ಹಿಂದೆ ಬೈದಿದ್ದು ನೆನಪಾದ ಕೂಡಲೆ ಅಯ್ಯೋ ಇದು ಕನಸಾ ಎಂದುಕೊಂಡು ಮತ್ತೆ ಮರು ದಿನದ ಕನಸಿನವರೆಗೂ ಕಾಯುತ್ತೀನಿ ಅದೇ ಪ್ರೀತಿಯಿಂದ.

ನಿಜ ಅಪ್ಪು ಡಿಯರ್, ನಿಮ್ಮ ಮೇಲಿನ ನನ್ನ ‘ಅಪೂರ್ವ’ವಾದ ಹಂಬಲಕ್ಕೆ ಇವತ್ತಿಗೆ ಆರು ವರ್ಷಗಳ ತುಂಬು ಹರೆಯ.! ಇವತ್ತಿಗೂ ನಿಮ್ಮ ಮೇಲೆ ಅದೇ ಪ್ರೀತಿಯನ್ನಿಟ್ಟುಕೊಂಡು ಕಾಯ್ತಿದ್ದೀನಿ, ನಿಮ್ಮದು ಮಾತ್ರ ಮುದ್ದು ಗೌರಿಯ ಮೌನ. ೨೧೯೦ ದಿನಗಳು ಕಳೆದು ಹೋದರೂ ನಿಮ್ಮ ಮೌನ ಮಾತ್ರ, ಕೊನೆಗೂ ನನ್ನ ಜೊತೆಗಿನ ಒಂದೇ ಒಂದು ಮಾತಾಗಲೇ ಇಲ್ಲ. ಇಷ್ಟು ದಿನಗಳು ಕಳೆದರೂ ಅವತ್ತೂ ನಿಮ್ಮೆಡೆಗಿದ್ದ ಪ್ರೀತಿಗೆ ಇವತ್ತಿಗೂ ಒಂದಿಷ್ಟು ಮುಪ್ಪು ಬಂದಿಲ್ಲ, ಆದರೆ ತುಂಬಾ ತುಂಬಾ ಮುದ್ದು ಬಂದಿದೆ. ಎಸ್ಸೆಸ್ಸೆಲ್ಸಿಯಲ್ಲಿ ಹುಡುಗಾಟಕ್ಕೆಂದು ಲವ್ ಯು ಅಂದವನು ನಾನು, ಇವತ್ತು ನಿಮ್ಮ ಜೊತೆ ಜೀವನ ಹಂಚ್ಕೊಳ್ಳೋಕೆ ಲವ್ ಯು ಅಂತಿದ್ದೀನಿ. ಇಷ್ಟು ದಿನ ಕೇವಲ ಪ್ರೇಮಿಯಾಗಿದ್ದ ನಾನು, ಇವತ್ತು ಬಾಳ ಸಂಗಾತಿಯಾಗ್ತೀರಾ ಅಂತ ಕೇಳ್ಕೊತಿದ್ದೀನಿ, ಬಾಳ ಸಂಗಾತಿಯಾದ ಮೇಲು ಕೂಡ ಪ್ರೇಮಿಯಾಗೆ ಉಳ್ಕೋತೀನಿ ಅಂತ ಭರವಸೆ ಕೊಡ್ತೀನಿ, ಪ್ಲೀಸ್ ಅಪ್ಪು ಡಿಯರ್, ನಿಮ್ಮನ್ನ ಪ್ರೀತಿಸೋಕೆ ನಾನು ಸಾವಿರ ಕಾರಣಗಳನ್ನ ಕೊಡ್ತೀನಿ, ಆದರೆ ನೀವು, ನಾನ್ ಕಪ್ಪಿದ್ದೀನಿ ಅನ್ನೋ ಒಂದೇ ಕಾರಣವನ್ನ ಬಿಟ್ಟು ಬೇರೆ ಕಾರಣ ಕೊಡೋಕ್ ಆಗತ್ತಾ ಅಪ್ಪು ಡಿಯರ್?.

ನೀವು ಕೆಟ್ಟೋರಲ್ಲ ಅಪ್ಪು, ತುಂಬಾ ಒಳ್ಳೆಯವರು, ನನ್ ಮೇಲೆ ನಿಮಗೆ ಪ್ರೀತೀನೆ ಇಲ್ಲ ಅಂದಿದ್ರೆ ಡಜನ್‌ಗಟ್ಲೆ ಹುಡುಗರನ್ನ ಯಾಕೆ ರೆಜೆಕ್ಟ್ ಮಾಡ್ತಿದ್ರಿ? ೧೨.ಬಿ ಬಸ್ಟಾಪಿನಲ್ಲಿ ಬಸ್ಸು ಹತ್ತೋವಾಗ್ಲೆಲ್ಲ ‘ಕಾವೇರಿ’ ಬೇಕರಿ ಕಡೆ ಯಾಕ್ ನೋಡ್ತ ಇರ್ತೀರಿ ಹೇಳಿ ನೋಡೋಣ? ಅಲ್ಲಿ ನಾನ್ ಇದ್ದೇ ಇರ್ತೀನಿ ಅನ್ನೋದು ನಿಮ್ಗೆ ಗೊತ್ತಿರೋ ವಿಚಾರಾನೆ ಅಲ್ವಾ? ಸಂಜೆ ಬಸ್ಸ್ ಇಳಿದೋರು ಜಪ್ಪಯ್ಯ ಅಂದ್ರು ಮನೆಗ್ ಯಾಕ್ ಹೋಗಲ್ಲ? ಯಾಕ್ ಹಾಗೆ ಬಸ್ಟಾಪ್ನಲ್ಲಿ ಕೂತ್ಕೋತೀರಿ,? ಪಕ್ಕದಲ್ಲೇ ಇರೋ ಹೋಟೆಲ್ಲಿನ ಮೂಲೆಯಲ್ಲಿ ನಾನು ಕಾಣಿಸಿಕೊಂಡ್ ತಕ್ಷಣ ಬಿರುಗಾಳಿ ಹಂಗೆ ಹೊರಟು ಹೋಗ್ತೀರಿ ಅಲ್ವಾ ಇದಕ್ಕೆ ಕಾರಣ ಪ್ರೀತಿ ಅಲ್ಲದೇ ಮತ್ತೇನ್ ಹೇಳೀ ನೋಡೋಣ? ಅಲ್ರೀ.. Every heart has a pain… Only the way of expression is different… some hide it in their eyes while some hides in their smile ಅಂತ ಮೆಸ್ಸೇಜ್ ಮಾಡಿ ಯಾಕ್ರಿ ಮೊಬೈಲ್ ಸ್ವಿಚ್ ಆಫ್ ಮಾಡ್ತೀರಿ? ನೋಡಿ ನನಗೆ ಗೊತ್ತು ನನ್ ಮೇಲೆ ಪ್ರೀತಿ ಇದೆ ನಿಮ್ಗೆ, ಆದ್ರೆ ಹೇಳ್ಕೋತಿಲ್ಲ ಸ್ವಲ್ಪ ಸ್ವಾಭಿಮಾನ ಜಾಸ್ತಿ ಅಲ್ವ? ನಾನ್ ಇಷ್ಟ ಪಡ್ತೀನಿ ಅಪ್ಪು, ನಿನ್ ಮದ್ವೆ ಆಗ್ತೀನಿ ಅಂದ್ರೂ ಕೂಡ, ಬೆಣ್ಣೆ ತರ ಹುಡುಗಿಗೆ, ರಾಗಿ ಮುದ್ದೆ ತರ ಇರೋ ಹುಡುಗನ್ ಜೊತೆ ಎಂತ ಸಂಬಂಧ ಅನ್ನೋ ಯೋಚನೆ ಅಲ್ವ ನಿಮ್ಗೆ?.

ಸರಿ ಅಪ್ಪು, ನಮ್ಮ ಪ್ರೀತಿಗೆ ಅಯ್ಯೋ ಕ್ಷಮಿಸು, ನನ್ನ ಪ್ರೀತಿಗೆ ಇವತ್ತಿಗೆ ಆರು ವರ್ಷ ತುಂಬ್ತಾ ಇದೆ, ಇದನ್ನ ಸೆಲಬ್ರೇಟ್ ಮಾಡೋ ಮೂಡಲ್ಲಿ ನಾನಂತು ಇದ್ದೀನಿ, ಪ್ರತಿ ಡಿಸೆಂಬರ್ ತಿಂಗಳ ೨೯ನೆ ತಾರೀಕು ನನಗೆ ವ್ಯಾಲಂಟೇನ್ಸ್ ಡೇ, ಯಾಕಂದ್ರೆ ಅವತ್ತೇ ನೀವು ನನಗೆ ಸಿಕ್ಕಿದ್ದು. ಪ್ರತಿವರ್ಷದ ಹಾಗೆ ಈ ವರ್ಷವು ನೀವು ಮುನಿಸಿಕೊಂಡ ಮುನಿಯಮ್ಮನ ಹಾಗೆ ಆಡಿದ್ರೆ ತುಂಬಾನೆ ಹರ್ಟ್ ಆಗತ್ತೆ. ಹೆಚ್ಚೇನು ಇಲ್ಲ, ಇವತ್ತು ಸಂಜೆ ಅದೇ ೧೨.ಬಿ ಬಸ್ಟಾಪಿನ ಕಾವೇರಿ ಬೇಕರಿಯ ಪಕ್ಕದ ಹೋಟೇಲಿನ ಮೂಲೆಯಲ್ಲಿ ನಿಮಗಿಷ್ಟವಾದ ಪಾನಿಪೂರಿ ಹಿಡಿದುಕೊಂಡು ನಿಂತಿರುತ್ತೇನೆ, ನಿಮಗಿಷ್ಟವಾದರೆ ನಿಮ್ಮ ಮನೆಯ ಆಲದ ಮರದವೆರೆಗೂ ನಿಮಗೆ ಒಂಚೂರು ಕೈತಾಕಿಸದ ಹಾಗೆ ನಿಮ್ಮೊಂದಿಗೆ ಹೆಜ್ಜೆಹಾಕುತ್ತೇನೆ, ತುಂಬಾ ಒಳ್ಳೆ ಹುಡುಗ ಅಂದುಕೊಂಡು ನನ್ನ ಪ್ರೀತಿಗೆ ನೀವು ಒಪ್ಪಿಕೊಂಡರೆ, ಅದೇ ಆಲದ ಮರೆಯಲ್ಲಿ ನಿಮಗೂ ಗೊತ್ತಾಗದ ಹಾಗೆ ನಿಮ್ಮ ಕೆನ್ನೆಯ ಮೇಲಿನ ಮೆಚ್ಚೆಗೆ ಒಂದು ಮುತ್ತು, ನಿಮಗೆ ಎರಡು. !!

ನಿಮ್ಮ ನವಿಲುಗರಿ ಹುಡುಗ

24 Responses to “ನಿಮ್ಮನ್ನ ಪ್ರೀತಿಸೋಕೆ ನಾನು ಸಾವಿರ ಕಾರಣಗಳನ್ನ ಕೊಡ್ತೀನಿ..”

  1. pammi ಡಿಸೆಂಬರ್ 29, 2012 at 12:21 ಅಪರಾಹ್ನ #

    Re tumba chennagide today first time naan odiddu istu Dina idanna nodde ms madkonde ansutte ri

    tumba Chennai bardiddira nim aa hudgi nimge sigli anta kelkotini

    all the beat…………kariya!!!!

    pammi !

  2. ಮೌನ ವೀಣೆ ಡಿಸೆಂಬರ್ 31, 2012 at 6:59 ಫೂರ್ವಾಹ್ನ #

    ತುಂಬಾ ಚೆನ್ನಾಗಿದೆ ಬರಹ. ಪ್ರೀತಿ ನಿರೀಕ್ಷೆಯ ಭಾವನೆ, ಕಾಳಜಿ ಮಾತುಗಳು very touching..

    ನಿಮ್ಮ ಪ್ರೀತಿಗೆ ಯಶಸ್ಸು ಸಿಗಲಿ..

  3. ಅನಾಮಿಕ ಡಿಸೆಂಬರ್ 31, 2012 at 7:16 ಫೂರ್ವಾಹ್ನ #

    Nimma preeti adastu bega sigali, e bharahavanu odi ondu kshana nanna preeti nenapaitu

  4. ROJA ಜನವರಿ 3, 2013 at 8:26 ಫೂರ್ವಾಹ್ನ #

    Re tumba chennagide . nim hudgi nimge sigli anta kelkotini.

    Roja

  5. santhosh ಜನವರಿ 3, 2013 at 11:39 ಫೂರ್ವಾಹ್ನ #

    ಆರು ವರ್ಷಗಳ ಕಳೆದರೂ ಅದೇ ಪ್ರೀತಿಯನ್ನಿಟ್ಟುಕೊಂಡು ಕಾಯ್ತಿದ್ದೀರಿ ಅಲ್ವ…… ಇದು ಒಂದು ಮಾತು ಸಾಕೂ ಗೆಳೆಯ ಆಕೆ ನಿಮ್ಮನ್ನ ಪ್ರೀತಿಸೋಕೆ……….ಸಾವಿರ ಕಾರಣಗಳ ಬೇಕಿಲ್ಲ…!!!

  6. NaynaManjunath:):) ಜನವರಿ 3, 2013 at 12:22 ಅಪರಾಹ್ನ #

    channagide navilugari.ofter 1 month blog nodi kushi aythu.;)

  7. sheela ಜನವರಿ 10, 2013 at 12:53 ಅಪರಾಹ್ನ #

    super brother preetiya nejavada artana thelesedera nem preeti nemgay segali best of luck.

  8. ಅನಾಮಿಕ ಜನವರಿ 13, 2013 at 9:46 ಫೂರ್ವಾಹ್ನ #

    Bari baryodalla , hage nadkobekri, sumane barudre en sigathe mannu, idhu kaligalla….. bari baanada matindha preti sigolla , nimma naduvalike alu priti kalaji belskoli…..nimmage nima hudugi sikali nimma preeti e article ashte nija idre

  9. ಅನಾಮಿಕ ಜನವರಿ 19, 2013 at 10:27 ಫೂರ್ವಾಹ್ನ #

    vry nic

  10. Dr.R.usharani ಫೆಬ್ರವರಿ 19, 2013 at 9:31 ಫೂರ್ವಾಹ್ನ #

    tumba cannagide. kela hudugiru hage. priitina helikollodakke agade oddadtare. priiti iddaru illa annohage act madtare.

  11. Shanmukh ಮಾರ್ಚ್ 16, 2013 at 6:30 ಫೂರ್ವಾಹ್ನ #

    Super guru nim priti nimage sikke sigute……………

    All the best for your cute love..

    Shanmukh

  12. Renuka ಮೇ 2, 2013 at 12:19 ಅಪರಾಹ್ನ #

    enta Priri edu
    Tumbane Chanagide.realy i like it

  13. ಅನಾಮಿಕ ಮೇ 10, 2013 at 8:37 ಫೂರ್ವಾಹ್ನ #

    you really great , she is too lucky all the best

  14. ಅನಾಮಿಕ ಮೇ 10, 2013 at 8:38 ಫೂರ್ವಾಹ್ನ #

    poornima raghavendra

    she is too lucky, you are really great all the best

  15. Ramesha V ಮೇ 20, 2013 at 12:05 ಅಪರಾಹ್ನ #

    My Dear u r very very fentastic dear.. am a big fan of ur ” HEARTLY FEELINGS ” DO YOU KNOW ONE THING ? NAANU KUDA IDE THARAHADA BHAVANEGALANNU HOTTHAVANU…NANNA BAANANGALADA GELATHIGAAGI KAYUTTHIRUVA BADAPAAYI …
    NAMMIBBARA SNEHAKKE VIJRUMBHANE CELEBRATION MAADONA BAA..NANNA MAIL ID : rameshbujji422@gmail.com…and my phone no : 9742606044

  16. ammu ಜುಲೈ 31, 2013 at 10:26 ಫೂರ್ವಾಹ್ನ #

    hai kariya ………. bili hudgige bili kudle idhre yen chanda alwa kappu kudhale super kanri … hagene nim benne mudhege e kari mudhene jodi agodhu alwa… u knw 1 thing nandhu kuda same story kanri …. nim preethige jaya sigli wish u all the best frnd..

    nim hudgi nimge sikli sikthale k na dnt warry…. i love your this story
    a hudugi thumbane lucky kanri..

    @ammu@

  17. Vanishreedhar ಆಗಷ್ಟ್ 9, 2013 at 12:58 ಅಪರಾಹ್ನ #

    Anna nija nim preethi igagle yavadhadru kone kandiruthe alla.? Nanu nan jeevanadali obrana preethi anno hesrali aradhisidhe kaledha 12 varshadhindha ., adhu iga kaledhu hoythu , nim preethi hage hagbhardhu.

  18. Kumari latha ಆಗಷ್ಟ್ 12, 2013 at 10:16 ಅಪರಾಹ್ನ #

    Your talking style very superb each word touch everyonce hearts re

  19. Jayanth ಆಗಷ್ಟ್ 12, 2013 at 10:18 ಅಪರಾಹ್ನ #

    Nanu obha bhagna premi adre e reethi adhutha rachane nange bharola brother

  20. Himesh bharate ಆಗಷ್ಟ್ 12, 2013 at 10:20 ಅಪರಾಹ್ನ #

    En bharithira sir ondhodh maathu mana thattuthe thank you so much

  21. Vasantha Kumar M S ನವೆಂಬರ್ 27, 2013 at 1:13 ಅಪರಾಹ್ನ #

    Tumba chennagide…

  22. suketh poojary mangalore ಜುಲೈ 21, 2014 at 2:15 ಅಪರಾಹ್ನ #

    spuer sir chennagide edu nan love stroy tara ede thnx nanage bejar adre nim naveegari yannu ooduta erttini

  23. ಅನಾಮಿಕ ಮೇ 26, 2015 at 12:25 ಅಪರಾಹ್ನ #

    preeti madidavarige gottu adara novu

  24. Ritu ಮೇ 26, 2015 at 12:31 ಅಪರಾಹ್ನ #

    preeti madidavarige gothu preetiya novu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: