Archive | ಚೌ ಚೌ RSS feed for this section

ಹೇಮಾ ಮತ್ತು ರಂಜಿತನ “ಹಾಗೇ ಸುಮ್ಮನೆ”

29 ನವೆಂ

ಕೆಲವೊಂದು ಸಮಯದಲ್ಲಿ ವಾರಪೂರ್ತಿ ಗುಬ್ಬಚ್ಚಿಯ ಹಾಗೆ ಕುಳಿತರೂ ಗುಬ್ಬಚ್ಚಿ ಗಾತ್ರದ ಒಂದು ಪುಟಾಣಿ ಕವನ ಬರಿಯುವುದೂ ಕೂಡ ಒಂದೊಂದು ಸಲ ಅಗದ ಮಾತು..ಆದರೇ ಇಲ್ಲಿ ನನ್ನ ಪ್ರೀತಿಯ ಗೆಳೆಯ “ನೀಲಿಹೂವಿನ” ರಂಜಿತ್ ಮತ್ತು ಗೆಳತಿ “ಹೇಮಾಂತರಂಗದ” ಹೇಮಾ ಹಾಗೆ ಸುಮ್ಮನೆ ಮಾತನಾಡುತ್ತಲೇ ಒಂದು ಶಾಕ್ ಕೊಟ್ಟಿದ್ದಾರೆ..ನನಗಿಷ್ಟ ಆಯ್ತು..ನಿಮಗೂ ಇಷ್ಟವಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಅವರ ಒಪ್ಪಿಗೆಯನ್ನ ಕೇಳದೇ ಇಲ್ಲಿ ಹಾಕುತ್ತಿದ್ದೇನೆ. ಒಪ್ಪಿಸಿಕೊಳ್ಳಿ..

ಥಾಂಕ್ಸ್ ಹೇಮಾ ಡಿಯರ್ ಮತ್ತು ರಂಜಿತ್
————————————————————————————————
hema:
ದೇಹವಿದೆ ಉಸಿರಿಲ್ಲ,
ಕಣ್ಗಳಿವೆ ನೋಟವಿಲ್ಲ,
ಹೃದಯವಿದೆ ಪ್ರೀತಿಯಿಲ್ಲ,
ಆರ್ಕುಟ್ ಇದೆ…… ಬೇಕಾದವರ ಸ್ಕ್ರಾಪೇ ಇಲ್ಲ
——————————–
Ranjith:
ಏ ಜಂಭದ ಹುಡುಗೀ
ಹೆಚ್ಚಾಗಿವೆ ನಿನ್ನ ಮಾತುಗಳು ಈ ನಡುವೆ,
ಬಾಯಿಗೊಂದು ಬೀಗ ಬೇಕಿವೆ
ಅರ್ಜೆಂಟಾಗಿ ಮಾಡಬೇಕಿದೆ ಮದುವೆ,
ನನ್ನ ಒಂದು ಫೋನ್ ಕಾಲ್ ಸಾಕು ನಿನ್ನಪ್ಪನಿಗೆ,
ಕೂಡಲೇ ನೀನಂದು ವಧುವೇ..:)
—————————-
hema:
ಹೇ ರಂಜಿತ್, ನಿನಗಿದು ತರವೇ,
ಗೆಳೆಯನೆಂದುಕೊಂಡಿದ್ದೆ ನಿನ್ನನ್ನು,
ನನ್ನನ್ನೇ ನೇಣುಗಂಬಕ್ಕೇರಿಸಲು
ಅಣಿ ಮಾಡುತ್ತಿರುವೆ….
—————————-
Ranjith:
ಮದುವೆಗೆ ನೇಣೇಕೆ ಹೋಲಿಕೆ?
ನೂರು ಮಕ್ಕಳ ಜತೆ ಆಟವಾಡಿಕೊಂಡಿರಲು
ಮದುವೆಯೆ ಅಲ್ಲವೆ ಪೀಠಿಕೆ? 😉
ಬೇಗ ನಿನಗೊಂದು ಸಾಥಿ ಸಿಗಲಿ ಎಂಬುದಷ್ಟೇ ನನ್ನ ಆಶಯ,
ಆಗಲೇ ನನ್ನೆದೆಯಲಿ ಕಾಯುತಿದೆ ನಿನಗೊಂದು ಶುಭಾಶಯ…
—————————-
hema:
ಇಂಜಿನಿಯರ್ ಕೆಲಸ ನಿಲ್ಲಿಸಿ,
ಮ್ಯಾಚ್ ಮೇಕರ್ ಕೆಲಸ ಶುರು ಮಾಡಿಬಿಡಿ,
ಜಟ್ ಪಟ್ ಅಂತ ನನಗೊಂದು ಗಂಡು ನೋಡಿಬಿಡಿ,
ವರ್ಷ ವರ್ಷವೂ ಆಟವಾಡಲಿಕ್ಕೆ ನಿಮಗೊಂದು ಪಾಪ
ಇನ್ನೂ ಬರೀಲಿಕ್ಕೆ ನನಗೆ ನಾಚಿಕೆಯಾಗುತ್ತೆ ಹೋಗೀಪಾ……
—————————-
Ranjith:
ಉತ್ತರಿಸಲಾಗದೇ ಬೆವರ್ ಬಂತೆ?
ಪೋವಾರ್ ಮೆದುಳಿಗೆ ಪವರ್ ಹೋಯ್ತೇ?:)
—————————-
Hema:
ಪವರ್ ಬೇರೆ ಬೇಕೆ ರಂಜಿತ್ ಗೆ ಉತ್ತರಿಸಲು?
ಬ್ರಹ್ಮಾಸ್ತ್ರ ಬೇಕೇನು ಗುಬ್ಬಿಯನ್ನು ಸಾಯಿಸಲು?
—————————-
Ranjith:
ಮಾಡಬೇಕು ಕವಿಗಳ ಸಂಗ..
ಬೇಕಿತ್ತೇ ನಿಮಗೆ ಅವರ ಜತೆ ಪಂಗಾ?
—————————-
Hema:
ಪಂಗ ತೆಗೆದರೆ ಅಲ್ಲವೆ ಕವಿತೆಗಳು ಹುಟ್ಟುವುದು,
ನಿಮ್ಮಿಂದ ನಾವು ಕವಿಯತ್ರಿ ಎನಿಸಿಕೊಳ್ಳುವುದು
—————————-
Ranjith:
ಅಂತೂ ಇಂತೂ
ಜಟ್ ಪಟ್ ಆಗಿ
ಮನದಾಸೆ ಹೊರಬಂತು…:)
ನಿಮ್ಮ ಖುಷಿಗಾಗಿ ಆಗುವುದ
ಬಿಟ್ಟು ಇಂಜಿನೀರು,
ಮ್ಯಾಚುಮೇಕರೇನು
ಆಗಬಲ್ಲೆ ಅಡುಗೆ
ಕಾಂಟ್ರಾಕ್ಟರು..
—————————-
hema:
ನಿಮ್ಮನ್ನು ಅಷ್ಟೊಂದು ಕಾಡಿಸಿ ಮಾಡಿಕೊಳ್ಳುವ ಮದುವೆಯಾದರೂ ಯಾಕೆ, ಅಡಿಗರನ್ನು ಅಡಿಗೆ
ಕಾಂಟ್ರಾಕ್ಟರ್ ಆಗಿಸಿ ನಾನೇನು ನರಕಕ್ಕೆ ಹೋಗಬೇಕೆ?
(ಅಂದಹಾಗೆ, ನಾನುಮದುವೆಗೆ ಅವಸರವೆಂದು ಹೇಳಿದೆನೆ?
ಕಾಣದ ಸುಂದರಿಗೆ ಕಾಯುತ್ತಿರುವುದು ನಾನಲ್ಲ ನೀನೆ )
—————————-
Ranjith:
ಹದ್ದನ್ನು ಗುಬ್ಬಿ ಎಂದುಕೊಳ್ಳುವುದು ಮುಗ್ಧತೆ,
ರಂಜಿತ್ ಗೆ ಉತ್ತರಿಸಲು ಒದ್ದಾಡುವುದನು ಬಿಟ್ಟು
ಮಾಡು ನೀ ನಿನ್ನ ಮದುವೆಗೆ ಸಿದ್ದತೆ..:)
—————————-
hema:
ಸಿದ್ದತೆ ಮಾಡಿಕೊಳ್ಳಲೇನಿದೆ ಮದುವೆಗೆ,
ಸಿಂಗಾರ ಬೇಕೇನು ವಧುವಿನಂತೆ ಕಾಣುವ ಹುಡುಗಿಗೆ?
—————————-
Ranjith:
ಕವಿಯತ್ರಿ ಅನ್ನಿಸಿಕೊಳ್ಳಬೇಕಾದ್ರೆ ತೆಗೆಯಿರಿ ಪಂಗ,
ನಿಮ್ಮಾಸೆಗೆ ತರಲಾರೆ ಭಂಗ..
‘ನನ್ನ’ ಗೆಳತಿಯಾಗಿ ಓದುಗರ ಕೈಲಿ
ನೀವನ್ನಿಸಿಕೊಳ್ಳದಿದ್ದರೆ
ಸಾಕು ಮಂಗ..
—————————-
hema:
ನಿಮ್ಮ ಆಶೀರ್ವಾದ ಹೀಗೆ ಇರಲಿ,
ನೀವು ಕಾಲೆಳೆಯುತ್ತೀರಿ ಅಂತಲಾದರೂ ನನ್ನಿಂದ
ಒಂದೆರೆಡು ಕವನಗಳು ಹೊರಬರಲಿ….
—————————-
Ranjith:
ಕಾಣದ ಸುಂದರಿಗೆ ಕಾಯುತಿರುವುದು ನಾನೇ,
ಕಾಯುವೆ ಆಕೆಗೆ, ಬಂದರೆ ಬರಲಿ ಏನೇ…
ನೀವೂ ಬೇಗ ಮದುವೆ ಆದರೆ,
ನಿಮ್ಮ ಮಗನ ಜತೆ ಮಾಡುವೆ
ನನ್ನ ಮಗಳ ಮದುವೆ..:)
—————————-
hema:
ನೀವು ಕಾಯುತಲೇ ಇದ್ದರೆ ಆಕೆಗೆ,
ಆಗುವುದೆಂದು ಮದುವೆ,
ಕಾಯುತ್ತಿರುವ ನನ್ನ ಮಗನಿಗೆ,
ನಿಮ್ಮ ಮಗಳು ಸಿಗುವುದೆಂದು?
ಕಾದು ಕಾದು ದೇವದಾಸನೇ ಆದಾನೇನೋ,
ಅವನೂ ನಿಮ್ಮಂತೆಯೇ ಮುಂದು…
—————————-
Ranjith:
ಸಿಂಗಾರವೇ ಹೆಣ್ಣಿನ ಸೌಂದರ್ಯಕ್ಕೆ ಒಡವೆ..
ವಧುವಿನಂತೆ ಕಾಣುವ ಹುಡುಗಿಯೆ ನಿನಗ್ಯಾಕೆ ಅದರ ಗೊಡವೆ..
ಆದರೆ ಸಿಂಗರಿಸಿಕೊಂಡರೆ,
ಹುಡುಗನ ಕಂಗಳಿಗೆ ಅವಳು
ತುಂಬಿದ ಸೀಸದ ಮದ್ಯವೆ..;-)
—————————-
hema:
ಸೀಸೆ ಮುಗಿಯುವವರೆಗಷ್ಟೆ ನಶೆ,
ವಯಸ್ಸು ಇಳಿಯುವವರೆಗಷ್ಟೇ ಆಶೆ….
—————————-
Ranjith:
ಸೌಂದರ್ಯವೆಂಬುದು ನಶೆ,
ಏರಿದಷ್ಟೇ ವೇಗವಾಗಿ ಇಳಿಯುವುದು..
ಪ್ರೀತಿಯೆಂಬುದು ಕೊಟ್ಟಂತೆ ಭಾಷೆ..
ಜೀವನಪೂರ್ತಿ ನಿಭಾಯಿಸಬೇಕಾವುದು..:)
—————————-
Ranjith:
ಮೈ ಡಿಯರ್ ಹೇಮಾ,
ನೀವೂ ಎಲ್ಲಾ
ಹುಡುಗಿಯರಂತೆ ಸೇಮಾ(same)..:)?
ಯಾಕೆ ನನ್ನ ಕೈಯ್ಯಿಂದ ಕಾಲೆಳೆಸಿಕೊಳ್ಳುವಿರಿ,
ಬಿದ್ದು ಬಿದ್ದು ಮೂತಿ ಮಣ್ಣಾಗಿಸಿಕೊಳ್ಳುವಿರಿ.!.;-)
ಹ ಹ ಹ..:)
—————————-
hema:
ಪ್ರೀತಿಯ ರಂಜಿತ್,
ನಿಮ್ಮ ಕವಿತೆಗಳಂತು ನಿಮ್ಮಂತೆ ಸಕತ್,
ಬರುವುದಾದರೇ ನಿಮ್ಮಿಂದ ನಮಗೂ ಒಂದೆರೆಡು ಕವನ
ಕಾಲೆಳಿಸಿಕೊಳ್ಳೋಕು ರೆಡಿನಾನು ಸರೀನಾ….
—————————-
Ranjith:
ಈ ರಂಜಿತ್-ಸಕತ್ ಪ್ರಾಸ
ಬೇರೆ ಯಾರೋ ಬಳಸಿದ್ದಲ್ಲವೇ?
ನೀವೂ ಭಾಳ ಶಾಣ್ಯ ಇದೀರಲ್ಲ..
ಪ್ರಾಸ ಬಳಸಿ ಅವರ ನೆನಪು ಮಾಡಿಸಿ
ಕಾಲೆಳೆಸಿಕೊಳ್ಳುವ ಮಾತಾಡುತ್ತ,
ನನ್ನ ಕಾಲೆಳೆದೇಬಿಟ್ಟಿರಲ್ಲ..:)
—————————-
hema:
ಛೆ ನಿಮ್ಮ ಕಾಲು ಎಳೆಯಲಾದೀತೆ,
ನೋಯಿಸಿಕೊಳ್ಳಬೇಡಿ ಮನಸ,
ಇಷ್ಟಕ್ಕು ನಿಮಗೆ ಆಕೆಯ ನೆನಪಾಗಬೇಕೆಂದು,
ನಾನು ಪಡಬೇಕಾಗಿಲ್ಲ ಪ್ರಯಾಸ,
ದಿನವೂ ಆಳುತ್ತಿದ್ದಾಳೆ ಆಕೆ ನಿಮ್ಮ ಕನಸ…
—————————-
Ranjith:
ನಾನಾಗಬೇಕಂತಿದ್ದೆ ಕಾಳಿದಾಸ,
ಅನ್ನುತಿರುವಿರಲ್ಲ ನನ್ನನ್ನು ದೇವದಾಸ,
ಸಿದ್ದತೆ ಮಾಡಿಕೊಳ್ಳುತಿರುವೆವು
ನಾವಿಬ್ಬರೂ ಬದುಕನು ಗೆಲ್ಲಲು,
ನಿಮಗೆ ತಾಳ್ಮೆ ಇರಲಿ,
ದೇವತೆಗಳೆ ಕಾಯುತಿರುವರಲ್ಲ
—————————-
hema:
ನಿಮಗೆ ಆ ಹುಡುಗಿ ಸಿಗಲಿ ಎಂದು,
ನಮ್ಮಂತ ಗೆಳೆಯರು ಹರಸುತಿಹರು
ನಿಮ್ಮ ಹುಡುಗಿಗೆ ಬೇಗ ಸಿಗಲು ಹೇಳಿ
ಅಕ್ಷತೆ ಚೆಲ್ಲಲೆಂದು ಕಾದ ದೇವತೆಗಳೂ,
ಸ್ವರ್ಗದಲ್ಲಿ ನಿದ್ದೆ ಮಾಡುತಿಹರು…..
—————————-
Ranjith:
ಹರಸುವ ಗೆಳೆಯರ ಬಾಯಿಗೆ
ಜಗದ ಸಿಹಿಯೆಲ್ಲಾ ಸೇರಲಿ..
ನಿದ್ರಿಸುವ ದೇವತೆಗಳಿಗೆಲ್ಲ
ನೋವಿನ ಸೊಳ್ಳೆ ಕಚ್ಚಲಿ..:)

ನವಿಲುಗರಿಗೆ ಇಪ್ಪತ್ತು ಸಾವಿರ “ಹಿಟ್ಟುಗಳಂತೆ”?

27 ಆಗಸ್ಟ್

ಸ್ವಲ್ಪ ದಿನಗಳ ಹಿಂದೆ ಕಂಪ್ಯೂಟರ್ ಅಂದ್ರೆ ಏನು ಅಂತಾನೆ ಗೊತ್ತಿರಲಿಲ್ಲ…ಮೊದಲಿದ್ದಿದ್ದು ಒಂದು ಸೈಬರ್ .ಕೆffe ಆದರೂ ಕಂಪ್ಯೂಟರಿನ ಗಂಧಗಾಳಿ ನನಗೆ ತಿಳಿದಿರಲಿಲ್ಲ..ಕಾರಣ ಸರಿಯಾಗಿ sslc ಕೂಡ ಪಾಸ್ ಮಾಡಲಾಗದೆ ಬೆಂಗಳೂರಿನ ಬಸ್ಸು ಹತ್ತಿ ಮನೆಯಲ್ಲಿ ಹೇಳದೇ ಕೇಳದೆ ಬಂದವನು ನಾನು . ಬಾರು, ಹೋಟೆಲ್ಲು,ಗಾರ್ಮೆಂಟ್ಸು, ಸಿನಿಮಾ ಥಿಯೇಟರ್ರು, ಎಸ್ ಟಿ ಡಿ ಬೂತು,ಎಲ್ಲ ವೆರೈಟಿಗಳ ರುಚಿ ರುಚಿಸದಿದ್ದ ಕಾರಣ ಕೊನೆಗೆ ಒಂದು ಸೈಬರ್ ಅಲ್ಲಿ ಕೆಲ್ಸಕ್ಕೆ ಸೇರಿಕೊಂಡೆ..ಸರಿಯಾಗಿ ಮೊದಲು ಮೌಸ್ ಹಿಡಿಯೋಕು ಬರ್ತಿರ್ಲಿಲ್ಲ..ಸ್ವಲ್ಪ ಪೋಲಿಗೆಳೆಯರ ಸಹಕಾರದಿಂದ ಅಲ್ಪ ಸ್ವಲ್ಪ ಕಂಪ್ಯೂಟರ್ ಬಗ್ಗೆ ತಿಳಿದುಕೊಂಡಿದ್ದಾಯಿತು..ಒಂದು ಸಣ್ಣ officenalli ಕೆಲ್ಸಕೇ ಸೇರಿದ್ದಯಿತು..ಜಗತ್ತಿನ ಸಮಸ್ತ ಪೋಲಿ ವೆಬ್ ಸೈಟುಗಳನ್ನ ಹಂಟ್ ಮಾಡಿದ್ದಾಯಿತು….ಮೊದಲಿಂದಲೂ ಒದೋಕೆ ಬರಿಯೋಕೆ ಅಂದ್ರೆ ತುಂಬಾ ಇಷ್ಟ( ಆದರೂ ಎಸ್ ಎಸ್ ಎಲ್ ಸಿ fail ಆಗಿದ್ಯಾಕೊ?) ಹೀಗೆ ಪೋಲಿ ವೆಬ್ ಸೈಟುಗಳ ಹಂಟಿನಲ್ಲಿರುವಾಗಲೇ ಗೋಗಲ್ ಮಹಾಶಯನ ಸಹಕಾರದಿಂದ ದಟ್ಸ್ ಕನ್ನಡದ ಪರಿಚಯವಾಯಿತು..ಕಂಪ್ಯೂಟರಿನಲ್ಲಿ ಕನ್ನಡಾನು ಬರುತ್ತೆ ಅಂತ ಅವತ್ತೆ ನನಗೂ ತಿಳಿದಿದ್ದು..ಒಂದೇ ವಾರದಲ್ಲಿ ದಟ್ಸ್ ಕನ್ನಡವನ್ನ ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅಂದ್ರೆ ಅಲ್ಲಿರುವ ಎಲ್ಲಾ ಅಂಕಣಗಳ ಪರಿಚಯವಾಯಿತು…ಅಲ್ಲಿರುವ “ಕವನ ಸಿಂಚನ” ನನ್ನ ಅಚ್ಚುಮೆಚ್ಚಾಗಿತ್ತು. ಹೀಗೆ ಕವನಗಳನ್ನ ಓದೋವಾಗಲೇ ನಾನು ಕೂಡ ಯಾಕೆ ಟ್ರೈ ಮಾಡಬಾರದು ಅಂತ ತುಂಬ ಕಷ್ಟ ಪಟ್ಟು “ಅಮ್ಮ ” ಅಂತ ಒಂದು ಪುಟ್ಟ ಕವನ( ಅದನ್ನ ಕವನ ಅಂತ ಕರೆದಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೋರುತ್ತ) ಬರೆದು ಕಳಿಸಿಯೇ ಬಿಟ್ಟೆ ಕಳುಹಿಸಿದ ಮಾರನೆಯ ದಿನವೇ ದಟ್ಸ್ ಕನ್ನಡದಲ್ಲಿ ಪ್ರಕಟವಾಯಿತಲ್ಲ..! ಅವತ್ತು ಪುಟ್ಟ ಮಗುವಿನಂತೆ ಕುಣಿದಾಡಿಬಿಟ್ಟಿದ್ದೆ.. ..

ಅದಾದ ಮೇಲೆ ಹೀಗೆ ಅಲ್ಲೊಂದು ಇಲ್ಲೊಂದು ಕವನ(?)ಗಳನ್ನ ಬರೆದು ಎಲ್ಲಾ ವೆಬ್ ಸೈಟುಗಳಿಗೂ ಕಳಿಹಿಸುತ್ತಿದ್ದೆ..ಅದೇನ್ ಪಾಪ ಮಾಡಿದ್ವೊ ಆ ಸೈಟುಗಳು ಬರೆದಿದ್ದನ್ನೆಲ್ಲ ಪ್ರಕಟಿಸಿದವು..ತರಂಗದಲ್ಲಿ ಒಂದೆರೆಡು ಕವಿತೆ ಬಂದಿದ್ದಾಯಿತು ಸಂಜೆವಾಣಿ ನಲ್ಲಿ ಮತ್ತೆರೆಡು.ವಿಕ್ರಾಂತದಲ್ಲಿ ಇನ್ನೆರೆಡು..ಸದ್ಯಕ್ಕೆ ಈಗ ವಿಜಯ ಕರ್ನಾಟಕದ ಸಿಂಪ್ಲಿ ಸಿಟಿ ಪೇಜ್ ಗೆ ಬೇಜಾರಾದಗಲೆಲ್ಲ ಹನಿಗವನಗಳನ್ನ ಕಳುಹಿಸುತ್ತಿದ್ದೇನೆ..ನನ್ ಪುಣ್ಯಾನೋ ಅಥವ ವಿಜಯ-ಕರ್ನಾಟಕದ ಪಾಪ ನೋ ಕಳಿಸಿದ್ದನೆಲ್ಲ ಪ್ರಕಟಿಸುತ್ತಿದೆ..ಹೀಗೆ ಬ್ಲಾಗ್ ಲೋಕದ ಪರಿಚಯವಾಯಿತು..ನನ್ನ ಗುರುಗಳಾದ ತವಿಶ್ರೀ (ತಳಕು ಶ್ರೀನಿವಾಸ್) ನನಗೊಂದು ಚಂದನೆಯ ಬ್ಲಾಗು ಮಾಡಿಕೊಟ್ಟರು….ಬ್ಲಾಗು ಮಾಡಿ ತುಂಬಾ ದಿನಗಳಾದರು ಮೊದಲ ವರ್ಷ ಸುಮ್ಮನೆ ಕುಳಿತಿದ್ದೆ ೩ ಕವಿತೆಯನ್ನ ಬ್ಲಾಗಿನೊಳಗೆ ತುರುಬಿಕೊಂಡು!…ಹೀಗೆಯೇ ನನ್ನ ಗೆಳೆಯರಾದ ತುಂತುರು ಹನಿಗಳ ಶ್ರೀನಿಧಿ ಅಣ್ಣ..ಮೌನಗಾಳದ ಸುಶ್ರುತಣ್ಣ.. ಮಾತಿನಲ್ಲದ ಮೌನರಾಗದ ನನ್ನ ಪ್ರೀತಿಯ ಅಮರ್ ಅಣ್ಣ. ಯಾರಿಗೂ ಕಮ್ಮಿ ಇಲ್ಲದ ಕಲರವದ  ಸುಪ್ರೀತು..ಪ್ರೀತಿಯ ಗೆಳೆಯ ವಿಕಾಸವಾದದ ವಿಕಾಸ್ ಅದ್ಭುತವಾಗಿ ಬರೆಯುವ ಗೆಳತಿ ಮೃಗನಯನೀ,ಪರಿಸರಪ್ರೇಮಿ ಅರುಣ್, ದೇರಾಜೆ , ಸಿಂಧು ಅಕ್ಕ, ಗುರುಗಳಾದ ಮಣಿಕಾಂತ್,ನಾನಿನ್ನು ನೋಡಿರದ ಶಾಲಿನಿ, (ಡೆಸ್ಕು) ಲಕ್ಷ್ಮಿ( ಜಿಂದಗೀ ಕಾಲಿಂಗ್) ಶಂಕರ್(ಸಂಜೆಯ ರಾಗ) ಕುಂಟಿನಿ (ನನ್ fevorite) ಪ್ರಶಾಂತನ (ನನ್ನ ಕನಸು) ಜೋಗಿ ಮಾಮನ (ಜೋಗಿ ಮನೆ) ಪ್ರೀತಿಯ ರವಿ ಅಜ್ಜಿಪುರ ಅವರ (ನದಿಪ್ರೀತಿ) ವಿಜಯರಜ್ ಅವರ ( ಮನಸಿನ ಮರ್ಮರ) ನಮ್ಮಕ್ಕನ (ಖಾಜಾನೆ) ನಮ್ಮ ಅವಧಿ ನಮ್ಮ ಬನವಾಸಿ ಬಳಗ ಹೀಗೆ ಇವರೆಲ್ಲರ ಮತ್ತು ಹಲವಾರು ಅದ್ಭುತ ಬ್ಲಾಗುಗಳು ಕೆಲವೊಂದು ಸಲ ನನಗೆ ಹೊಟ್ಟೆಕಿಚ್ಚು ತರಿಸಿವೆ..ನಾನು ಈಗ ಏನಾದ್ರು ಬರಿಬೇಕು ಅಂತ ಯೋಚಿಸ್ತಿದ್ದೀನಿ..ಅಥವ ಬರೆದಿದ್ದೀನಿ ಅಂದ್ರೆ ಈ ಎಲ್ಲ ಗೆಳೆಯರ ಸಹಕಾರದಿಂದ..ಇವರೆಲ್ಲ ಒಂತರ ದ್ರೋಣಾಚಾರ್ಯರಿದ್ದ ಹಾಗೆ…ನನಗೇನು ಹೇಳಿಕೊಡದಿದರೂ ಎಲ್ಲಾ ಹೇಳಿಕೊಟ್ಟಿದ್ದಾರೆ..ಸರಿ ನನಗೆ ಹೀಗೆಲ್ಲ ಬರಿಯೋಕೆ ಸಂಕೋಚ ಆಗುತ್ತೆ .ಇದೇನು ಮಹಾನ್ ಸಾಧನೆಯಲ್ಲ….ಸಂಕೋಚ ಆಗುತ್ತೆ ಅನುವುದಕ್ಕಿಂತ ನನಗೆ  ನಾಜೂಕಾಗಿ ಬರಿಯೋದಕೆ ಸ್ವಲ್ಪ ಕಷ್ಟವಾಗ್ತಿದೆ..

ಯಾಕೊ ಗೊತ್ತಿಲ್ಲ ತುಂಬಾ ಜನ ನನ್ನನ್ನ ವಿಪರೀತ ಹಚ್ಚಿಕೊಂಡರು. ತುಂಬಾ ಇಷ್ಟಪಟ್ಟರು. ನಾನು ಬರೆದಿದ್ದನೆಲ್ಲ ಕವಿತೆ ಅಂತ ಬೆನ್ನು ತಟ್ಟಿದರು.ನನ್ನ ಸೋಮಾರಿತನಕ್ಕೆ ಉಗಿದು ಉಪ್ಪು ಹಾಕಿದರು..ಯಾವತ್ತು ಅವರನ್ನೆಲ್ಲ ಮರಿಯೊಲ್ಲ..ಅಮರ್ ಶ್ರೀನಿಧಿ ಯಾವತ್ತು ಮರೆಯಲಾರದವರು . ನನ್ನ ಸರಿ ತಪ್ಪು ತಿದ್ದಿದವರು..ಸರಿ ಬ್ಲಾಗಿಗೆ ಇಪ್ಪತ್ತು ಸಾವಿರ ಜನ ಭೇಟಿ ಕೊಟ್ಟಿದ್ದಾರೆ ಅಂತ ಇವತ್ತು ಗೊತ್ತಾಗಿ ಇದನ್ನೆಲ್ಲ ಬರಿಬೇಕು ಅಂತ ಅನಿಸಿತು ಅಷ್ಟೆ..ಮತ್ತೆ ಮೂವತ್ತು ಸಾವಿಅರ ಜನ ನನ್ನ ಬ್ಲಾಗಿಗೆ ಭೇಟಿ ಕೊಟ್ಟಾಗ ಮತ್ತಷ್ಟು ಬರಿತೀನಿ…ಅಲ್ಲಿವರೆಗೂ ನಾನು ಬರೆದಿದ್ದನ್ನೆಲ್ಲ ಓದುವ ಕರ್ಮ ನಿಮ್ಮದಾಗಲಿ

ಪ್ರೀತಿಯಿಂದ ನಿಮ್ಮ
ನವಿಲುಗರಿ ಹುಡುಗ ;)..

( ದಯವಿಟ್ಟು ನನ್ನ ಕನ್ನಡದಲ್ಲಿ ಏನಾದ್ರು ಅಲ್ಪ ಸ್ವಲ್ಪ ವ್ಯಾಕರಣ ದೋಷವಿದ್ದರೇ ಇಲ್ಲಿರುವ “ಉಗ್ರ ಕನ್ನಡ ಹೋರಾಟಗಾರರು” ನನ್ನ ಈ ಒಂದು ತಪ್ಪನ್ನ ಮನ್ನಿಸಬೇಕು)