ಯಾರಾದ್ರೂ ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ !

9 ಜನ

ಹೇಗಿದ್ದಿಯೋ ಒರಟ ? ಬಿಡೋ ನನಗೆ ಗೊತ್ತಿದೆ. ಯಾವುದೋ ಲೇಡೀಸ್ ಕಾಲೇಜ್ ಮುಂದೆ ನಿನ್ನ ಯಮಹ ಆರ್ ಎಕ್ಸ್ ಬೈಕಿನಲ್ಲಿ ರೌಂಡಿಂಗ್ ಮಾಡ್ತಿರ್ತಿಯ, ನೀನು ನಿನ್ನ ಆ ಡಬ್ಬಾ ಗಾಡಿ ನ ಓಡ್ಸೋ ಸ್ಪೇಡಿಗೇನೆ ಎಷ್ಟೋ ಹುಡುಗೀರ ಎದೆಯಲ್ಲಿ ಅವಲಕ್ಕಿ ಕುಟ್ಟುತಿರ್ತೀಯ, ಯಾವ ಹುಡುಗಿ ನೋಡೋಕೆ ವೈನಾಗಿದ್ದಾಳೆ ಅಂತ ಕಣ್ಣಲ್ಲೆ ಬೇಟೆಯಾಡುತಿರ್ತೀಯ, ನೋಡೋ ನಿನ್ನ ಎಲ್ಲಾ ದಶಾವತಾರಗಳನ್ನು ನಾನು ಬಲ್ಲೆ. ಆದರೆ ನಿನ್ನ ಆ ಅಮಾಯಕ? ಕಣ್ಣುಗಳಲ್ಲಿದೆಯಲ್ಲಾ ಆ ಅಮಾಯಕತೆ..! ನಿನ್ನೆಲ್ಲಾ ತರಲೆಗಳನ್ನ ಕ್ಷಮಿಸುವಂತೆ ಮಾಡುತ್ತೆ ಕಣೋ. ಎಷ್ಟು ಚೆಂದವಿದ್ದಾವೋ ನಿನ್ನ ಈ ಜಿಂಕೆ ಕಣ್ಣುಗಳು? ಒಂದೇ ಒಂದು ಸಲ ಮುತ್ತಿಡಲ? ಪ್ಲೀಸ್ ಕಣೋ. ಯಾಕೋ ಇಷ್ಟು ಹತ್ತಿರವಾಗಿ ಬಿಟ್ಟೆ ಬಿಟ್ಟಿರಲಾರದಷ್ಟು ?ಮುದ್ದು ಒರಟ, ಐ ಲವ್ ಯೂ ಗೊತ್ತ.

ಒಂದು ದಿನಾ ಆದ್ರು ತಲೆ ಬಾಚಿದ್ದಿಯೇನೊ ತರಲೆ? ಎಷ್ಟು ದಿನ ಆಯ್ತೊ ನಿನ್ನ ಕುರುಚಲು ಗಡ್ಡಗಳಿಗೆ ಬ್ಲೇಡು ತಾಗಿಸಿ? ಬೆಂಗಳೂರಿನ ಅಷ್ಟೂ ರಸ್ತೆಗಳನ್ನ ನಿನ್ನ ಹರಕಲು ಮುರುಕಲು ಜೀನ್ಸ್‌ಲ್ಲೆ ಗುಡಿಸಿ ಸ್ವಚ್ಚ ಮಾಡುತ್ತೀಯಲ್ಲೊ? ನೋಡೋ ನಿನಗೇ ಅಂತಾನೆ ಮಿಂಚಿಂಗ್ ಮಿಂಚಿಗ್ ಡ್ರೆಸ್ಸೆಲ್ಲ ಹಾಕೊಂಡು ಕ್ಲಾಸಿನ ಮೊದಲ ಬೆಂಚಲ್ಲೆ ನಿನ್ನ ಕಣ್ಣುಗಳ ಬೇಟೆಯಾಡಲು ಕುಳಿತರೆ, ನಿನೇನೋ ಆ ಕುಂದಾಪುರದ ಕೋಮಲಾಂಗಿ ಪಕ್ಕದಲ್ಲೆ ಕುಳಿತುಕೊಂಡು ಹಲ್ಲುಗಿಂಜುವುದು? ಅದು ಅಲ್ಲದೇ ನಿಂದೇನು ಆ ಹಿಸ್ಟರಿ ಟೀಚರಮ್ಮ ಬಾಯಿಬಡಕಿ ಆಂಟಿಯ ಜೊತೆ ಕಣ್ಣು ಸನ್ನೆ ಬಾಯಿ ಸನ್ನೆ? ನನಗೆ ತುಂಬಾ ಕೋಪ ಬರತ್ತೆ ಕಣೋ, ಆ ಕೋಪದಲ್ಲಿ ಹಂಗೆ ನಿನ್ನ ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸಿ ಹಾಗೆ ನಿನ್ನ ಕಣ್ಣುಗಳಿಗೆ ಲೊಚ್ಚ್ ಅಂತ ಒಂದು ಮುತ್ತು ಕೊಟ್ಟು ಬಿಡ್ತೀನಿ ನೋಡು.

ಎಷ್ಟು ಹುಡುಗೀರನ್ನ ನೋಡಿದ್ದೀಯ ನೀನು? ಅದಕ್ಕಿಂತ ಜಾಸ್ತಿನೇ ಜೊಲ್ಲು ಜೊಲ್ಲು ಹುಡುಗರನ್ನ ನಾನು ನೋಡಿದ್ದೀನಿ ಕಣೊ. ಆದರೆ ಯಾವತ್ತು ನಿನ್ನ ಹಾಗೆ ಅಮ್ಮಾ ತಾಯಿ ಅಂತ ಹೋಗಿಲ್ಲ ತಿಳ್ಕೋ. ಜೀವನ ಅಂದ್ರೆ ಒಂದು ಹುಡುಗಿಯ ತೋಳ ತೆಕ್ಕೆಯಲ್ಲಿ ಕರಗಿ ನೀರಾಗುವುದು ಅಂದುಕೊಂಡಿದ್ದೀಯೇನೊ ಬೆಪ್ಪ? ಎಷ್ಟು ದಿನ ನೀನು ಆ ಜೋಷ್ ನಲ್ಲಿರ್ತೀಯ ? ಎಷ್ಟು ದಿನ ನೀನು ಆ ಖುಷಿನಲ್ಲಿರ್ತೀಯ? ಇವೆಲ್ಲ ನೀರ ಮೇಲಿನ ಗುಳ್ಳೆಗಳು ಕಣೊ. ಬಾ ಜೀವನ ಅಂದ್ರೆ ನಾನು ನಿನಗೆ ಹೇಳಿ ಕೊಡ್ತೀನಿ, ನೀನು ನನಗೆ ಹೇಳಿ ಕೊಡು. ಜೀವನ ಪೂರ್ತಿ ನಾವಿಬ್ರೂ ಜೊತೆಯಾಗಿರಬಹುದು ಕಣೊ.ನಿನ್ನೆಲ್ಲ ತರಲೆ ತಾಪತ್ರಯಗಳ ಹೊರತಾಗಿಯೂ.

ನಿಜ ಹೇಳೋ ನನಗೇನಾಗಿದೆ? ಹಿಸ್ಟರಿ ಟೀಚರಮ್ಮ ತರ ಗುಂಡುಗುಂಡಾಗಿದ್ದೀನ? ಅಥವ ನಿನ್ನ ಕುಂದಾಪುರದ ಕೋಮಲಾಂಗಿ ತರ ಸಣಕಲು ಬಡಕಲು ಮೇಕೆ ತರ ಇದ್ದೀನ? ಒಂದು ಸಲ ನೋಡೊ ನನ್ನ , ಸುಮ್ಮನೆ ನನ್ನ ಮುಟ್ಟಬೇಕೆಂದರೂ ನೀನು ಕೈತೊಳೆದು ಮುಟ್ಟಬೇಕು ಕಣೊ ಹಾಗಿದ್ದೀನಿ. ಜೊತೆಗೆ ನಿನಗೇ ಅಂತಾನೆ ಜೋಪಾನವಾಗಿಟ್ಟುಕೊಂಡಿರುವ ಬಂಗಾರದಂತಹ ಹೃದಯ..! ಆದರೆ ನೀನು? ಮುಟ್ಟಿ ಕೈತೊಳೆದುಕೊಳ್ಳಬೇಕು ಹಾಗಿದ್ದೀಯ ಒರಟ, ನೋಡು ಪ್ರೀತಿಗೆ ಬಣ್ಣದ ಹಂಗಿಲ್ಲ ಕಣೊ, ನಿನ್ನ ಒರಟುತನ, ನಿನ್ನ ಸೋಮಾರಿತನ, ನಿನ್ನ ಅಲೆಮಾರಿತನ, ನಿನ್ನ ಲೋಲುಪತನ ನಿನ್ನ ಹೆಣ್ಣುಬಾಕತನ, ಇದ್ಯಾವುದು ನಿನ್ನ ಮೇಲಿರುವ ನನ್ನ ಆರಾಧನಾಭಾವವನ್ನ ಕಡಿಮೆಮಾಡದು ಕಣೊ . ನನಗೆ ಬೇಕೆಂದರೆ ಸಾಲು ಸಾಲು ಜೊಲ್ಲು ಮುಖದ ಹುಡುಗರನ್ನ ಸಾಲು ಸಾಲಾಗಿ ನಿಲ್ಲಿಸ್ತೀನಿ ಕಾಲೇಜಿನ ಕಾಂಪೌಂಡಿನ ಮುಂದೆ. ಆದರೆ ಅವರ ಕಣ್ಣುಗಳಲ್ಲಿ ನನ್ನ ಚಿತ್ರ ಕಾಣೊಲ್ಲಗೊತ್ತ. ಅದು ನಿನ್ನ ಕಣ್ಣುಗಳಲ್ಲಿ ಮಾತ್ರ ಕಣೋ. ಈ ಸಲದ ನಿನ್ನ ಯಮಹ ಬೈಕಿನ ಸಂಜೆಯ ಹುಡುಗಿಯರ ಕಾಲೇಜಿನ ರೌಂಡಿಂಗ್ಸ್ ಗೆ ನಾನು ಜೊತೆಯಾಗಿರ್ತೀನಿ. ನೋಡೋಣ ಅದ್ಯಾರು ನಿನ್ನ ಈ ಕೋತಿ ಮೂತಿಗೆ ಮರುಳಾಗ್ತಾರೆ ಅಂತ..ಯಾರಾದ್ರು ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ. ನೀನು ಇಷ್ಟೊಂದು ಒರಟ ಆದ್ರೆ ನಾನಾಗಬಾರದೇನೊ? ಆದ್ರೆ ನೋಡೊ ಮನಸ್ಸು ಮಾತ್ರ ನವಿಲುಗರಿಯ ಹಾಗೇನೆ ಗೊತ್ತ. ಒಂದು ಸಲ ಸುಮ್ಮನೆ ಈ ಎದೆಯೊಳಗೆ ಬಾ…ನಿನ್ನ ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತೀನಿ.ನೀನು ಅಲ್ಲಿರುವ ನಿನ್ನದೇ ಹಾಡುಗಳನ್ನ ನನ್ನ ರಾಗದಲ್ಲೇ ಹಾಡುವಂತೆ. ಜಗತ್ತಿಗೆಲ್ಲ ಪ್ರೇಮಗೀತೆ ಅಮಲು ಹತ್ತಿಕೊಳ್ಳುವಂತೆ ಮಾಡೋಣ. ಏನಂತೀಯೊ ಓರಟ?

15 Responses to “ಯಾರಾದ್ರೂ ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ !”

  1. Inchara ಜನವರಿ 10, 2009 at 11:14 ಫೂರ್ವಾಹ್ನ #

    ತುಂಬಾ ಚೆನ್ನಾಗಿ ಬರಿತೀರಿ ಸೋಮು ಅವರೇ. ವಾಕ್ಯಗಳನ್ನು ತುಂಬಾ ತಮಾಷೆಯಾಗಿಯೂ ಅದರಲ್ಲಿ ಅರ್ಥ ಇರುವ ಹಾಗೆಯೂ ನೋಡಿಕೊಂಡು ಹೇಗೆ ಬರೀತೀರೋ ನಾ ಕಾಣೆ. ನಾನಂತೂ ನಿಮ್ಮ ಬ್ಲಾಗ್‌ನಲ್ಲಿರುವುದನ್ನು ಒಂದೂ ಬಿಡದೆ ಓದುತ್ತೇನೆ. ಆದರೆ ನನ್ನದು ಇದು ಮೊದಲ ಕಮೆಂಟ್. ನಿಮ್ಮ ಪರಿಚಯ ಮಾಡಿಕೊಂಡ ಬಗೆಯೂ ಸೂಪರ್…

  2. neera hani ಜನವರಿ 11, 2009 at 12:38 ಅಪರಾಹ್ನ #

    very well written blog.
    keep up the good work

  3. rohini ಜನವರಿ 12, 2009 at 7:48 ಫೂರ್ವಾಹ್ನ #

    somanna adeshtu sala odiddini gotta. ninu hudga hogi hudugi yavaga adiyo yeshtu hotte uri kano ninage ninu baiyo riti nodi nagu bantu kano

    ನಿನ್ನ ಕುಂದಾಪುರದ ಕೋಮಲಾಂಗಿ ತರ ಸಣಕಲು ಬಡಕಲು ಮೇಕೆ yari make
    nanagottu hela beda alva

    innu bari somanna

  4. ಕವನ ಹಿರೇಮಠ್ ಜನವರಿ 12, 2009 at 3:11 ಅಪರಾಹ್ನ #

    ಮೊದಲು ಈ ಪತ್ರವನ್ನ ಓದಿದಾಗ ಯಾವುದೋ ಹುಡುಗಿಯೇ ಬರೆದಿರಬೇಕು ಅಂದುಕೊಂಡೆ…ಆಮೇಲೆ ನಿಮ್ಮ ಬಗ್ಗೆ ತಿಳಿದುಕೊಂಡೆ..ಹುಡುಗಿಯರ ಭಾವನೆಗಳನ್ನೇ ತುಂಬಾ ಪತ್ರಗಳಲ್ಲಿ ಹೇಳಿದ್ದೀರಲ್ಲವ ಇದು ಹೇಗೆ ಸಾದ್ಯ? ತುಂಬ ಅದ್ಭುತ ಬರಹ ಅಂತ ಒಪ್ಪಿಕೊಳ್ಳಲು ಕಷ್ಟವಾದರೂ ಒಪ್ಪಿಕೊಳ್ಳದೇ ಇರೋಕು ಕೂಡ ನನಗೆ ಸಾದ್ಯವಾಗುತ್ತಿಲ್ಲ ! ಒಂದೊಳ್ಳೆ ಬ್ಲಾಗನ್ನ ಪರಿಚಯಿಸಿದ ಕೆಂಡಸಂಪಿಗೆ ಗೆ
    ಥಾಂಕ್ಸ್ ! ಮತ್ತೆ ನಿಮಗೊಂದು ದೊಡ್ಡ ಥ್ಯಾಂಕ್ಸ್ !

  5. Prasanna ಜನವರಿ 15, 2009 at 5:59 ಅಪರಾಹ್ನ #

    Somu super kano…inta bhavaneya hudgiru iglu irtara??? Anta Hudgine ninge sigli kano:)

  6. ವಿಕಾಸ್ ಹೆಗಡೆ ಜನವರಿ 16, 2009 at 7:56 ಫೂರ್ವಾಹ್ನ #

    superro superru. sakhath ishta aaythu .

  7. Harsha ಜನವರಿ 19, 2009 at 8:24 ಅಪರಾಹ್ನ #

    tumba chenaag ide.. 🙂
    liked all ur old posts under “love cheeti”
    nice work.. hinge baritaane iri… 🙂

  8. prathianil ಜನವರಿ 27, 2009 at 5:23 ಅಪರಾಹ್ನ #

    ??????????????

  9. Puneeth ಫೆಬ್ರವರಿ 7, 2009 at 4:28 ಅಪರಾಹ್ನ #

    Hey,nimma luv cheeti chennagide kanri.,..

    -nimma ‘haagesummane’ puneeth

  10. champu ಮಾರ್ಚ್ 25, 2009 at 4:55 ಅಪರಾಹ್ನ #

    ನಿನ್ನ ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತೀನಿ.ನೀನು ಅಲ್ಲಿರುವ ನಿನ್ನದೇ ಹಾಡುಗಳನ್ನ ನನ್ನ ರಾಗದಲ್ಲೇ ಹಾಡುವಂತೆ. ಜಗತ್ತಿಗೆಲ್ಲ ಪ್ರೇಮಗೀತೆ ಅಮಲು ಹತ್ತಿಕೊಳ್ಳುವಂತೆ ಮಾಡೋಣ. ಏನಂತೀಯೊ ಓರಟ?

    Simply superb 🙂

  11. Lekhak ಮಾರ್ಚ್ 31, 2009 at 9:30 ಅಪರಾಹ್ನ #

    Nija nija nanu varatane……………..
    ಯಾರಾದ್ರು ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ. edondu line nodidre tiliyutte kane ninage nanna pritiso ella hakkide anta.Sanje collage munde kayta yirtine bandbidu hage summane vandu round tirugadikondu barona.Nanu node bidteni estu janara kannu kittu hakteya anta……….

  12. Somu ಸೆಪ್ಟೆಂಬರ್ 8, 2009 at 7:40 ಅಪರಾಹ್ನ #

    nice one Somu… this is also a person by name Somu. glad to know you.

  13. Priya ಸೆಪ್ಟೆಂಬರ್ 16, 2009 at 8:42 ಫೂರ್ವಾಹ್ನ #

    Somu next article plzzzzzzzzz we r waiting!!!!

  14. ಅನಾಮಿಕ ಸೆಪ್ಟೆಂಬರ್ 9, 2015 at 11:18 ಫೂರ್ವಾಹ್ನ #

    Tumba tumba tumba superrrrrrrrr

  15. vinutha ಏಪ್ರಿಲ್ 6, 2017 at 6:39 ಫೂರ್ವಾಹ್ನ #

    Superb … you using such wonder words to describe beauty of girls

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: